ರಾಜ್ಯ ಮಲೆಕುಡಿಯ ಸಂಘದ ಮಹಾಸಭೆಯ ಪೂರ್ವ ಸಿದ್ಧತಾ ಸಭೆ

ಉಡುಪಿ: ರಾಜ್ಯ ಮಲೆಕುಡಿಯ ಸಂಘದ ಮಹಾಸಭೆಯ ಪೂರ್ವ ಸಿದ್ಧತಾ ಸಭೆಯು ರಾಜ್ಯಾಧ್ಯಕ್ಷ ಅಣ್ಣಪ್ಪ ಎನ್. ಅವರ ಅಧ್ಯಕ್ಷತೆಯಲ್ಲಿ ಬೆಳ್ತಂಗಡಿ ಕೊಯ್ಯುರು ಶಿವಗಿರಿ ಮಲೆಕುಡಿಯ ಸಮುದಾಯ ಭವನದಲ್ಲಿ ಭಾನುವಾರ ಜರಗಿತು. ಈ ಸಭೆಯಲ್ಲಿ ಬೈಲಾ ರಚನಾ ಸಭೆ ನಡೆಸುವ ಬಗ್ಗೆ, ವರ್ಷದ ಡಿಸೆಂಬರ್ ಅಂತ್ಯದೊಳಗೆ ಮಹಾಸಭೆ ಆಯೋಜಿಸುವುದು, ಜಾತಿ ಪ್ರಮಾಣದಲ್ಲಿ ನಮೂದಿಸಿರುವ ಜಾತಿಯ ಕುರಿತು ಇರುವ ಗೊಂದಲ ನಿವಾರಣೆ ಕುರಿತಾಗಿ ಚರ್ಚಿಸಲಾಯಿತು. ರಾಜ್ಯದ ಸಂಘ ಪದಾಧಿಕಾರಿಗಳು, ಜಿಲ್ಲಾ ಸಂಘದ ಪದಾಧಿಕಾರಿಗಳು, ಬೆಳ್ತಂಗಡಿ ತಾಲೂಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯ […]

ಉಡುಪಿ: ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬ್ ಮತ್ತು ಮೆಡಿಕೇರ್ ಮೆಡಿಕಲ್ಸ್ ಉದ್ಘಾಟನೆ

ಉಡುಪಿ: ನಗರದ ಕೋರ್ಟ್ ಬದಿಯ ರಸ್ತೆಯ ಹೊಟೇಲ್ ಉಷಾ ಎದುರಿನ ಪೈ ಸೇಲ್ಸ್ ಹಿಂಬದಿಯಲ್ಲಿರುವ ಮೆಡಿಕೇರ್ ಸೆಂಟರ್ ಕಟ್ಟಡದಲ್ಲಿ ಗಿರಿಜಾ ಗ್ರೂಪ್ ಆಫ್ ಕನ್ಸರ್ನ್‌ನ ಅಂಗ ಸಂಸ್ಥೆಯಾಗಿ ಮೆಡಿಕೇರ್ ಕ್ಲಿನಿಕಲ್ ಆ್ಯಂಡ್ ಡಯಾಗ್ನೋಸ್ಟಿಕ್ ಲ್ಯಾಬ್ ಮತ್ತು ಮೆಡಿಕೇರ್ ಮೆಡಿಕಲ್ಸ್ ಭಾನುವಾರ ಶುಭಾರಂಭಗೊಂಡಿತು. ಮೂಳೆ ತಜ್ಞ ಡಾ.ರವೀಂದ್ರನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗಿರಿಜಾ ಹೆಲ್ತ್ ಕೇರ್ ಸಂಸ್ಥೆ ತನ್ನ ಸೇವೆಯ ಇಂದು ಕರಾವಳಿಯಾದ್ಯಂತ ಮನೆಮಾತಾಗಿದೆ. ರಾಜ್ಯದ ಹಲವು ಕಡೆ ಶಾಖೆಗಳನ್ನು ತೆರೆಯಲು ಉದ್ದೇಶಿಸಿರುವ ಈ ಸಂಸ್ಥೆ ಮುಂದೆ ಇನ್ನಷ್ಟು […]

ಕೃಷಿ ಕಾಯಿದೆ ತಿದ್ದುಪಡಿ ಮಸೂದೆಯ ಮೂಲಕ ರೈತರ ಬೆನ್ನುಮೂಳೆ ಮುರಿಯುವ ಯತ್ನ: ಉಡುಪಿ ಜಿಲ್ಲಾ ಕಾಂಗ್ರೆಸ್

ಉಡುಪಿ: ಕೃಷಿ ಕಾಯಿದೆ ತಿದ್ದುಪಡಿ ಮಸೂದೆಯ ಮೂಲಕ ದೇಶದ ಬೆನ್ನೆಲುಬಾಗಿರುವ ರೈತರ ಬೆನ್ನುಮೂಳೆ ಮುರಿಯುವ ಕೇಂದ್ರದ ಧಮನಕಾರಿ ನಿಲುವು ಅಸಾಂವಿಧಾನಿಕವಾಗಿದ್ದು ಇದರ ವಿರುದ್ಧ ನಡೆಯುವ ರೈತ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಸಂಪೂರ್ಣ ಬೆಂಬಲವಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಹೇಳಿದೆ. ದಿ.27ರಂದು ರೈತ ಸಂಘಟನೆಗಳು ಕರೆಕೊಟ್ಟ ಭಾರತ ಬಂದ್ ಮುಷ್ಕರ ಕಾರ್ಯಕ್ರಮವನ್ನು ಒಂದು ರಾಷ್ಟ್ರೀಯ ಆಂದೋಲನವನ್ನಾಗಿಸಿ ಯಶಸ್ವಿಗೊಳಿಸಿ ಕೇಂದ್ರ ಸರಕಾರವನ್ನು ಎಚ್ಚರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಸೋಮವಾರದ ಬಾರತ್ ಬಂದ್ ಕಾರ್ಯಕ್ರಮದಲ್ಲಿ ಎಲ್ಲ ಕಾಂಗ್ರೆಸ್ ಕಾರ್ಯಕರ್ತರು […]

ಕಾರ್ಕಳ: ಅತ್ತೂರು ಸಂತ ಲಾರೆನ್ಸ್ ಹೈಸ್ಕೂಲ್ ನಲ್ಲಿ ಹಿಂದಿ ದಿವಸ್ ಆಚರಣೆ

ಕಾರ್ಕಳ: ಮಾತೃ ಭಾಷೆಯ ಜೊತೆಗೆ ಪ್ರಪಂಚದೆಲ್ಲೆಡೆ ಅಧಿಕವಾಗಿ ಬಳಸಲ್ಪಡುವ ಹಿಂದಿ ಭಾಷೆಯನ್ನು ವೃದ್ಧಿಗೊಳಿಸಲು ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರನ್ನು ಸನ್ಮಾನಿಸುವುದರ ಮೂಲಕ ಹಿಂದಿ ದಿವಸ್ ಆಚರಣೆ ಅರ್ಥಪೂರ್ಣವಾಗುವುದೆಂದು ಸಂತ ಲೋರೆನ್ಸ್ ಪ್ರೌಢಶಾಲಾ ಹಿಂದಿ ಶಿಕ್ಷಕಿ ಜೆನಿಫರ್ ಆಗ್ನೆಸ್ ಡಿಸಿಲ್ವ ಹೇಳಿದರು. ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಹೈಸ್ಕೂಲ್ ನಲ್ಲಿ ನಡೆದ ಹಿಂದಿ ದಿವಸ್ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಉಡುಪಿ ಜಿಲ್ಲಾ ಉಪನಿರ್ದೇಶಕರಾದ ಎನ್.ಎಚ್. ನಾಗೂರ ಅವರು, 2021ನೇ ಸಾಲಿನ […]

ಕರಾವಳಿ ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೂರು ದಿನ ಭಾರೀ ಮಳೆ: ಹವಾಮಾನ ಇಲಾಖೆ

ಬೆಂಗಳೂರು: ಕರಾವಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಹಾವೇರಿ, ಕೊಪ್ಪಳ, ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಧಾರವಾಡ ಜಿಲ್ಲೆಯಲ್ಲಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ತಿಳಿಸಿದೆ.