ಟ್ಯಾಂಕರ್ ಡಿಕ್ಕಿಯಾಗಿ ಹೊತ್ತಿಉರಿದ ಬಸ್; 12 ಮಂದಿ ಸಜೀವ ದಹನ
ರಾಜಸ್ಥಾನ: ಬಸ್ಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿ 12 ಜನ ಸಜೀವ ದಹನಗೊಂಡಿರುವ ಭೀಕರ ಘಟನೆ ರಾಜಸ್ಥಾನದ ಬರ್ಮಾರ-ಜೋಧಪುರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಬಲರೋಟಾದಿಂದ ಹೊರಟಿದ್ದ ಬಸ್ಗೆ, ಎದುರಾಗಿ ಬಂದ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಸುಮಾರು 25 ಜನ ಬಸ್ನಲ್ಲಿ ಪ್ರಯಾಣಿಸುತ್ತಿದ್ದು, ಸದ್ಯದ ಮಾಹಿತಿ ಪ್ರಕಾರ 10 ಮೃತದೇಹಗಳನ್ನ ಹೊರತೆಗೆಯಲಾಗಿದೆ. ಘಟನಾ ಸ್ಥಳಕ್ಕೆ ಪಚೊದ್ರಾ ಜಿಲ್ಲಾಧಿಕಾರಿ, ಮತ್ತು ಶಾಸಕ ಮದನ್ ಪ್ರಜಾಪತ್ […]
ಜಾನಪದ ಸಾಹಿತ್ಯ ಹಿರಿಯರ ಕೊಡುಗೆ: ಕೆ.ಪಿ ಶೆಣೈ
ಕಾರ್ಕಳ: ಜಾನಪದ ಸಾಹಿತ್ಯ ಅನ್ನುವುದು ನಮ್ಮ ಹಿರಿಯರಿಂದ ಬಂದಿದ್ದು. ಜನ ಜೀವನದ ಜೊತೆಗೆ ಮಣ್ಣಿನ ಸಂಸ್ಕೃತಿಗೆ ಅನುಗುಣವಾಗಿ ಹುಟ್ಟಿದೆ. ಲಿಖಿತ ರೂಪದಲ್ಲಿ ಇಲ್ಲದೆ ಬಾಯಿಯಿಂದ ಬಾಯಿಗೆ ಹರಡಿರುವ ಅತ್ಯಂತ ಶ್ರೀಮಂತ ಸಾಹಿತ್ಯವಾಗಿದೆ. ಜಾನಪದ ಕಲೆ ಉಳಿಯಬೇಕು ಜಾನಪದ ಕಲೆಯ ಶ್ರೀಮಂತಿಕೆಯನ್ನು ಯುವ ಜನತೆಗೆ ತಿಳಿಸುವ ಕೆಲಸ ನಿರಂತರವಾಗಬೇಕು ಎಂದು ಕಾರ್ಕಳ ಶ್ರೀ ವೆಂಕಟರಮಣ ಎಜ್ಯೂಕೇಶನ್ ಟ್ರಸ್ಟ್ ಕಾರ್ಯದರ್ಶಿ ಕೆ.ಪಿ ಶೆಣೈ ಹೇಳಿದರು. ಅವರು ಅಂಡಾರು ವಿಠಲ ರುಕ್ಮಿಣಿಕಿಣಿ ಸಾಂಸ್ಕೃತಿಕ ಸಭಾಂಗಣ ಎಸ್.ವಿ.ಟಿ ಕಾರ್ಕಳದಲ್ಲಿ ಜರುಗಿದ ಕನ್ನಡ ಜಾನಪದ […]