ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆಯ ನರ್ಸಿಂಗ್ ವಿಭಾಗಕ್ಕೆ ಎನ್ಎಬಿಎಚ್ ನಿಂದ ಶ್ರೇಷ್ಠತಾ ಪ್ರಮಾಣಪತ್ರ

ಮಣಿಪಾಲ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ  ಶುಶ್ರೂಷಾ (ನರ್ಸಿಂಗ್) ವಿಭಾಗಕ್ಕೆ ಶ್ರೇಷ್ಠತಾ (ಎಕ್ಸಲೆನ್ಸ್) ಪ್ರಮಾಣಪತ್ರವು ರಾಷ್ಟ್ರೀಯ ಆಸ್ಪತ್ರೆ ಮತ್ತು ಆರೋಗ್ಯ ಪೂರೈಕದಾರರ ಮಾನ್ಯತೆ ಪಡೆದ ಸಂಘ (ಎನ್ ಎ ಬಿ ಎಚ್), ಭಾರತೀಯ ಗುಣಮಟ್ಟದ ಮಂಡಳಿ (ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ)ಯಿಂದ ದೊರೆತಿದೆ. ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಮಣಿಪಾಲದ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಅವರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ನರ್ಸಿಂಗ್ ಸೇವೆಗಳ ವಿಭಾಗದ ಮುಖ್ಯಸ್ಥರಾದ ಡಾ. ಶುಭ ಸೂರಿಯ ಅವರಿಗೆ ಪ್ರಮಾಣಪತ್ರವನ್ನು ಹಸ್ತಾಂತರಿಸಿದರು. […]

ಉಡುಪಿ ಸುಲ್ತಾನ್ ಗೋಲ್ಡ್‌ನಲ್ಲಿ ‘ವಿಶ್ವ ವಜ್ರ’ ಡೈಮಂಡ್ ಎಕ್ಸಿಬಿಷನ್ ಉದ್ಘಾಟನೆ

ಉಡುಪಿ: ನಗರದ ವಿಎಸ್‌ಟಿ ರಸ್ತೆಯ ಗೀತಾಂಜಲಿ ಸಿಲ್ಕ್ಸ್ ಬಳಿ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿರುವ ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್‌ನಲ್ಲಿ 10 ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ದಕ್ಷಿಣ ಭಾರತದ ಬೃಹತ್ ಡೈಮಂಡ್ ಎಕ್ಸಿಬಿಷನ್ ‘ವಿಶ್ವ ವಜ್ರ’ವನ್ನು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಉದ್ಘಾಟಿಸಿದರು. ಬಳಿಕ ಮಾತನಾಡಿದ ಸುರೇಶ್ ಶೆಟ್ಟಿ ಗುರ್ಮೆ, ಯಾವುದೇ ಸಂಸ್ಥೆಯ ಒಳ್ಳೆಯ ಆಸ್ತಿ ಅಂದರೆ ಆ ಸಂಸ್ಥೆಯ ಸಿಬ್ಬಂದಿ ವರ್ಗ. ಇವರ ಶ್ರಮ ಹಾಗೂ ಶ್ರದ್ದೆಯು ಸಂಸ್ಥೆಯ ಹೆಸರನ್ನು ಎತ್ತಿ ಹಿಡಿಯುತ್ತದೆ. ಬದುಕು ಬದಲಾದಂತೆ […]

ದಿ. ಓಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದಿಂದ ‘ನುಡಿ ನಮನ’ ಕಾರ್ಯಕ್ರಮ

ಉಡುಪಿ: ಅವಿಭಜಿತ ಜಿಲ್ಲೆಯಲ್ಲಿ ಓಸ್ಕರ್ ಫೆರ್ನಾಂಡಿಸ್ ಮಾಡಿದಂತಹ ಅಭಿವೃದ್ದಿ ಕೆಲಸಗಳು ಅವಿಸ್ಮರಣೀಯ. ರಾಜಕೀಯ ಎದುರಾಳಿಗಳನ್ನು ವೈರಿಗಳಂತೆ ಕಾಣದೆ, ಅವರೆಲ್ಲರನ್ನು ಪ್ರೀತಿಸಿದ ಓಸ್ಕರಣ್ಣ, ದೇಶದಲ್ಲಿ ಹಲವಾರು ನಾಯಕರನ್ನು ಸಾರ್ವಜನಿಕ ಜೀವನದಲ್ಲಿ ಬೆಳೆಸಿದವರು ಓಸ್ಕರ್ ಫೆರ್ನಾಂಡಿಸ್. ನಮ್ಮೆಲ್ಲರ ಸಾರ್ವಜನಿಕ ಬದುಕಿನಲ್ಲಿ ಓಸ್ಕರ್ ಫೆರ್ನಾಂಡಿಸ್ ತಾಯಿಗೆ ಸಮಾನರು ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು. ದಿ. ಓಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗದ ನೇತೃತ್ವದಲ್ಲಿ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ನಡೆದ ‘ನುಡಿ ನಮನ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು […]

ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್; ಅರ್ಧ ವಾರ್ಷಿಕದಲ್ಲಿ ₹ 4.60 ಕೋಟಿ ಲಾಭ: ಯಶ್‌ಪಾಲ್ ಸುವರ್ಣ

ಉಡುಪಿ: ಕರಾವಳಿ ಭಾಗದ ಪ್ರತಿಷ್ಟಿತ ಪಟ್ಟಣ ಸಹಕಾರಿ ಸಂಸ್ಥೆಗಳಲ್ಲಿ ಒಂದಾದ ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ 2021-22ನೇ ಸಾಲಿನ ಅರ್ಧವಾರ್ಷಿಕದಲ್ಲಿ ಸುಮಾರು ರೂ. 517.58 ಕೋಟಿ ವ್ಯವಹಾರ ನಡೆಸಿ ರೂ.4.60 ಕೋಟಿ ಒಟ್ಟು ಲಾಭ ದಾಖಲಿಸಿರುವುದಾಗಿ ಬ್ಯಾಂಕಿನ ಅಧ್ಯಕ್ಷರಾದ ಯಶ್‌ಪಾಲ್ ಎ ಸುವರ್ಣ ತಿಳಿಸಿದ್ದಾರೆ. ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ 2021-22ನೇ […]