ಕಾರ್ಕಳ: ಕ್ರಶರ್ ಮಾಲೀಕನಿಗೆ ಬೆದರಿಕೆಯೊಡ್ಡಿದ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು

ಉಡುಪಿ: ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು ಎಂಬಾತ ಬೆಳ್ಮಣ್ ಪರಿಸರದ ಕ್ವಾರೇ ಮಾಲೀಕರೊಬ್ಬರಿಗೆ ₹10 ಲಕ್ಷ ನೀಡುವಂತೆ ಬೆದರಿಕೆಯೊಡ್ಡಿದ ಘಟನೆ ಕಾರ್ಕಳದಲ್ಲಿ ಇಂದು ನಡೆದಿದೆ. ಈ ಸಂಬಂಧ ಶ್ರೀದುರ್ಗಾ ಕ್ರಶರ್‌ನ ಮಾಲೀಕ ಬೆಳ್ಮಣ್ ಪೇರಲ್‌ಪಾದೆಯ ನಿತ್ಯಾನಂದ ಶೆಟ್ಟಿ ಕಾರ್ಕಳ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ರವಿ ಶೆಟ್ಟಿ ವಿರುದ್ಧ ದೂರು ದಾಖಲಿಸಿದ್ದಾರೆ. ರವಿ ಶೆಟ್ಟಿ ಸೆ. 10ರಂದು ನನ್ನ ಮೊಬೈಲ್‌ಗೆ ಕರೆ ಮಾಡಿ, ನಾನು ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಎಂದು ಪರಿಚಯ ಮಾಡಿಕೊಂಡಿದ್ದನು. ಆ ಬಳಿಕ […]
ಉಡುಪಿ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ 35 ಮಂದಿಗೆ 2021ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; ಪ್ರಶಸ್ತಿ ಪುರಸ್ಕೃತರ ವಿವರ ಇಲ್ಲಿದೆ

ಉಡುಪಿ: 2021ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಹೆಸರು ಪ್ರಕಟಗೊಂಡಿದೆ. ಈ ಬಾರಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಜಿಲ್ಲೆಯ 35 ಮಂದಿಗೆ ಪ್ರಶಸ್ತಿ ಲಭಿಸಿದೆ. ಪ್ರಶಸ್ತಿ ಪುರಸ್ಕೃತ ವಿವರ ಈ ಕೆಳಕಂಡಂತಿದೆ.
ಶಿರ್ವಾ ಗ್ರಾಮದ ಯುವತಿ ನಾಪತ್ತೆ

ಉಡುಪಿ: ಉಡುಪಿಯ ಕೋಡುಗುಡ್ಡೆ ಹೌಸ್ ಶಿರ್ವಾ ಗ್ರಾಮದ ಪವಿತ್ರಾ (26) ಎಂಬುವವರು ನಾಪತ್ತೆಯಾಗಿದ್ದಾರೆ. ಪವಿತ್ರಾ ಅ. 26ರಿಂದ ಕೋಡುಗುಡ್ಡೆ ಹೌಸ್ ಮನೆಯಿಂದ ಕಾಣೆಯಾಗಿದ್ದಾರೆ. ಚಹರೆ: 5 ಅಡಿ 2 ಇಂಚು ಎತ್ತರವಿದ್ದು, ಬಿಳಿ ಮೈ ಬಣ್ಣ,ಸಪೂರ ಶರೀರ, ಕೇಸರಿ ಬಣ್ಣದ ಚೂಡಿದಾರ, ಹಸಿರು ಬಣ್ಣದ ಪ್ಯಾಂಟ್ ಧರಿಸಿದ್ದು,ಮೂಗಿನ ಮೇಲೆ ಹಳೆ ಗಾಯದ ಗುರುತು ಇದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಪೋಲಿಸ್ ಉಪಾಧೀಕ್ಷಕರು,ಕಾರ್ಕಳ ವಿಭಾಗ, ಕಾರ್ಕಳ ದೂ.ಸಂಖ್ಯೆ: 08258-231333-9480805421, ಪೋಲಿಸ್ ವೃತ್ತ ನೀರೀಕ್ಷಕರು […]
ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಆಯ್ಕೆ

ಮೂಡುಬಿದಿರೆ: ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಇಂದು (ಅ. 30) ನಡೆದ ಕಂಬಳ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇತರ ಪದಾಧಿಕಾರಿಗಳು: ಪ್ರಧಾನ ಕಾರ್ಯದರ್ಶಿ- ನಾರಾವಿ ರಕ್ಷಿತ್ ಜೈನ್, ಉಪಾಧ್ಯಕ್ಷ- ಹೊಕ್ಕಾಡಿಗೋಳಿ ರಶ್ಮಿತ್ ಶೆಟ್ಟಿ, ಪುತ್ತೂರು ಚಂದ್ರಹಾಸ ಶೆಟ್ಟಿ, ಬೆಳ್ಳಿಪಾಡಿ ಕೈಪಾ ಕೇಶವ ಭಂಡಾರಿ, ಜಪ್ಪು ಮನ್ಕುತೋಟ ಗುತ್ತು ಅನಿಲ್ ಶೆಟ್ಟಿ, ಕೊಳಕೆ ಇರ್ವತ್ತೂರು ಉದಯ್ ಕೋಟ್ಯಾನ್, ಕೋಶಾಧಿಕಾರಿ- […]
ನ. 21ರಂದು ತೋನ್ಸೆ ಕಂಬಳ: ಬಹುಮಾನಗಳೇನು ವಿವರ ಇಲ್ಲಿದೆ

ಕುಂದಾಪುರ: ಕೆಮ್ಮಣ್ಣು ತೋನ್ಸೆ ಪಡುಮನೆ ವರ್ಷಾವಧಿ ಕಂಬಳ ತೋನ್ಸೆ ಪಡುಮನೆ ಕಂಬಳಗದ್ದೆಯಲ್ಲಿ ಇದೇ ಬರುವ ನವೆಂಬರ್ 21ರಂದು ನಡೆಯಲಿದೆ. ಬಹುಮಾನಗಳ ವಿವರ: ಹಗ್ಗ ಹಿರಿಯ ವಿಭಾಗ: ಪ್ರಥಮ- ₹10 ಸಾವಿರ, ದ್ವಿತೀಯ 5 ಸಾವಿರ. ಹಗ್ಗ ಕಿರಿಯ ವಿಭಾಗ: ₹10 ಸಾವಿರ, ದ್ವಿತೀಯ ₹5 ಸಾವಿರ. ಹಲಗೆ ವಿಭಾಗ: ₹10 ಸಾವಿರ, ದ್ವಿತೀಯ ₹5 ಸಾವಿರ. ಕಂಬಳದಲ್ಲಿ ಭಾಗಹಿಸಿದ ಪ್ರತಿ ಕೋಣಗಳ ಮಾಲೀಕರಿಗೂ ₹ 1 ಸಾವಿರ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಕಂಬಳ ಸಮಿತಿ ತಿಳಿಸಿದೆ.