ಮುನಿಯಾಲ್ ಆಯುರ್ವೇದ ಸಂಸ್ಥೆಯಲ್ಲಿ ರಾಷ್ಟೀಯ ಆಯುರ್ವೇದ ದಿನಾಚರಣೆ; ಧನ್ವಂತರಿ ಜಯಂತಿ ಕಾರ್ಯಕ್ರಮ
ಉಡುಪಿ: ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಮತ್ತು ಧನ್ವಂತರಿ ಜಯಂತಿಯ ಅಂಗವಾಗಿ “ಪೋಷಣಕ್ಕಾಗಿ ಆಯುರ್ವೇದ” ಎನ್ನುವ ಶೀರ್ಷಿಕೆಯಡಿಯಲ್ಲಿ ಮಣಿಪಾಲದ ಮುನಿಯಾಲ್ ಆಯುರ್ವೇದ ಸಂಸ್ಥೆಯು ನ.2ರಂದು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತು. ಆಯುರ್ವೇದದಲ್ಲಿ ಹೇಳಿದ ವಿವಿಧಪಥ್ಯಾಹಾರಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆಯನ್ನು ಸಂಸ್ಥೆಯ ಏರ್ಪಡಿಸಲಾಗಿತ್ತು. ಕಾಲೇಜಿನ ಪ್ರಾಂಶುಪಾಲರಾದ ಡಾ. ಸತ್ಯನಾರಾಯಣ ಬಿ ಕಾರ್ಯಕ್ರಮ ಉದ್ಘಾಟಿಸಿ, ಆಹಾರ ಮತ್ತು ಪಥ್ಯಾಹಾರ ಮತ್ತು ಸಮಕಾಲೀನಕ್ಕೆ ಅದರ ಅಗತ್ಯತೆಯ ಬಗ್ಗೆ ತಿಳಿಸಿದರು. ಗೋಸ್ವಾಲ್ ಆಯುರ್ವೇದ ಕೇಂದ್ರದ ಮುಖ್ಯಸ್ಥರಾದ ಡಾ.ತನ್ಮಯ ಗೋಸ್ವಾಮಿ ಆಯುರ್ವೇದ ಮತ್ತು ಧನ್ವಂತರಿ ದಿನದ ಮಹತ್ವದ […]
ನೀಟ್ ಪರೀಕ್ಷೆ ಫಲಿತಾಂಶ: ಕುಂದಾಪುರ ವೆಂಕಟರಮಣ ಪ.ಪೂ ಕಾಲೇಜು ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ
ಕುಂದಾಪುರ: ಸ್ಪರ್ಧಾತ್ಮಕ ಯುಗಕ್ಕೆ ಪೂರಕವಾದ ಶಿಕ್ಷಣವನ್ನು ನೀಡುತ್ತಾ ವಿದ್ಯಾರ್ಥಿಗಳ ಪ್ರಗತಿಯಲ್ಲಿ ತೊಡಗಿಕೊಂಡಿರುವ ಕುಂದಾಪುರದ ಶ್ರೀ ವೆಂಕಟರಮಣ ಪ.ಪೂ ಕಾಲೇಜು, 2020-21ನೇ ಸಾಲಿನಲ್ಲಿ ನಡೆದ ವೈದ್ಯಕೀಯ ವಿಭಾಗದ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಲ್ಲಿ(ನೀಟ್) ಅತ್ಯುತ್ತಮ ಫಲಿತಾಂಶ ಪಡೆದುಕೊಂಡಿದೆ. ಕಾಲೇಜಿನ ಗೌರವ್ 604 (98.99 ಪರ್ಸಂಟೈಲ್) ಪಡೆಯುದರ ಮೂಲಕ ಅಗ್ರಗಣ್ಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಸಿಂಚನಾ ಎಸ್.497 , ಅವನಿ 469 , ಅಫ್ರಿಧಿ ಎಸ್. 440, ಸಾತ್ವಿಕ್ ಶೆಟ್ಟಿ 417 ಪರ್ಸಂಟೈಲ್ ಗಳಿಸಿದ್ದಾರೆ.
ಉಡುಪಿಯ ಪೃಥ್ವಿ ಏಜೆನ್ಸಿಸ್‌ನಲ್ಲಿ ದೀಪಾವಳಿ ಧಮಾಕ; ಗೃಹೋಪಕರಣ ಮತ್ತು ಪೀಠೋಪಕರಣಗಳ ಮೇಲೆ ಭರ್ಜರಿ ಆಫರ್
ಉಡುಪಿ: ನಗರದ ಕಿನ್ನಿಮೂಲ್ಕಿ ಯಲ್ಲಿರುವ ಗೃಹೋಪಕರಣ ಮತ್ತು ಪೀಠೋಪಕರಣಗಳ ಬೃಹತ್ ಮಳಿಗೆ ಪೃಥ್ವಿ ಏಜೆನ್ಸಿಸ್‌ನಲ್ಲಿ ದೀಪಾವಳಿ ಆಫರ್ ಸೇಲ್ ಅನ್ನು ಆಯೋಜಿಸಲಾಗಿದ್ದು ಭರ್ಜರಿ ಆಫರ್ ಗಳು ಇಲ್ಲಿ ನಿಮಗಾಗಿ ಕಾದಿವೆ. ಬೆಳಕಿನ ಹಬ್ಬ ದೀಪಾವಳಿಯ ಸಂಭ್ರಮಕ್ಕೆ ಇನ್ನಷ್ಟು ರಂಗು ನೀಡಲು ಪೃಥ್ವಿ ಏಜೆನ್ಸಿಸ್ ರೆಡಿಯಾಗಿದೆ. ಏನೇನು ಆಫರ್? ಡಬಲ್ ವುಡನ್ ಕಾಟ್ ರೂ 7,500 , 3+1 ಸೋಫಾಸೆಟ್ 10,000 ರೂ., ಕಾರ್ನರ್ ಪ್ಯಾಕ್ 1,500 ರೂ, ಬುಕ್ ಬ್ಯಾಕ್ 2,999 ರೂ., ಕಂಪ್ಯೂಟರ್ ಚೆಯರ್ 2,500 […]
ನ.15ಕ್ಕೆ ಉಡುಪಿಯಲ್ಲಿ 68ನೇ ಅಖಿಲ ಭಾರತ ಸಹಕಾರ ಸಪ್ತಾಹದ ಎರಡನೇ ದಿನದ ರಾಜ್ಯಮಟ್ಟದ ಕಾರ್ಯಕ್ರಮ: ರಾಜೇಂದ್ರ ಕುಮಾರ್
ಉಡುಪಿ: 68ನೇ ಅಖಿಲ ಭಾರತ ಸಹಕಾರ ಸಪ್ತಾಹದ ಎರಡನೇ ದಿನದ ರಾಜ್ಯ ಮಟ್ಟದ ಕಾರ್ಯಕ್ರಮವನ್ನು ನ.15ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದ್ದಾರೆ. ನಗರದ ಹೋಟೆಲ್ ಡಯಾನ ಸಭಾಂಗಣದಲ್ಲಿ ಏರ್ಪಡಿಸಲಾದ ಈ ಕುರಿತ ಪೂರ್ವ ಭಾವಿ ಸಭೆಯ ಬಳಿಕ ಮಾತನಾಡಿದ ಅವರು, ಅವಿಭಜಿತ ದ.ಕ. ಜಿಲ್ಲೆಗಳ ಎಲ್ಲ ಸಹಕಾರಿಗಳ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದ್ದು, ಸುಮಾರು 10ಸಾವಿರ ಮಂದಿ ಸೇರುವ ನಿರೀಕ್ಷೆ ಹೊಂದಿದ್ದೇವೆ. ಇದಕ್ಕೆ […]
ಕಾರ್ಕಳ: ನಟ ಪುನೀತ್ ರಾಜ್‌ಕುಮಾರ್ ಮೃತಪಟ್ಟ ಸುದ್ದಿತಿಳಿದು ವ್ಯಕ್ತಿ ನಾಪತ್ತೆ
ಕಾರ್ಕಳ: ನಟ ಪುನೀತ್ ರಾಜ್‌ಕುಮಾರ್ ಮೃತಪಟ್ಟ ಸುದ್ದಿ ತಿಳಿದು ವ್ಯಕ್ತಿಯೊಬ್ಬರು ಮನೆ ಬಿಟ್ಟು ನಾಪತ್ತೆಯಾಗಿರುವ ಘಟನೆ ಕಾರ್ಕಳ ಗೊಮ್ಮಟಬೆಟ್ಟದ ಬಳಿಯ ದಾನಶಾಲೆ ಎಂಬಲ್ಲಿ ನಡೆದಿದೆ. ದಾನಶಾಲೆ ನಿವಾಸಿ ದಿನೇಶ (56) ನಾಪತ್ತೆಯಾದ ವ್ಯಕ್ತಿ. ಇವರು ಮನೆ ಸಮೀಪದ ಲಾಡ್ಜ್ ನಲ್ಲಿ ಸುಪರ್ವೈಸರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅ.29ರಂದು ಮಧ್ಯಾಹ್ನ ಕೆಲಸಕ್ಕೆ ಹೋಗಿ ಮನೆಗೆ ಬಂದು ಟಿವಿ ನೋಡುತ್ತಿದ್ದರು. ಈ ವೇಳೆ ಪುನಿತ್ ರಾಜ್ ಕುಮಾರ್ ಮೃತಪಟ್ಟ ಸುದ್ದಿ ತಿಳಿದು ಮನೆಯಲ್ಲಿ ಹೇಳದೇ ಹೊರಗೆ ಹೋದವರು ಈವರೆಗೆ ವಾಪಾಸು […]