ಕ್ರೀಡಾ ಸಮ್ಮೇಳನದ ಪೂರ್ವಭಾವಿ ತಯಾರಿ ಸಭೆ
ಉಡುಪಿ: ಕ್ರೀಡೆ ಮನಸ್ಸು ಮನಸ್ಸುಗಳ ನಡುವಿನ ಕೀಳರಿಮೆಯನ್ನು ನಾಶ ಮಾಡುತ್ತದೆ, ಭಾವನಾತ್ಮಕ ಸಂಬಂಧಗಳಿಗೆ ಭದ್ರ ಬುನಾದಿಯನ್ನು ಮೂಡಿಸುತ್ತದೆ ಹಾಗೆಯೆ ವ್ಯಕ್ತಿ ವ್ಯಕ್ತಿಗಳ ನಡುವಿನ ಸಾಮಾಜಿಕ ಅಂತರವನ್ನು ಕಡಿಮೆ ಮಾಡುತ್ತದೆ ಹಾಗು ಇಡೀ ದೇಶದ ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಬೇಕಾಗಿರುವ ಸಂಕಲ್ಪ ಶುದ್ಧಿಯನ್ನು ಕ್ರೀಡೆಯಲ್ಲಿ ಅರಸುವಂತಹ ನೂತನ ಪ್ರಯತ್ನವೇ ಕ್ರೀಡಾ ಸಮ್ಮೇಳನದ ಪರಿಕಲ್ಪನೆ ಎಂದು ಗುರ್ಮೆ ಸುರೇಶ್ ಶೆಟ್ಟಿ ಅಭಿಮತ ವ್ಯಕ್ತ ಪಡಿಸಿದರು. ಉಡುಪಿ ಅಜ್ಜರಕಾಡು ಮೈದಾನದಲ್ಲಿ ಉಡುಪಿ ಜಿಲ್ಲಾ ಕ್ರೀಡಾ ಭಾರತಿ ಆಶ್ರಯದಲ್ಲಿ ಶಾಸಕ ಕೆ,ರಘುಪತಿ ಭಟ್ ನೇತೃತ್ವದಲ್ಲಿ […]
ಬ್ರಹ್ಮಾವರ: ಪದ್ಮಾವತಿ ಎಂ. ಶೆಟ್ಟಿಗಾರ್ ನಿಧನ
ಬ್ರಹ್ಮಾವರ: ಯಕ್ಷಗಾನ ಕಸೆಸೀರೆ ನೆಯ್ಗೆಗೆ ರಾಷ್ಟ್ರ ಪ್ರಶಸ್ತಿ ಪಡೆದಿದ್ದ ದಿ. ಬಿ.ಮಂಜುನಾಥ ಶೆಟ್ಟಿಗಾರ್ ಅವರ ಧರ್ಮಪತ್ನಿ ಪದ್ಮಾವತಿ ಎಂ.ಶೆಟ್ಟಿಗಾರ್ (86) ಅವರು ಅಸೌಖ್ಯದಿಂದ ಮಂಗಳವಾರ ಮುಂಜಾನೆ ಬ್ರಹ್ಮಾವರ ಇಂದಿರಾನಗರದ ತಮ್ಮಸ್ವಗೃಹದಲ್ಲಿ ನಿಧನರಾದರು. ಅವರು ಹಿರಿಯ ಪತ್ರಕರ್ತ ಬಿ.ಬಿ. ಶೆಟ್ಟಿಗಾರ್ ಸಹಿತ ನಾಲ್ವರು ಪುತ್ರರು, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.
ಮಣಿಪಾಲ: ಉಚಿತ ನೇತ್ರ ತಪಾಸಣಾ ಶಿಬಿರ ಉದ್ಘಾಟನೆ
ಮಣಿಪಾಲ: ದಿಯಾ ಜ್ಯೋತಿ ಫೌಂಡೇಶನ್ ಮಣಿಪಾಲ ಇದರ ಆಶ್ರಯದಲ್ಲಿ ನೇತ್ರಸಂಗಮ ಐ ಕೇರ್ ಆಂಡ್ ಲೇಸರ್ ಸೆಂಟರ್ ಮಣಿಪಾಲ ಹಾಗೂ ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಒಪ್ಟೊಮೆಟ್ರಿ ವಿಭಾಗದ ಜಂಟಿ ಸಹಯೋಗದೊಂದಿಗೆ ಆರ್ ಎಸ್ ಬಿ ಸಭಾಭವನದಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು. ಉಡುಪಿ ನಗರಸಭೆಯ ಅಧ್ಯಕ್ಷೆ ಸುಮಿತ್ರಾ ಆರ್ ನಾಯಕ್ ಶಿಬಿರಕ್ಕೆ ಚಾಲನೆ ನೀಡಿ ಶುಭಹಾರೈಸಿದರು. ಬಂಟಕಲ್ಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಶಶಿಧರ ವಾಗ್ಲೆ, ಮಣಿಪಾಲ ನೇತ್ರಸಂಗಮದ ಹೆಸರಾಂತ […]
ಓಮಿಕ್ರಾನ್ ವೈರಸ್ ಭೀತಿ: ಡಬ್ಲ್ಯುಎಚ್‌ಓ ವರದಿ ಆಧರಿಸಿ ನಿಯಂತ್ರಣ ಕ್ರಮ; ಸಚಿವ ಡಾ.ಕೆ. ಸುಧಾಕರ್
ಬೆಂಗಳೂರು: ಓಮಿಕ್ರಾನ್ ವೈರಸ್ ತೀವ್ರತೆ ಮತ್ತು ಪರಿಣಾಮಗಳ ಕುರಿತು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ) ವರದಿ ಪ್ರಕಟವಾದ ಬಳಿಕವೇ ರಾಜ್ಯದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳ ಕುರಿತು ನಿರ್ಧರಿಸಲಾಗುವುದು ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು. ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ತಳಿಯ ವೈರಾಣುವಿನ ಹರಡುವಿಕೆ ಮತ್ತು ಅದರಿಂದ ಆರೋಗ್ಯದ ಮೇಲೆ ಆಗುವ ಹಾನಿ ಕುರಿತು ಈವರೆಗೂ ಅಧ್ಯಯನ ವರದಿ ಪ್ರಕಟವಾಗಿಲ್ಲ. ಡಿಸೆಂಬರ್ 1ರ ವೇಳೆಗೆ ಡಬ್ಲುಎಚ್‌ಓ ಅಧ್ಯಯನ ವರದಿ ಪ್ರಕಟವಾಗುವ ನಿರೀಕ್ಷೆ ಇದೆ. ಆ […]
ಉಡುಪಿ: ಕೋವಿಡ್ ನಿಯಮ ಉಲ್ಲಂಘಿಸಿ ಮೆರವಣಿಗೆ; ಪ್ರಕರಣ ದಾಖಲು
ಉಡುಪಿ: ಯಾವುದೇ ಪೂರ್ವಾನುಮತಿ ಇಲ್ಲದೆ ಕೋವಿಡ್-19 ನಿಯಮಗಳನ್ನು ಉಲ್ಲಂಘಿಸಿ ಮೆರವಣಿಗೆ ನಡೆಸಿದ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪಕ್ಷದ 7ನೇ ಜಿಲ್ಲಾ ಸಮ್ಮೇಳನ ಸಭೆ ಆಯೋಜಕರ ಮೇಲೆ ಪ್ರಕರಣ ದಾಖಲಾಗಿದೆ. ನ. 28ರಂದು ಸಿಪಿಐ(ಎಂ) ಪಕ್ಷದ 7ನೇ ಜಿಲ್ಲಾ ಸಮ್ಮೇಳನ ಸಭೆ ನಡೆಸಲು ಮಾತ್ರ ನಗರಸಭೆ ಅನುಮತಿ ನೀಡಿತ್ತು. ಆದರೆ, ಆಯೋಜಕರು ಅಂದು ಬೆಳಿಗ್ಗೆ 11 ಗಂಟೆಗೆ ಯಾವುದೇ ಪೂರ್ವಾನುಮತಿ ಇಲ್ಲದೆ ಕೋವಿಡ್-19 ನಿಯಮಗಳನ್ನು ಉಲ್ಲಂಘನೆ ಮಾಡಿ ಉಡುಪಿ ಬೋರ್ಡ್‌ಹೈಸ್ಕೂಲ್‌ನಿಂದ ಬ್ರಹ್ಮಗಿರಿ ವೃತ್ತದ ತನಕ ಮೆರವಣಿಗೆ ನಡೆಸಿದ್ದರು. ಇದರಲ್ಲಿ ಕೆಲವರು […]