ನದಿ ನೀರಿನಲ್ಲಿ ಮುಳುಗಿಸಿ ಮರಳು ಗುತ್ತಿಗೆದಾರನ ಹತ್ಯೆ ಯತ್ನ: ದೂರು ದಾಖಲು
ಬ್ರಹ್ಮಾವರ: ಮರಳು ಗುತ್ತಿಗೆದಾರನೋರ್ವನನ್ನು ನದಿಯಲ್ಲಿ ಮುಳುಗಿಸಿ ಹತ್ಯೆ ಮಾಡಲು ವಿಫಲಯತ್ನ ನಡೆಸಿದ ಘಟನೆ ಬ್ರಹ್ಮಾವರ ತಾಲೂಕು ಹಾರಾಡಿ ಗ್ರಾಮದ ಸ್ವರ್ಣ ನದಿ ತೀರದ ಕುಕ್ಕುಡೆ ಭಜನಾ ಮಂದಿರದ ಬಳಿ ನಡೆದಿದೆ. ಕಾರ್ಕಳ ಇನ್ನಾ ಗ್ರಾಮದ ಮೈಕ್ರೋ ಇನ್ ಸಮೀಪದ ಕೊರಗ ಕಾಲೊನಿ ನಿವಾಸಿ ಕೃಷ್ಣ ಕೊರಗ (38) ಎಂಬವರು ಪರಿಶಿಷ್ಟ ಜಾತಿ ಮತ್ತು ಪಂಗಡ ಕೋಟಾದಡಿಯಲ್ಲಿ ಮರಳುಗಾರಿಕೆ ನಡೆಸಲು ಪರವಾನಿಗೆ ಪಡೆದುಕೊಂಡಿದ್ದಾರೆ. ಅದರಂತೆ ಮರಳುಗಾರಿಕೆ ನಡೆಸಲು ಬ್ರಹ್ಮಾವರ ಹಾರಾಡಿ ಗ್ರಾಮದ ಸ್ವರ್ಣ ನದಿ ತೀರದ ಕುಕ್ಕುಡೆ ಭಜನಾ […]
ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಯುವತಿ ಮೃತ್ಯು
ಬಂಟ್ವಾಳ: ಯುವತಿಯೋರ್ವಳು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಮೃತಪಟ್ಟ ಘಟನೆ ಬಂಟ್ವಾಳ ಸಜೀಪ ಮೂಡಗ್ರಾಮದ ಕಾರಾಜೆ ಎಂಬಲ್ಲಿ ನಡೆದಿದೆ. ಕಾರಾಜೆ ನಿವಾಸಿ ಲಿಂಗಪ್ಪ ಮೂಲ್ಯರ ಪುತ್ರಿ ರಶ್ಮಿತಾ (24) ಮೃತ ದುರ್ದೈವಿ. ಇವರು ಇಂದು ಬೆಳಿಗ್ಗೆ ದೇವರ ಪೂಜೆಗಾಗಿ ಹೂ ಕೊಯ್ಯಲು ಹೋಗಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಪು: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು
ಉಡುಪಿ: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಮಲ್ಲಾರು ಗ್ರಾಮದ ಕುಡ್ತಿಮಾರು ಉರ್ದು ಶಾಲೆಯ ಬಳಿ ಇಂದು ಮುಂಜಾನೆ ನಡೆದಿದೆ. ಮೃತರನ್ನು ಮಲ್ಲಾರು – ಫಕೀರಣಕಟ್ಟೆ ಎಂ.ಜೆ.ಎಂ ಮಸೀದಿ ಹತ್ತಿರದ ನಿವಾಸಿ ಅಬ್ದುಲ್ ರಜಾಕ್ (48) ಎಂದು ಗುರುತಿಸಲಾಗಿದೆ. ರಜಾಕ್ ಇಂದು ಬೆಳಿಗ್ಗೆ 6.30ರಿಂದ 8 ಗಂಟೆಯ ನಡುವೆ ರೈಲ್ವೇ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಉಡುಪಿಯಿಂದ ಮಂಗಳೂರು ಕಡೆಗೆ ಹೋಗುವ ರೈಲು ಡಿಕ್ಕಿ ಹೊಡೆದಿದ್ದು, ಇದರಿಂದ ಗಂಭೀರ ಗಾಯಗೊಂಡ ರಜಾಕ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ […]
ಹೆಬ್ರಿ: ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರುಪಾಲು
ಹೆಬ್ರಿ: ಹೊಳೆಗೆ ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರು ಪಾಲಾದ ಘಟನೆ ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮದ ಬಟ್ರಾಡಿ ಎಂಬಲ್ಲಿ ಶುಕ್ರವಾರ ಸಂಭವಿಸಿದೆ. ನೀರುಪಾಲಾದವರನ್ನು ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಸುದರ್ಶನ್ (16), ಸೋನಿತ್ (17) ಹಾಗೂ ಕಿರಣ್ (16) ಎಂದು ಗುರುತಿಸಲಾಗಿದೆ. ಈಜಲು ಹೋದ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿದ್ದು, ಈವರೆಗೂ ವಿದ್ಯಾರ್ಥಿಗಳು ಪತ್ತೆಯಾಗಿಲ್ಲ. ಹೆಬ್ರಿ ತಹಶೀಲ್ದಾರ್ ಪುರಂದರ್ ಕೆ, ಹೆಬ್ರಿ ಸಬ್ ಇನ್ಸ್ ಪೆಕ್ಟರ್ ಮಹೇಶ್, ಕಂದಾಯ ನಿರೀಕ್ಷಕ ಹಿತೇಶ್ […]
ರಂಗಭೂಮಿಯ ಹಿರಿಯ ಸಂಗೀತ ನಿರ್ದೇಶಕ ಕೆ.ರಾಘವೇಂದ್ರ ಭಟ್ ನಿಧನ
ಉಡುಪಿ: ರಂಗಭೂಮಿಯ ಹಿರಿಯ ಸಂಗೀತ ನಿರ್ದೇಶಕ ಕೆ.ರಾಘವೇಂದ್ರ ಇಂದು (ನ.26) ಬೆಳಿಗ್ಗೆ 7.30ಕ್ಕೆ ಸ್ವಗೃಹದಲ್ಲಿ ವಯೋಸಹಜ ಅಲ್ಪಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ರಂಗಭೂಮಿ ರಂಗಭೂಮಿ (ರಿ.) ಉಡುಪಿ ತಂಡದ ಬಹಳಷ್ಟು ನಾಟಕಗಳಿಗೆ ಸಂಗೀತ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ರಂಗಭೂಮಿ ತಂಡ ಭಾಗವಹಿಸಿದ್ದ ಹಲವಾರು ನಾಟಕ ಸ್ಪರ್ಧೆಗಳಲ್ಲಿ ಸಂಗೀತಕ್ಕೆ ಬಹುಮಾನ ಇವರಿಗೆನೇ ಮೀಸಲು ಎಂಬಂತಿತ್ತು. ಒಂದು ಕಾಲದಲ್ಲಿ ಉಡುಪಿಯ ಪರಿಸರದಲ್ಲಿ ಪ್ರಖ್ಯಾತಿಗಳಿಸಿದ್ದ “ರಂಗಭೂಮಿ” ಆರ್ಕೆಸ್ಟ್ರಾ ತಂಡವನ್ನು ಮುನ್ನಡೆಸಿದ್ದರು. ಹಲವು ಬಾರಿ ರಂಗಭೂಮಿಯ ನಾಟಕ ಸ್ಪರ್ಧೆಗೆ ತೀರ್ಪುಗಾರರಾಗಿದ್ದರು. ಈ ಹಿಂದೆ […]