ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದ ಅಕ್ಷತಾ ಪೂಜಾರಿಗೆ ಹುಟ್ಟೂರಿನಲ್ಲಿ ಭವ್ಯ ಸ್ವಾಗತ: ಪೂರ್ಣಿಮಾ ಸಿಲ್ಕ್ ವತಿಯಿಂದ ಸನ್ಮಾನ
ಕಾರ್ಕಳ: ತೆಲಂಗಾಣದ ವಾರಂಗಲ್‌ನಲ್ಲಿ ನಡೆದ ರಾಷ್ಟ್ರೀಯ ಮುಕ್ತ ಚಾಂಪಿಯನ್‌ಶಿಪ್‌ನ ಹೆಪ್ಟಾಥ್ಲಾನ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಕಾರ್ಕಳ ತಾಲೂಕು ಕೆರ್ವಾಶೆ ಗ್ರಾಮದ ಅಕ್ಷತಾ ಪೂಜಾರಿ ಅವರನ್ನು ಭವ್ಯ ಸ್ವಾಗತದೊಂದಿಗೆ ಕಾರ್ಕಳಕ್ಕೆ ಬರಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಜೋಡುರಸ್ತೆ ಪೂರ್ಣಿಮಾ ಸಿಲ್ಕ್ ಸಂಸ್ಥೆಯ ಪಾಲುದಾರ ರವಿಪ್ರಕಾಶ್ ಪ್ರಭು ಮತ್ತು ಕಿರಣಾ ರವಿ ಪ್ರಕಾಶ್ ಅವರು ಅಕ್ಷತಾ ಅವರನ್ನು ಸನ್ಮಾನಿಸಿದರು. ಬಿಜೆಪಿ ರಾಜ್ಯ ವಕ್ತಾರ ಗಣೇಶ್ ಕಾರ್ಣಿಕ್, ಯುವರಾಜ್ ಶೆಟ್ಟಿ, ಯೋಗೀಶ್ ಸಾಲ್ಯಾನ್, ಭರತ್ ಶೆಟ್ಟಿ, ರವಿಕುಮಾರ್ ಶೆಟ್ಟಿ, ಚಿರಂಜೀವಿ ವಿಜಯ್, […]
ಕಾರ್ಕಳ: ಹೃದಯಾಘಾತದಿಂದ ಪುರಸಭೆಯ ಅಧಿಕಾರಿ ನಿಧನ
ಕಾರ್ಕಳ: ಕಾರ್ಕಳ ಪುರಸಭೆಯ ನೀರು ಸರಬರಾಜು ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಜಯಪ್ರಕಾಶ್ ಶೆಟ್ಟಿ (41) ಅವರು ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ತಾಯಿ, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
ಪಂಡಿತ್ ದೀನದಯಾಳ್ ಉಪಾಧ್ಯಾಯ ಜೀವನಾದರ್ಶ, ಬಲಿದಾನ ಸದಾ ಸ್ಮರಣೀಯ: ಶೋಭಾ ಕರಂದ್ಲಾಜೆ
ಉಡುಪಿ: ಪಂಡಿತ್ ದೀನದಯಾಳ್ ಉಪಾಧ್ಯಾಯರವರು ದೇಶಕ್ಕಾಗಿ ಬದುಕಿದವರು. ಸಾಮಾನ್ಯ ಕುಟುಂಬದಲ್ಲಿ ಜನಿಸಿ ಅದೆಷ್ಟು ಬುದ್ಧಿವಂತರಾಗಿದ್ದರೂ ಯಾವುದೇ ಉದ್ಯೋಗವನ್ನು ಅರಸದೆ ತನ್ನ ಜೀವನವನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿಕೊಂಡವರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯನ್ನು ಪಡೆದು ಅದರ ಸೂಚನೆಯ ಮೇರೆಗೆ ಭಾರತೀಯ ಜನ ಸಂಘಕ್ಕೆ ಬಂದು ಡಾ. ಶ್ಯಾಮಪ್ರಸಾದ್ ಮುಖರ್ಜಿಯವರ ನಿಧನದ ನಂತರ ದೇಶಾದ್ಯಂತ ತನ್ನ ಜವಾಬ್ದಾರಿಯನ್ನು ಹೊತ್ತುಕೊಂಡು ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಕುತಂತ್ರಿಗಳ ಷಡ್ಯಂತ್ರದ ಪಿತೂರಿಗೆ ಬಲಿಯಾದರು. ಪಂಡಿತ್ ದೀನದಯಾಳ್ ಉಪಾಧ್ಯಾಯರವರ ಜೀವನಾದರ್ಶ, ಬಲಿದಾನ ಸದಾ ಸ್ಮರಣೀಯ ಎಂದು ಕೇಂದ್ರ ಕೃಷಿ […]
ಬ್ರಹ್ಮಾವರ: ವಿಷ್ಣುಮೂರ್ತಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ನೇಣಿಗೆ ಶರಣು
ಬ್ರಹ್ಮಾವರ: ಆರೂರು ವಿಷ್ಣುಮೂರ್ತಿ ದೇವಸ್ಥಾನದ ಆಡಳಿತದ ಮೊಕ್ತೇಸರ, ಹಾವಂಜೆ ದೊಂಪದಕುಮೇರಿ ನಿವಾಸಿ ವೈದ್ಯ ಡಾ. ಎಂ. ರಾಘವೇಂದ್ರ ರಾವ್ (76) ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಘವೇಂದ್ರ ಅವರ ಪತ್ನಿ ಒಂದು ತಿಂಗಳ ಹಿಂದೆ ಮೃತಪಟ್ಟಿದ್ದರು. ಇಬ್ಬರು ಪುತ್ರಿಯರು ಮಂಗಳೂರಿನಲ್ಲಿ ವಾಸಮಾಡಿಕೊಂಡಿದ್ದರು. ಇದರಿಂದ ರಾಘವೇಂದ್ರ ಅವರಿಗೆ ಒಂಟಿತನ ಕಾಡಿದ್ದು, ಇದೇ ಖಿನ್ನತೆಯಲ್ಲಿ ನಿನ್ನೆ ಸಂಜೆ ಮನೆಯಲ್ಲಿ ಕೊಠಡಿಯ ಜಂತಿಗೆ ಸೀರೆಯನ್ನು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.