ಕಾರ್ಕಳ: ಕಾಂಗ್ರೆಸ್ ನಿಂದ ಸಾಮರಸ್ಯ ನಡಿಗೆ ಕಾರ್ಯಕ್ರಮ

ಕಾರ್ಕಳ: ಕಾರ್ಕಳ ಬ್ಲಾಕ್ ಕಾಂಗ್ರೆಸ್ ಹಾಗೂ ಮಹಿಳಾ ಕಾಂಗ್ರೆಸ್ ವತಿಯಿಂದ ಗಾಂಧಿ ಜಯಂತಿಯ ಪ್ರಯುಕ್ತ ಸಾಮರಸ್ಯ ನಡಿಗೆಯು ಗಾಂಧಿ ಮೈದಾನದಿಂದ ಬಸು ನಿಲ್ದಾಣದವರೆಗೆ ನಡೆಯಿತು. ಸಾಮರಸ್ಯ ನಡಿಗೆಯ ಮೊದಲು ಮಹಾತ್ಮ ಗಾಂಧಿಯವರ ಪ್ರತಿಮೆಗೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸದಾಶಿವ ದೇವಾಡಿಗ ಅವರು ಪುಷ್ಪಮಾಲೆಯನ್ನು ಹಾಕಿ ಗಾಂಧೀಜಿಯವರಿಗೆ ಗೌರವ ನಮನ ಸಲ್ಲಿಸಿದರು. ನಂತರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಅನಿತಾ ಡಿಸೋಜಾ ಮಾತನಾಡಿ, ಗಾಂಧೀಜಿಯವರು ದೇಶದ ಸ್ವಾತಂತ್ರ್ಯಕ್ಕಾಗಿ ಹೆಜ್ಜೆ ಹಾಕಿದರು. ನಾವು ಕೂಡ ಬಿಜೆಪಿಯ ಅರಾಜಕತೆಯ ವಿರುದ್ಧ ಹೆಜ್ಜೆ ಹಾಕೋಣ […]

ಅಂಬಲಪಾಡಿ: ಅ. 15ಕ್ಕೆ ಟೀಮ್ ಸಹರಾ ವತಿಯಿಂದ ‘ಸಹಾರಾ ವಿಜಯ ದಶಮಿ-2021’ ಕಾರ್ಯಕ್ರಮ

ಉಡುಪಿ: ಟೀಮ್ ಸಹರಾ ವತಿಯಿಂದ ಸಹಾರಾ ವಿಜಯ ದಶಮಿ – 2021 ಕಾರ್ಯಕ್ರಮವನ್ನು (ದತ್ತಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಗಮ) ಇದೇ ಅ. 15ರಂದು ಅಂಬಲಪಾಡಿಯ ಕುಂಜಗುಡ್ಡೆ ವಾಲಿಬಾಲ್ ಮೈದಾನದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮಗಳ ವಿವರ: ಸಂಜೆ 6ಕ್ಕೆ ಉದ್ಘಾಟನೆ, 6:15ಕ್ಕೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, 7ಕ್ಕೆ ಸನ್ಮಾನ ಮತ್ತು ದತ್ತಿ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ವಿಜಯಕುಮಾರ್ ಕೋಡಿಯಾಲ್ ಬೈಲ್ ನಿರ್ದೇಶನದಲ್ಲಿ ಕಲಾಸಂಗಮ ಕಲಾವಿದರಿಂದ ‘ಶಿವದೂತೆ ಗುಳಿಗೆ’ ತುಳು ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಟೀಮ್ […]

ಉಡುಪಿ: ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನ

ಉಡುಪಿ: ಪ್ರಸಕ್ತ ಸಾಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಅಲೆಮಾರಿ/ಅರೆ ಅಲೆಮಾರಿ ಹಾಗೂ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಂದ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಸೌಲಭ್ಯಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅಧಿಕೃತ ವೆಬ್‌ಸೈಟ್ www.ssp.postmatric.karnataka.gov.in/2122 ನಲ್ಲಿ ಅರ್ಜಿ ಸಲ್ಲಿಸಲು ಅಕ್ಟೋಬರ್ 31 ಕೊನೆಯ ದಿನವಾಗಿದ್ದು, ದಾಖಲೆಗಳ ವಿವರ ಹಾಗೂ ಹೆಚ್ಚಿನ ಮಾಹಿತಿಗಾಗಿ www.bcwd.karnataka.gov.in/ ಅಥವಾ ಇಲಾಖಾ ವೆಬ್ ಸೈಟ್ [email protected] ದೂರವಾಣಿ ಸಂಖ್ಯೆ 80507 70005, […]

ಕುಂದಾಪುರ: ಅನಧಿಕೃತ ಕ್ಲಿನಿಕ್‌ಗೆ ಬೀಗಜಡಿದ ಅಧಿಕಾರಿಗಳು

ಕುಂದಾಪುರ: ಕುಂದಾಪುರ ತಾಲೂಕಿನ ಬಂಟ್ವಾಡಿಯಲ್ಲಿ ಅನಧಿಕೃತವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮೂಕಾಂಬಿಕಾ ಖಾಸಗಿ ಕ್ಲಿನಿಕ್‌ ಅನ್ನು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೊಂದಣಾ ಪ್ರಾಧಿಕಾರ ಉಡುಪಿ ಇದರ ಅಡಿಯಲ್ಲಿ ಕುಂದಾಪುರ ತಾಲೂಕಿನ ಆರೋಗ್ಯಾಧಿಕಾರಿ ಡಾ. ರಾಜೇಶ್ವರಿ ತನಿಖೆ ನಡೆಸಿ ಬೀಗ ಹಾಕಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಹಾಗೂ ಕೆ.ಪಿ.ಎಮ್.ಇ ನೋಡಲ್ ಅಧಿಕಾರಿ ಡಾ. ರಾಮ್ ರಾವ್.ಕೆ, ಕೊರ್ಗಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ. ಪ್ರತಾಪ್, ಕುಂದಾಪುರ ಸಾರ್ವಜನಿಕ ಆಸ್ಪತ್ರೆಯ ಆಯುಷ್ ವೈದ್ಯಾಧಿಕಾರಿ ಡಾ […]

ಮಲ್ಪೆ: ಮೀನುಗಾರರ ಬಲೆಗೆ ಬಿದ್ದ ಬರೋಬ್ಬರಿ 84 ಕೆ.ಜಿ. ತೂಕದ ನೆಮ್ಮೀನ್ (ಹೆಲಿಕಾಪ್ಟರ್ ಫಿಶ್).!

ಉಡುಪಿ: ಮೀನುಗಾರರ ಬಲೆಗೆ ಅಪರೂಪದ ಭಾರೀ ಗಾತ್ರದ ನೆಮ್ಮೀನ್ (ಹೆಲಿಕಾಪ್ಟರ್ ಫಿಶ್) ಬಿದ್ದಿರುವ ಘಟನೆ ಮಲ್ಪೆಯಲ್ಲಿ ನಡೆದಿದೆ. ಮಲ್ಪೆ ಬಂದರಿನಿಂದ ಪಶ್ಚಿಮ ಕಡಲ ತೀರದಲ್ಲಿ ಸುಮಾರು 20 ನಾಟೇಕಲ್ ದೂರದಲ್ಲಿ ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟ್ ನ ಮೀನುಗಾರರಿಗೆ ಈ ಮೀನು ಸಿಕ್ಕಿದೆ. ಬರೋಬ್ಬರಿ 84 ಕೆ.ಜಿ. ತೂಕದ ಈ ಮೀನು ಉದ್ದನೆಯ ಬಾಲ ಹಾಗೂ ರೆಕ್ಕೆಯ ಮೂಲಕ ಅಚ್ಚರಿ ಹುಟ್ಟಿಸಿತು. ಈ ನೆಮ್ಮೀನ್ ನನ್ನು ಕರ್ನಾಟಕದ ಜನ ಅಷ್ಟಾಗಿ ತಿನ್ನುವುದಿಲ್ಲ. ಕೇರಳಿದವರು ಈ ಮೀನನ್ನು […]