ದೇಶದಾದ್ಯಂತ ಮುಂದುವರಿದ ತೈಲ ಬೆಲೆ ಏರಿಕೆ: ಪೆಟ್ರೋಲ್ 36 ಪೈಸೆ, ಡೀಸೆಲ್ 37 ಪೈಸೆ ಹೆಚ್ಚಳ

ನವದೆಹಲಿ: ದೇಶದಾದ್ಯಂತ ತೈಲ ಬೆಲೆ ಏರಿಕೆ ಮುಂದುವರೆದಿದ್ದು, ಪೆಟ್ರೋಲ್ 34 ರಿಂದ 36 ಪೈಸೆಗಳಷ್ಟು ಮತ್ತು ಡೀಸೆಲ್ ದರ 37 ಪೈಸೆ ಹೆಚ್ಚಳವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 108.76ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 99.59 ರೂ ಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 105.14ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 93.88 ರೂ ಗೆ ಏರಿಕೆಯಾಗಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ ಪ್ರತೀ […]

ಇಂದು ರಾಜ್ಯಾದ್ಯಂತ ಕೋಟಿಗೊಬ್ಬ-3 ಚಿತ್ರ ಬಿಡುಗಡೆ

ಬೆಂಗಳೂರು: ನಿನ್ನೆ ತೆರೆ ಕಾಣಬೇಕಿದ್ದ ನಟ ಕಿಚ್ಚ ಸುದೀಪ್​​ ಅಭಿನಯದ ಬಹುನೀರಿಕ್ಷಿತ ಚಿತ್ರ ಕೋಟಿಗೊಬ್ಬ-3 ಸಿನಿಮಾ ತಾಂತ್ರಿಕ ದೋಷದಿಂದಾಗಿ ಸ್ಥಗಿತಗೊಂಡಿತ್ತು. ಆದರೆ ಇಂದು ಕೋಟಿಗೊಬ್ಬ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಥಿಯೇಟರ್​​ಗಳಲ್ಲಿ ತೆರೆ ಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ನಿನ್ನೆ ತೆರೆ ಕಾಣಬೇಕಿದ್ದ ಸಿನಿಮಾ ಇನ್ನು ಇಂದು ಹೊಸ ವಿತರಕರೊಂದಿಗೆ ಸಿನಿಮಾ ರಿಲೀಸ್​ ಆಗಿದೆ. ಬಿಕೆಟಿ; ಎಂಎಂಸಿಎಚ್; ಚಿತ್ರದುರ್ಗ; ಬಳ್ಳಾರಿ- ಬಿಕೆ ಗಂಗಾಧರ್ ಮತ್ತು ಜಾಕ್ ಮಂಜು ಹಾಗೂ ಬಿಕೆಟಿ -ಸೈಯದ್ ಸಲಾಮ್‌ನ ಮಲ್ಟಿಪ್ಲೆಕ್ಸ್‌ಗಳು ಸಿನಿಮಾ ವಿತರಣೆ ಮಾಡಲಿದೆ […]

ಹಿರಿಯ ನಟ, ರಂಗಕರ್ಮಿ ಜಿ.ಕೆ.ಗೋವಿಂದ ರಾವ್ ನಿಧನ

ಬೆಂಗಳೂರು: ಹಿರಿಯ ನಟ, ರಂಗಕರ್ಮಿ ಜಿ.ಕೆ.ಗೋವಿಂದ ರಾವ್ (86) ಅವರು ಇಂದು (ಶುಕ್ರವಾರ) ಬೆಳಿಗ್ಗೆ ಹುಬ್ಬಳ್ಳಿಯ ತಮ್ಮ ಮಗಳ ಮನೆಯಲ್ಲಿ ನಿಧನರಾಗಿದ್ದಾರೆ. ಅವರು ಲೇಖಕರಾಗಿ, ಪ್ರಾಧ್ಯಾಪಕರಾಗಿ, ರಂಗಭೂಮಿ ಕಲಾವಿದರಾಗಿ, ಚಿತ್ರ ನಟರಾಗಿ ಗುರುತಿಸಿಕೊಂಡಿದ್ದರು. ಗೋವಿಂದ ರಾವ್ 1937 ಏಪ್ರಿಲ್ 27ರಂದು ಬೆಂಗಳೂರಿನಲ್ಲಿ ಜನಿಸಿದ್ದರು. ಇಂಗ್ಲಿಷ್ ಸಾಹಿತ್ಯದ ಅಧ್ಯಯನ ನಡೆಸಿದ ಅವರು ಇಂಗ್ಲಿಷ್‌ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಈಶ್ವರ ಅಲ್ಲಾ (ಕಿರು ಕಾದಂಬರಿ), ಶೇಕ್ಸ್‌ಪಿಯರ್‌ ಎರಡು ನಾಟಕಗಳ ಅಧ್ಯಯನ, ಶೇಕ್ಸ್‌ಪಿಯರ್‌ ಸಂವಾದ (ವಿಮರ್ಶಾ ಲೇಖನಗಳು), ನಡೆ-ನುಡಿ, ನಾಗರಿಕತೆ ಮತ್ತು […]

ಗಾಯಗೊಂಡಿದ್ದ ಹೆಬ್ಬಾವನ್ನು ರಕ್ಷಿಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತ ಸುಜಿತ್ ನೀರೆ

ಕಾರ್ಕಳ: ನೀರೆ ತಂತ್ರಿಬೆಟ್ಟು ರಮೇಶ್ ಕಲ್ಲೊಟ್ಟೆಯವರ ಭತ್ತದ ಗದ್ದೆಯಲ್ಲಿ ಬೃಹದಾಕಾರದ ಹೆಬ್ಬಾವು ಪತ್ತೆಯಾಗಿದೆ. ಹೆಬ್ಬಾವು ಬಲೆಯಲ್ಲಿ ಸಿಲುಕಿ ಗಾಯಗೊಂಡಿದ್ದು, ಆಹಾರಕ್ಕಾಗಿ ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡು ಒದ್ದಾಡುತ್ತಿತ್ತು. ಈ ಬಗ್ಗೆ ಬೈಲೂರು ವಲಯ ಅರಣ್ಯಾಧಿಕಾರಿ ಜಯರಾಮ್ ಅವರಿಗೆ ಮಾಡಲಾಯಿತು‌. ಅವರು ತಕ್ಷಣ ವನಪಾಲಕ ಶ್ರೀಧರ್ ಅವರ ಮೂಲಕ ಆಪದ್ಬಾಂಧವ ನೀರೆ ಸುಜಿತ್ ಅವರನ್ನು ಕಳುಹಿಸಿಕೊಟ್ಟರು. ನೀರೆ ಸುಜಿತ್ ಹಾಗೂ ಸ್ನೇಹಿತರ ಸಹಾಯದಿಂದ ಭತ್ತದ ಗದ್ದೆಯಲ್ಲಿ ಬಿದ್ದು ಒದ್ದಾಡುತ್ತಿದ್ದ ಹೆಬ್ಬಾವನ್ನು ರಕ್ಷಿಸಿ, ಅದರಲ್ಲಿ ಸಿಕ್ಕಿಹಾಕಿಕೊಂಡಿದ್ದ ಬಲೆಯನ್ನು ಬಿಡಿಸಿ ಸುರಕ್ಷಿತವಾಗಿ ಅರಣ್ಯ […]