ಉಡುಪಿ: ನಾಳೆ (ಅ. 31) ಎಲ್ಐಸಿ ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್ ನ ವಜ್ರಮಹೋತ್ಸವ ಕಟ್ಟಡ ಉದ್ಘಾಟನೆ

ಉಡುಪಿ: ಎಲ್ಐಸಿ ಎಂಪ್ಲಾಯೀಸ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ ‘ವಜ್ರಮಹೋತ್ಸವ ಕಟ್ಟಡ’ದ ಉದ್ಘಾಟನಾ ಸಮಾರಂಭವು ನಾಳೆ (ಅ.31) ಬೆಳಿಹ್ಗೆ 10.30 ಕ್ಕೆ ನಡೆಯಲಿದೆ. ಭಾರತೀಯ ಜೀವ ವಿಮಾ ನಿಗಮ ಉಡುಪಿ ಭಾರತೀಯ ಕಚೇರಿಯ ಹಿರಿಯ ವಿಭಾಗಾಧಿಕಾರಿ ಬಿಂದು ರೋಬಾರ್ಟ್ ಕಟ್ಟಡವನ್ನು ಉದ್ಘಾಟಿಸುವರು. ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್ ಸಮಾರಂಭವನ್ನು ಉದ್ಘಾಟಿಸುವರು. ಉಡುಪಿ ಎಲ್ಐಸಿ ಎಂಪ್ಲಾಯಿಸ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಅಧ್ಯಕ್ಷ ಕೆ. ಕೃಷ್ಣ ಅಧ್ಯಕ್ಷತೆ ವಹಿಸುವರು. ಉಡುಪಿ ಜಿಲ್ಲಾ ಸಹಕಾರಿ […]

ಸತ್ಯನಾಥ್ ಸ್ಟೋರ್ಸ್ ನಲ್ಲಿ ದೀಪಾವಳಿ ವಿಶೇಷ ರಿಯಾಯಿತಿ ಮಾರಾಟ

ಏಳು ದಶಕಗಳಿಂದ ವಸ್ತ್ರ ವ್ಯಾಪಾರದ ಮೂಲಕ ಕರಾವಳಿ ಮಲೆನಾಡು ಭಾಗದ ಗ್ರಾಹಕರ ಪ್ರೀತಿಗೆ ಪಾತ್ರವಾದ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪದಲ್ಲಿರುವ ಸತ್ಯನಾಥ್ ಸ್ಟೋರ್ಸ್ ಬೃಹತ್ ವಸ್ತ್ರ ಮಳಿಗೆಗಳಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಮಾರಾಟ ಆಯೋಜಿಸಲಾಗಿದೆ. ಉತ್ತಮ ಗುಣಮಟ್ಟದ ವಸ್ತ್ರಗಳಿಗೆ ಭರಪೂರ ರಿಯಾಯಿತಿ ಘೋಷಿಸಲಾಗಿದೆ. ಪ್ರತಿಷ್ಠಿತ ಕಂಪನಿಗಳ ಬ್ರಾಂಡೆಡ್, ಸಾಂಪ್ರದಾಯಿಕ, ಆಧುನಿಕ ಶೈಲಿಯ ಉಡುಪು, ಎಲ್ಲಾ ವಯಸ್ಸಿನವರಿಗೆ ಒಪ್ಪುವ ನವೀನ ಬಟ್ಟೆಗಳ ಪರಿಪೂರ್ಣ ಮಳಿಗೆಗೆ ಸತ್ಯನಾಥ್ ಸ್ಟೋರ್ಸ್ ಖ್ಯಾತಿ ಪಡೆದಿದೆ. 20ಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಅಪಾರ […]

ನೇಣುಬಿಗಿದ ಸ್ಥಿತಿಯಲ್ಲಿ ಪದವಿ ಕಾಲೇಜು ವಿದ್ಯಾರ್ಥಿನಿಯ ಮೃತದೇಹ ಪತ್ತೆ

ಕಾಸರಗೋಡು: ಜಿಲ್ಲೆಯ ಪೆರ್ಲದಲ್ಲಿ ಕಾಲೇಜು ವಿದ್ಯಾರ್ಥಿನಿಯೋರ್ವಳ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೆರ್ಲ ಸಮೀಪದ ಬಜಕೂಡ್ಲು ನಿವಾಸಿ ಮಹಾಲಿಂಗ ನಾಯ್ಕ – ಕುಮುದಾಕ್ಷಿ ದಂಪತಿಗಳ ಪುತ್ರಿ ಶ್ರಾವ್ಯ (20) ಮೃತ ವಿದ್ಯಾರ್ಥಿನಿ. ಈಕೆ ವಿಟ್ಲದ ಪದವಿ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಎಂದು ಶಂಕಿಸಲಾಗಿದ್ದು, ಪೊಲೀಸ್ ತನಿಖೆಯಿಂದ ಪ್ರಕರಣದ ಸತ್ಯಾಸತ್ಯತೆ ತಿಳಿದುಬರಬೇಕಿದೆ.

ಇಂದಲ್ಲ, ನಾಳೆ ನಟ ಪುನೀತ್​​ ರಾಜ್​ಕುಮಾರ್ ಅಂತ್ಯಕ್ರಿಯೆ

ಬೆಂಗಳೂರು: ನಟ ಪುನೀತ್​​ ರಾಜ್​ಕುಮಾರ್ ಅವರ ಅಂತ್ಯಕ್ರಿಯೆ ನಾಳೆ ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ನಾನು ರಾಘಣ್ಣ ಹಾಗೂ ಶಿವರಾಜ್​ಕುಮಾರ್​ ಜೊತೆ ಮಾತನಾಡಿದೆ. ಪುನೀತ್​ ಅವರ ಅಭಿಮಾನಿಗಳು ಲಕ್ಷ ಲಕ್ಷ ಸಂಖ್ಯೆಯಲ್ಲಿ  ಹರಿದು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಳೆ ಅಂತ್ಯಕ್ರಿಯೆ ನೆರವೇರಿಸಲು ನಿರ್ಧರಿಸಲಾಗಿದೆ ಎಂದು ಮಾಹಿತಿ ನೀಡಿದರು. ಸರ್ಕಾರ ಹಾಗೂ ಡಾ.ರಾಜ್​ ಕುಟುಂಬದ ತೀರ್ಮಾನದಂತೆ ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಪುನೀತ್​ ಅವರ ಅಂತ್ಯಕ್ರಿಯೆ ನೆರವೇರಲಿದೆ. ಕಂಠೀರವ ಸ್ಟೇಡಿಯಂನಲ್ಲಿರುವ […]

ಉಡುಪಿಯ ಬಲ್ಲಾಳ್ ಮೊಬೈಲ್ಸ್ ನಲ್ಲಿ ದೀಪಾವಳಿಗೆ ಬಂಪರ್ ಆಫರ್: ಪ್ರತಿ ಖರೀದಿಗೆ ಗಿಫ್ಟ್ ಕೂಪನ್, ಲಕ್ಕಿ ಕೂಪನ್, ಉಚಿತ ಉಡುಗೊರೆ

ಉಡುಪಿ: ದೀಪಾವಳಿಗೆ ಹೊಸ ಮೊಬೈಲ್ ಖರೀದಿಸಬೇಕೆಂಬ ಯೋಚನೆಯಲ್ಲಿ ಇದ್ದೀರಾ.. ಹಾಗಾದರೆ ನೀವು, ತಡಮಾಡಬೇಡಿ ಬಲ್ಲಾಳ್ ಮೊಬೈಲ್ಸ್ ಶೋರೂಮ್ ಗೆ ಭೇಟಿ ಕೊಡಿ, ನಿಮ್ಮ ಕನಸಿನ ಮೊಬೈಲ್ ಖರೀದಿಯ ಜತೆಗೆ ಉಚಿತ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಿ. ಹೌದು, ಉಡುಪಿ ಕಲ್ಪನ ಚಿತ್ರಮಂದಿರದ ಎದುರಿನ ಓರಿಯನ್ ಬಿಲ್ಡಿಂಗ್ ನಲ್ಲಿರುವ *ಬಲ್ಲಾಳ್ ಮೊಬೈಲ್ಸ್* ಈ ದೀಪಾವಳಿಗೆ ಭರ್ಜರಿ ಆಫರ್ ಗಳನ್ನು ನೀಡುತ್ತಿದೆ. ಪ್ರತಿ ಖರೀದಿಗೆ ಗಿಫ್ಟ್ ಕೂಪನ್ ಹಾಗೂ ಉಚಿತ ಉಡುಗೊರೆಗಳನ್ನು ನೀಡುತ್ತಿದೆ. ಹಾಗೆ ಅದೃಷ್ಟಶಾಲಿಗಳಿಗೆ ಏಳು ಕಾರಗಳು ಬಂಪರ್ ಬಹುಮಾನವಾಗಿ ದೊರೆಯಲಿದೆ. […]