ಕಾರ್ಕಳ: 14 ವರ್ಷಗಳ ಹಿಂದಿನ ಅಪಹರಣ ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಕಾರ್ಕಳ: 14 ವರ್ಷಗಳ ಹಿಂದೆ ವ್ಯಕ್ತಿಯ ಅಪಹರಣ, ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಕಾರ್ಕಳ ನಗರ ಠಾಣೆ ಪೋಲೀಸರು ಹೊಳೆನರಸೀಪುರದಲ್ಲಿ ಬಂಧಿಸಿದ್ದಾರೆ. 2007ರ ಅ.14 ರಂದು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಮೂರೂರು ಪೋಸ್ಟ್ ಆಫೀಸ್ ಬಳಿ ಆರೋಪಿಗಳಾದ ಯೋಗಿಶ, ಮಂಜುನಾಥ್, ವಸಂತ ಕಾರ್ಕಳ ಕುಕ್ಕುಂದೂರು ಗ್ರಾಮದ ವೆಂಕಟೇಶ್ ಎಂಬವರನ್ನು ಅಪಹರಿಸಿಕೊಂಡು ಹೋಗಿ, ಆರೋಪಿ ಯೋಗೀಶನ ಮನೆಯಲ್ಲಿ ಅಕ್ರಮ ಬಂಧನದಲ್ಲಿಟ್ಟು, ಹಲ್ಲೆ ನಡೆಸಿದ್ದರು. ಈ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿ […]
ಶಿರ್ವ: ಬೈಕ್ ಗಳ ನಡುವೆ ಭೀಕರ ಅಪಘಾತ; ಮಹಿಳೆ ಮೃತ್ಯು
ಶಿರ್ವ: ಎರಡು ದ್ವಿಚಕ್ರ ವಾಹನಗಳ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಸುಭಾಷ್ ನಗರದ ಕುರ್ಕಾಲು ಜಂಕ್ಷನ್ ನಲ್ಲಿ ಇಂದು ಸಂಭವಿಸಿದೆ. ಮೃತರನ್ನು ಹೇರೂರು ಗ್ರಾಮದ ನಿವಾಸಿ ಶರ್ಮಿಳಾ (42) ಎಂದು ಗುರುತಿಸಲಾಗಿದೆ. ಇವರು ಉಡುಪಿ ವಿದ್ಯೋದಯ ಶಾಲೆಯಲ್ಲಿ ಪರಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಶರ್ಮಿಳಾ ಅವರು ಇಂದು ಬೆಳಿಗ್ಗೆ ತಮ್ಮ ಪತಿ ಸುರೇಶ್ ದೇವಾಡಿಗ ಅವರೊಂದಿಗೆ ಬೈಕ್ ನಲ್ಲಿ ಹೇರೂರಿನಿಂದ ಕಟಪಾಡಿ ಕಡೆಗೆ ಹೋಗುತ್ತಿದ್ದರು. ಕುರ್ಕಾಲು ಜಂಕ್ಷನ್ ಬಳಿ ಈ ಅಪಘಾತ ನಡೆದಿದೆ. ಎದುರಿನಿಂದ ಬಂದ ಬೈಕ್ […]
ಹಳೆನೇರಂಕಿ ವಿಷ್ಣುಮೂರ್ತಿ ದೇವರಿಗೆ ರಥ ನಿರ್ಮಾಣಕ್ಕೆ ದಾರು ಮುಹೂರ್ತ
ಕಡಬ: ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ಪೇಜಾವರ ಮಠಾಧೀಶ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಜನ್ಮಸ್ಥಳ ದ.ಕ. ಜಿಲ್ಲೆ ಕಡಬ ತಾಲೂಕು ರಾಮಕುಂಜ ಗ್ರಾಮದ ಹಳೆ ನೇರಂಕಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೆ ನಿರ್ಮಾಣವಾಗಲಿರುವ ನೂತನ ಚಂದ್ರ ಮಂಡಲ ರಥಕ್ಕೆ ಶುಕ್ರವಾರ ದಾರು ಮುಹೂರ್ತ ನೆರವೇರಿತು. ಉಡುಪಿ ಕೋಟೇಶ್ವರದ ಪ್ರಸಿದ್ಧ ರಥಶಿಲ್ಪಿ ಶ್ರೀ ಲಕ್ಷ್ಮೀನಾರಾಯಣ ಆಚಾರ್ಯರ ರಥ ಶಾಲೆಯಲ್ಲಿ ಈ ಮುಹೂರ್ತ ನಡೆಯಿತು. ಆಚಾರ್ಯರು ಮುಹೂರ್ತ ನೆರವೇರಿಸಿ ವೀಳ್ಯ ಸ್ವೀಕರಿಸಿದರು. ಅವರ ಪುತ್ರ ರಾಜಗೋಪಾಲ ಆಚಾರ್ಯ ಜೊತೆಗಿದ್ದರು. ದೇವಳದ […]
ಗೃಹಸಾಲ ಪಡೆಯುವಾಗ ಈ ತಪ್ಪುಗಳು ಆಗದಂತೆ ನೋಡಿಕೊಳ್ಳಿ..!!
ಗೃಹಸಾಲ ಪಡೆಯುವ ಮೊದಲು ಸರಿಯಾಗಿ ಪರಿಶೀಲನೆ ಮಾಡುವುದು ಅಗತ್ಯ. ಸೂಕ್ತ ಅಧ್ಯಯನ ನಡೆಸದೆಯೇ ಗೃಹಸಾಲ ಪಡೆದರೆ ನಿಮ್ಮ ಆರ್ಥಿಕ ಪರಿಸ್ಥಿತಿಯಲ್ಲಿ ಏರುಪೇರು ಆಗಬಹುದು. ಹೀಗಾಗಿ ಸೂಕ್ತವಲ್ಲದ ಗೃಹಸಾಲ ಪಡೆಯದಂತೆ ಜನ ಎಚ್ಚರಿಕೆ ವಹಿಸಬೇಕು. ಗೃಹಸಾಲ ಪಡೆಯುವಾಗ ಹಲವರು ಮಾಡುವ ತಪ್ಪುಗಳು ಇಲ್ಲಿವೆ: 1) ತಮ್ಮ ಸಾಮರ್ಥ್ಯ ಅರಿಯದಿರುವುದು: ಒಳ್ಳೆಯ ಕ್ರೆಡಿಟ್ ಸ್ಕೋರ್ ಹೊಂದಿರುವುದು ಗೃಹಸಾಲ ಪಡೆಯುವುದಕ್ಕೂ ಮೊದಲು ಕಡ್ಡಾಯವಾಗಿ ಹೊಂದಬೇಕಾದ ಅರ್ಹತೆಗಳಲ್ಲಿ ಒಂದು. ಉಚಿತವಾಗಿ ಕ್ರೆಡಿಟ್ ಸ್ಕೋರ್ ಹಾಗೂ ಕ್ರೆಡಿಟ್ ವರದಿ ನೀಡುವ ಸಂಸ್ಥೆಗಳು ಇವೆ. ಕ್ರೆಡಿಟ್ ವರದಿ […]
₹ 5,240 ಕೋಟಿ ಮೊತ್ತದ ಬಿಟ್ ಕಾಯಿನ್ ವರ್ಗಾವಣೆ: ರಣದೀಪ್ ಸುರ್ಜೇವಾಲಾ
ನವದೆಹಲಿ: ಕರ್ನಾಟಕದಲ್ಲಿ ನಡೆದಿರುವ ಬಹು ಕೋಟಿ ಮೌಲ್ಯದ ಬಿಟ್ ಕಾಯಿನ್ ಹಗರಣವನ್ನು ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಗೆ ವಹಿಸಬೇಕು ಎಂದು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರವನ್ನು ಆಗ್ರಹಿಸಿದೆ. ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಒತ್ತಾಯಿಸಿದರು. ಸ್ವತಂತ್ರ ಭಾರತದ 75 ವರ್ಷಗಳಲ್ಲಿ, ಅಂತರರಾಷ್ಟ್ರೀಯ ಮಟ್ಟದ ಆರ್ಥಿಕತೆಯನ್ನೇ ಬುಡಮೇಲು ಮಾಡಬಹುದಾದ ಅತಿ ದೊಡ್ಡ ಹಗರಣ ಇದಾಗಿದ್ದರೂ, ಈ ಕುರಿತು ಕೇಂದ್ರ ಸರ್ಕಾರವು ತಕ್ಷಣವೇ ಇಂಟರ್ ಪೋಲ್‌ಗೆ ಮಾಹಿತಿ […]