ಮಲ್ಪೆ: ನಾಳೆ (ನ.14) ಅಡ್ವೆಂಚರ್‌ ವಾಟರ್‌ ಸ್ಪೋರ್ಟ್ಸ್ ನ ವರ್ಷಾಚರಣೆ ಸಂಭ್ರಮ

ಉಡುಪಿ: ಅಡ್ವೆಂಚರ್‌ ವಾಟರ್‌ ಸ್ಪೋರ್ಟ್ಸ್, ಮಲ್ಪೆ ಬೀಚ್ ಇದರ ವಿಂಚ್ ಪ್ಯಾರ ಸೈಲಿಂಗ್ ಬೋಟ್ ನ ವರ್ಷಾಚರಣೆ ಸಮಾರಂಭವು ಇದೇ ನ.14 ರಂದು ಸಂಜೆ 4.30ಕ್ಕೆ ಮಲ್ಪೆ ಕಡಲ ಕಿನಾರೆಯಲ್ಲಿ ನಡೆಯಲಿದೆ. ವರ್ಷಾಚರಣೆ ಪ್ರಯುಕ್ತ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯ 100ಕ್ಕೂ ಅಧಿಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ಗಾಂಧಿ ಶತಾಬ್ಧ ಆಂಗ್ಲಮಾಧ್ಯಮ ಶಾಲೆಗೆ ಪೀಠೋಪಕರಣ ವಿತರಣೆ ಹಾಗೂ ಸ್ಥಳೀಯ ಯುವ ಸಾಧಕರಿಗೆ ಸನ್ಮಾನ ಮಾಡುವ ಕಾರ್ಯಕ್ರಮ ಕೂಡ ಜರುಗಲಿದೆ. ಉಡುಪಿಯ ಜನಪ್ರಿಯ ಶಾಸಕ ಕೆ. ರಘುಪತಿ ಭಟ್ […]

ಎಲೆಕ್ಟ್ರಾನಿಕ್ಸ್ ವಸ್ತು, ಮದ್ಯ, ಜವಳಿ ಉತ್ಪನ್ನಗಳ ದರ ಮತ್ತಷ್ಟು ದುಬಾರಿ..!!

ನವದೆಹಲಿ: ಎಲೆಕ್ಟ್ರಾನಿಕ್ಸ್ ವಸ್ತುಗಳು, ಮದ್ಯ ಮತ್ತು ಜವಳಿ ಉತ್ಪನ್ನಗಳ ದರ ಶೀಘ್ರದಲ್ಲೇ ಶೇಕಡ 8 ರಿಂದ 10 ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಉತ್ಪಾದನಾ ವೆಚ್ಚದಲ್ಲಿ ಏರಿಕೆಯಾಗಿರುವ ಕಾರಣ ಈ ವಲಯದ ಉತ್ಪಾದಕ ಕಂಪನಿಗಳು ವೆಚ್ಚವನ್ನು ಗ್ರಾಹಕರಿಗೆ ವರ್ಗಾಯಿಸಲು ನಿರ್ಧರಿಸಿವೆ. ಇದರ ಪರಿಣಾಮ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಲಿದೆ.ಕಿರಾಣಿ ಅಗತ್ಯ ವಸ್ತುಗಳು, ವೈಯಕ್ತಿಕ ಆರೈಕೆ ಉತ್ಪನ್ನಗಳು, ಪ್ಯಾಕೇಜ್ ಮಾಡಿದ ಆಹಾರಗಳು ಮತ್ತು ಊಟವನ್ನು ಮಾರಾಟ ಮಾಡುವ ಕಂಪನಿಗಳು ಈಗಾಗಲೇ ಬೆಲೆಗಳನ್ನು ಹೆಚ್ಚಿಸಿವೆ. ಹೊಸ ವರ್ಷದ ವೇಳೆಗೆ […]

ಕುಂದಾಪುರದ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ ಉದ್ಘಾಟನೆ

ಕುಂದಾಪುರ: ಇಲ್ಲಿನ ಶ್ರೀ ವೆಂಕಟರಮಣ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಸತ್ ನ ಉದ್ಘಾಟನಾ ಸಮಾರಂಭವು ಕಾಲೇಜಿನ ಸಭಾಂಗಣದಲ್ಲಿ ಜರುಗಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಗಣೇಶ್ ಮೊಗವೀರ ಮಾತನಾಡಿ, ವಿದ್ಯಾರ್ಥಿಗಳಾದ ನೀವೆಲ್ಲರೂ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು‌ ಎಂದರು. ಸಮಾರಂಭದಲ್ಲಿ ಉಪಸ್ಥಿತರಿರುವ ಟ್ರೈನಿಂಗ್ ಆಫೀಸರ್ ಅಭಿಲಾಷ್ ಕ್ಷತ್ರೀಯ ಮಾತನಾಡಿ, ಎಲ್ಲರೂ ಒಗ್ಗಟ್ಟಿನಿಂದ ಹಾಗೂ ಆಸಕ್ತಿಯಿಂದ ಕೂಡಿ ಕೆಲಸಮಾಡಬೇಕು ಎಂದು ಹೇಳಿದರು. ಉಪಸಂಯೋಜಕಿ ಮಮತಾ ರೈ ಮಾತನಾಡಿ, ಬದುಕು ಎನ್ನುವ ಯುದ್ಧದಲ್ಲಿ ತೇಜಸ್ಸು, ಧೈರ್ಯ, ಸ್ಥೈರ್ಯ, ಸ್ವಾಭಿಮಾನ […]

ರಾಜ್ಯದ ಏಳು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಣೆ; ನ.13ರ ನಂತರ ಮಳೆ ತಗ್ಗುವ ಮುನ್ಸೂಚನೆ

ಬೆಂಗಳೂರು: ತಮಿಳುನಾಡು ಹಾಗೂ ಆಂಧ್ರ ಪ್ರದೇಶ ಕರಾವಳಿಗಳಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪ್ರಬಲತೆ ತಗ್ಗಿರುವುದರಿಂದ ರಾಜ್ಯದಲ್ಲಿ ನ.13ರಿಂದ ಮಳೆ ತಗ್ಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ರಾಮನಗರ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಮಾತ್ರ ಗುಡುಗು, ಸಿಡಿಲು ಸಹಿತ ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ನ.15ರವರೆಗೆ ‘ಯೆಲ್ಲೊ ಅಲರ್ಟ್‌’ ಮುಂದುವರಿಸಲಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂದಿನ ಐದು ದಿನಗಳು ಮಳೆಯಾಗುವ ಸೂಚನೆಗಳಿಲ್ಲ. ಆದರೆ, […]