ಉಡುಪಿ: ಅಪ್ರೆಂಟಿಸ್ ತರಬೇತಿಗೆ ಪತ್ರಿಕೋದ್ಯಮ ಪದವೀಧರರಿಂದ ಅರ್ಜಿ ಆಹ್ವಾನ
ಉಡುಪಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಪತ್ರಿಕೋದ್ಯಮ ಪದವೀಧರರಿಗೆ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ 10 ತಿಂಗಳ ಅಪ್ರೆಂಟಿಸ್ ತರಬೇತಿಗೆ ಅರ್ಹ ಪತ್ರಿಕೋಧ್ಯಮ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ. ಉಡುಪಿ ಜಿಲ್ಲಾ ಕಚೇರಿಗೆ 2021-22ನೇ ಸಾಲಿನಲ್ಲಿ ಪರಿಶಿಷ್ಟ ಜಾತಿಯ ಇಬ್ಬರು ಹಾಗೂ ಪ.ಪಂಗಡದ ಒಬ್ಬರು ಅಭ್ಯರ್ಥಿಗಳನ್ನು ಮೆರಿಟ್ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆಯಾದ ಪ್ರತಿ ಅಪ್ರೆಂಟಿಸ್ ಗೆ ತಿಂಗಳಿಗೆ […]
ರಾಷ್ಟ್ರೀಯ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ; 10 ಸಾವಿರದೊಳಗೆ ರ‍್ಯಾಂಕ್ ಗಳಿಸಿದ ಜ್ಞಾನಸುಧಾದ ಐವರು ವಿದ್ಯಾರ್ಥಿಗಳು
ಕಾರ್ಕಳ: ರಾಷ್ಟ್ರಮಟ್ಟದ ಐಐಟಿ ಇಂಜಿನಿಯರಿಂಗ್ ಪ್ರವೇಶ ಪರೀಕ್ಷೆಯಾದ ಜೆಇಇ ಅಡ್ವಾನ್ಸ್ಡ್ ನಲ್ಲಿ ಕಾರ್ಕಳ ಜ್ಞಾನಸುಧಾ ಕಾಲೇಜಿನ ಐದು ಮಂದಿ ವಿದ್ಯಾರ್ಥಿಗಳು 10 ಸಾವಿರದೊಳಗಿನ ರ‍್ಯಾಂಕ್ ಗಳಿಸಿದ್ದಾರೆ. ಈ ಮೂಲಕ ದೇಶದ ಅಗ್ರಶ್ರೇಯಾಂಕದ ಪ್ರತಿಷ್ಠಿತ 5 ಐಐಟಿಗಳಲ್ಲಿ ಪ್ರವೇಶಕ್ಕೆಅರ್ಹತೆ ಗಳಿಸಿಕೊಂಡಿದ್ದಾರೆ. ಆಲ್‍ಇಂಡಿಯಾ ರ‍್ಯಾಂಕಿಂಗ್ ನಲ್ಲಿ ಸಂಸ್ಥೆಯ ವಿದ್ಯಾರ್ಥಿಗಳಾದ ಅಭಯ್ ಕಾಮತ್ 1099 (ಕೆಸಿಇಟಿಯಲ್ಲಿ 17ನೇ ರ‍್ಯಾಂಕ್), ಮನ್ವಿತ್ ಪ್ರಭು 5179, ಶ್ರೇಯಸ್ ಪೈ 5583, ಕುಂಬಾರ್ ಅನೀಶ್ 6822, ಶ್ರೀಹರಿ ಪಡಿಗಾರ್ 9903 (ಜೆಇಇಆರ್ಕಿಟೆಕ್ಚರ್‍ನಲ್ಲಿರಾಷ್ಟ್ರ ಮಟ್ಟದಲ್ಲಿ15ನೇ ರ‍್ಯಾಂಕ್) ಬಂದಿರುತ್ತದೆ. […]
ಓಸ್ಕರ್ ಫೆರ್ನಾಂಡಿಸ್ ಅಭಿಮಾನಿ ಬಳಗ: ನಾಳೆ (ಅ.16) ನುಡಿನಮನ ಕಾರ್ಯಕ್ರಮ
ಉಡುಪಿ: ಕೇಂದ್ರದ ಮಾಜಿ ಸಚಿವರು, ರಾಜ್ಯಸಭಾ ಸದಸ್ಯರಾಗಿರುವ ದಿ. ಓಸ್ಕರ್ ಫೆರ್ನಾಂಡಿಸ್ ಸ್ಮರಣಾರ್ಥ ಅಕ್ಟೋಬರ್ 16ರಂದು (ನಾಳೆ) ಶನಿವಾರ ಸಂಜೆ 5.30ಕ್ಕೆ ‘ನುಡಿನಮನ’ ಕಾರ್ಯಕ್ರಮ ಉದ್ಯಾವರ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದ ವಠಾರದಲ್ಲಿ ನಡೆಯಲಿದೆ. ಓಸ್ಕರ್ ಫೆರ್ನಾಂಡಿಸ್ ದಿವಂಗತರಾಗಿ ಒಂದು ತಿಂಗಳು ಪೂರ್ಣಗೊಳ್ಳುತ್ತಿದ್ದು, ಈ ಹಿನ್ನಲೆಯಲ್ಲಿ ಸಂಜೆ 3.30ಕ್ಕೆ ಸಂತ ಫ್ರಾನ್ಸಿಸ್ ಝೇವಿಯರ್ ದೇವಾಲಯದಲ್ಲಿ ಪವಿತ್ರ ಪೂಜೆ ನಡೆಯಲಿದೆ. 3 ಗಂಟೆಗೆ ಝೇವಿಯರ್ ಸಭಾಭವನದಲ್ಲಿ ರಕ್ತದಾನ ಶಿಬಿರ ನಡೆಯಲಿದ್ದು, 5.30ಕ್ಕೆ ನುಡಿನಮನ ಕಾರ್ಯಕ್ರಮ ದೇವಾಲಯದ ವಠಾರದಲ್ಲಿ ಜರಗಲಿದೆ. […]
ಬೇಯಿಸಿದ ಮೊಟ್ಟೆ ತಿಂದು ಮಹಿಳೆ ಮೃತ್ಯು
ಹೈದರಾಬಾದ್: ಒಂದು ಮೊಟ್ಟೆ ಮಹಿಳೆಯೊಬ್ಬರ ಪ್ರಾಣ ತೆಗೆದ ದುರಂತ ಘಟನೆ ತೆಲಂಗಾಣದ ನೇರಳಪಲ್ಲಿಯಲ್ಲಿ ನಡೆದಿದೆ. ನೇರಳಪಲ್ಲಿಯ ನೀಲಮ್ಮ ಮೃತ ದುರ್ದೈವಿ. ಇವರು ಊಟ ಮಾಡುತ್ತಿದ್ದ ವೇಳೆ ಬೇಯಿಸಿದ ಮೊಟ್ಟೆ ತಿನ್ನಲು ಹೋಗಿದ್ದಾರೆ. ಆಗ ಅದು ಗಂಟಲಿನಲ್ಲಿ ಸಿಲುಕಿಕೊಂಡು ಅವರು ಉಸಿರುಗಟ್ಟಿ ಮೃತಪಟ್ಟಿದ್ದಾರೆ. ನೀಲಮ್ಮ ಊಟ ವೇಳೆ ಬೇಯಿಸಿದ ಮೊಟ್ಟೆಯನ್ನು ಕತ್ತರಿಸದೇ, ಹಾಗೇ ದೊಡ್ಡ ಮೊಟ್ಟೆಯನ್ನು ಬಾಯಿಯೊಳಗೆ ಹಾಕಿಕೊಂಡಿದ್ದಾರೆ. ಈ ವೇಳೆ ಮೊಟ್ಟೆ ನೇರವಾಗಿ ಗಂಟಲಿಗೆ ಹೋಗಿದೆ. ಗಂಟಲಲ್ಲಿ ಮೊಟ್ಟೆ ಸಿಲುಕಿಕೊಂಡಿದೆ. ಆಗ ಮೊಟ್ಟೆ ಗಂಟಲಿನಿಂದ ಕೆಳಗೆ ಜಾರದೇ, […]
ಐಪಿಎಲ್ 14ನೇ ಆವೃತ್ತಿ: ಕೋಲ್ಕತ್ತಾ- ಚೆನ್ನೈ ನಡುವೆ ಫೈನಲ್ ಫೈಟ್
ದುಬೈ: ಐಪಿಎಲ್ 14ನೇ ಆವೃತ್ತಿಯ ಫೈನಲ್ ಪಂದ್ಯ ಇಂದು ದುಬೈನಲ್ಲಿ ನಡೆಯಲಿದ್ದು, ಇಯಾನ್ ಮಾರ್ಗನ್ ನಾಯಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ. ಚೆನ್ನೈ 9 ಬಾರಿ ಫೈನಲ್ ಪ್ರವೇಶಿಸಿದ್ದು, ಮೂರು ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೋಲ್ಕತಾ ತಂಡವು ಮೂರನೇ ಬಾರಿಗೆ ಫೈನಲ್ ಆಡಲಿದ್ದು, ಎರಡು ಬಾರಿ ಐಪಿಎಲ್ ಪ್ರಶಸ್ತಿ ಮುಡಿಗೇರಿಸಿಕೊಂಡಿದೆ. ಎರಡೂ ತಂಡಗಳು ಲೀಗ್ ಹಂತದಲ್ಲಿ ಅಗ್ರಸ್ಥಾನದಲ್ಲಿದ್ದ ದೆಹಲಿ ಕ್ಯಾಪಿಟಲ್ಸ್ ಅನ್ನು […]