ರಾಜ್ಯದಲ್ಲಿ ಪೆಟ್ರೋಲ್ ದರದಲ್ಲಿ ₹13, ಡೀಸೆಲ್ ದರದಲ್ಲಿ ₹19 ಇಳಿಕೆ: ದರ ಇಳಿಸಿ ಆದೇಶ ಹೊರಡಿಸಿದ ಸರ್ಕಾರ

ಬೆಂಗಳೂರು: ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ₹7 ಇಳಿಕೆ ಮಾಡಿ ರಾಜ್ಯ ಸರ್ಕಾರ ಇಂದು ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 10 ರೂಪಾಯಿ ಹಾಗೂ 5 ರೂಪಾಯಿ ಇಳಿಸಿದ ಬೆನ್ನಲ್ಲೇ ಸರ್ಕಾರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರವು ಕಡಿತಗೊಳಿಸಿರುವ ಅಬಕಾರಿ ತೆರಿಗೆಯ ಜೊತೆಯಲ್ಲಿ ರಾಜ್ಯ ಸರ್ಕಾರವು ಪೆಟ್ರೋಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 35 ರಿಂದ ಶೇಕಡಾ 25.9ಕ್ಕೆ ಮತ್ತು ಡೀಸೆಲ್ ಮೇಲಿನ ಮಾರಾಟ ತೆರಿಗೆಯನ್ನು ಶೇಕಡಾ 24 ರಿಂದ […]
ವಿವಾಹಿತ ಮಹಿಳೆಯ ಅಪಹರಣ: ಭಜರಂಗದಳದ ಸಂಚಾಲಕನ ವಿರುದ್ಧ ದೂರು ದಾಖಲು

ಉಡುಪಿ: ವಿವಾಹಿತ ಮಹಿಳೆಯನ್ನು ಅಪಹರಣ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳದ ವಿಶ್ವಹಿಂದು ಪರಿಷತ್ – ಭಜರಂಗದಳದ ಸಂಚಾಲಕ ವಿರುದ್ಧ ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರ್ಕಳ ಬಜರಂಗದಳದ ಬಜಗೋಳಿ ವಲಯ ಸಹ ಸಂಚಾಲಕ ಸಂದೀಪ್ ಆಚಾರ್ಯ ವಿರುದ್ಧ ದೂರು ದಾಖಲಾಗಿದೆ. ಈತ ಶಿರ್ಲಾಲು ಹೈಸ್ಕೂಲ್ ಬಳಿ ಹಾಡಿಯಂಗಡಿ ಎಂಬಲ್ಲಿ ವಾಸವಾಗಿರುವ ಭಜರಂಗದಳದ ಕಾರ್ಯಕರ್ತ ಹರೀಶ್ ಎಂಬವರ ಪತ್ನಿಯನ್ನು ಅಪಹರಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಮಹಿಳೆಯ ಸಹೋದರ ನೀಡಿದ ದೂರಿನಂತೆ ಮೂಡಬಿದಿರೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ: ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗದಿಂದ ಪೌರಕಾರ್ಮಿಕರೊಂದಿಗೆ ದೀಪಾವಳಿ ಆಚರಣೆ

ಉಡುಪಿ: ಕೆ. ಕೃಷ್ಣಮೂರ್ತಿ ಆಚಾರ್ಯ ಅಭಿಮಾನಿ ಬಳಗ ಉಡುಪಿ ಜಿಲ್ಲೆ ಇದರ ವತಿಯಿಂದ ಉಡುಪಿ ನಗರಸಭೆಯ ಇತಿಹಾಸದಲ್ಲಿ 325ಕ್ಕಿಂತ ಹೆಚ್ಚು ಪೌರಕಾರ್ಮಿಕರಿಗೆ ಹೊಸ ಬಟ್ಟೆ ಹಾಗೂ ಸಿಹಿತಿಂಡಿಯನ್ನು ವಿತರಿಸಿ ಪೌರಕಾರ್ಮಿಕ ರೊಂದಿಗೆ ದೀಪಾವಳಿ ಹಬ್ಬವನ್ನು ವಿಶೇಷವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಉಡುಪಿ ನಗರಸಭೆಯ ಅಧ್ಯಕ್ಷರಾದ ಸುಮಿತ್ರಾ ನಾಯಕ್, ಉಪಾಧ್ಯಕ್ಷರಾದ ಲಕ್ಷ್ಮಿ ಮಂಜುನಾಥ್, ಉಡುಪಿ ನಗರಸಭೆಯ ಪೌರಾಯುಕ್ತ ರಾದ ಉದಯಕುಮಾರ,ಆರೋಗ್ಯ ಅಧಿಕಾರಿಗಳಾದ ಕರುಣಾಕರ್ ಹಾಗೂ ಶಶಿರೇಖಾ, ಉಡುಪಿ ನಗರಸಭಾ ಸದಸ್ಯರಾದ ಅಮೃತಾ ಕೃಷ್ಣಮೂರ್ತಿ, ಸಮಾಜಸೇವಕರಾದ ಕೆ. ಕೃಷ್ಣಮೂರ್ತಿ ಆಚಾರ್ಯ, […]
ತೆಂಗಿನ ಗರಿಗಳಿಂದ ಹೆಣೆದ ಹಸಿರು ಗೂಡುದೀಪವಿದು:ದೀಪಾವಳಿ ಗೂಡುದೀಪ ಸ್ಪೆಷಲ್ :

ಹಸಿರು ದೀಪಾವಳಿ ಇತ್ತೀಚೆಗೆ ಬಹಳಷ್ಟು ಜನಪ್ರಿಯವಾಗುತ್ತಿದೆ. ಆದರೆ ಹಸಿರು ದೀಪಾವಳಿಯನ್ನು ನಮ್ಮ ಹಿರಿಯರು ಗ್ರಾಮೀಣ ಭಾಗಗಳಲ್ಲಿ ಎಷ್ಟೋ ವರ್ಷಗಳಿಂದ ಆಚರಿಸುತ್ತಲೇ ಬಂದಿದ್ದಾರೆ. ಆದರೆ ಗ್ರಾಮೀಣ ಭಾಗಗಳಲ್ಲಿ ಇತ್ತೀಚೆಗೆ ಬೇರೆ ಬೇರೆ ಹೊಸ ರೀತಿಯ ಗೂಡುದೀಪಗಳ ನಡುವೆ ಸಾಂಪ್ರದಾಯಿಕ ಗೂಡುದೀಪಗಳು ಕಾಣೆಯಾಗಿದೆ. ಆದರೆ ಅಪರೂಪಕ್ಕೆ ಗಮನ ಸೆಳೆಯುವ ಸಾಂಪ್ರದಾಯಿಕ ಗೂಡುದೀಪಗಳನ್ನು ನೋಡಿದಾಗ ಖುಷಿ ಎನ್ನಿಸುತ್ತದೆ ಹಿರಿಯಡ್ಕದ ಪ್ರತೀಕ್ಷಾ ಆಚಾರ್ಯ ಪಂಚನಬೆಟ್ಟು ಅವರು ತೆಂಗಿನ ಗರಿಗಳಿಂದ ತಯಾರಿಸಿದ ಹಸಿರು ಗೂಡುದೀಪ ಗಮನ ಸೆಳೆಯುತ್ತಿದೆ.ಪರಿಸರದಿಂದಲೇ ಸಿಕ್ಕ ತೆಂಗಿನ ಗರಿಗಳಿಂದ ಆಕರ್ಷಕವಾಗಿ ಹೆಣೆಯಲಾದ […]
ಕಾರ್ಕಳ: ಹಗ್ಗ ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದ ವ್ಯಕ್ತಿ ಬಾವಿಗೆ ಬಿದ್ದು ಮೃತ್ಯು

ಕಾರ್ಕಳ: ಬಾವಿಯ ಹಗ್ಗದಿಂದ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಲು ಹೋದಂತಹ ವ್ಯಕ್ತಿ, ನೇಣಿನ ಗಂಟು ಜಾರಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಮಾಳ ಗ್ರಾಮದ ಮಂಜಲ್ತಾರು ಕಡಾರಿ ಬಳಿ ನಡೆದಿದೆ. ಕಡಾರಿ ಬಳಿ ನಿವಾಸಿ ಸುಂದರಿ ಎಂಬವರ ಮಗ ಭೋಜ (37) ನೇಣಿಗೆ ಶರಣಾದ ವ್ಯಕ್ತಿ. ಅನಾರೋಗ್ಯದಿಂದ ಬಳಲುತ್ತಿದ್ದ ಇವರು, ಜೀವನದಲ್ಲಿ ಜುಗುಪ್ಪೆಗೊಂಡು ಮನೆ ಸಮೀಪದ ಬಾವಿಯ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದರು. ಈ ವೇಳೆ ನೇಣಿನ ಗಂಟು ಜಾರಿ ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ ಎನ್ನಲಾಗಿದೆ. […]