ಮಲ್ಪೆ: ಸಮುದ್ರದಲ್ಲಿ ಮುಳುಗುತ್ತಿದ್ದ ನಾಲ್ವರ ರಕ್ಷಣೆ

ಮಲ್ಪೆ: ಸಮುದ್ರದಲ್ಲಿ ಈಜಲು ಹೋಗಿ ಅಲೆಯ ಅಬ್ಬರಕ್ಕೆ ಸಿಲುಕಿ ಮುಳುಗುವ ಸ್ಥಿತಿಯಲ್ಲಿದ್ದ ನಾಲ್ವರು ಪ್ರವಾಸಿಗರನ್ನು ಲೈಫ್‌ ಗಾರ್ಡ್ಸ್‌ ರಕ್ಷಣೆ ಮಾಡಿದ ಘಟನೆ ಮಲ್ಪೆ ಬೀಚ್‌ನಲ್ಲಿ ಗುರುವಾರ ನಡೆದಿದೆ. ಕಲಬುರ್ಗಿಯ ಅನಿಲ್ ಕುಮಾರ್ (21), ಅಬ್ಬಾಸ್ ಅಲಿ (19), ಅನಿಲ್ ಕುಮಾರ್ (21) ಹಾಗೂ ಮಂಡ್ಯ ಜಿಲ್ಲೆಯ ನೆರೆಕೆರೆಯ ನಿತಿನ್ (18) ರಕ್ಷಿಸಲಿಟ್ಟಿದ್ದಾರೆ. ಮಳೆಗಾಲದಲ್ಲಿ ಸಮುದ್ರ ಪ್ರಕ್ಷುಬ್ಧಗೊಂಡು ಅಲೆಗಳ ಉಬ್ಬರ ಹೆಚ್ಚಾಗಿರುತ್ತದೆ. ಹೆಚ್ಚು ಆಳಕ್ಕೆ ಇಳಿಯದಂತೆ ಲೈಫ್‌ಗಾರ್ಡ್ಸ್‌ ಸೂಚನೆ ನೀಡಿದರೂ ನಿರ್ಲಕ್ಷ್ಯದಿಂದ ಪ್ರವಾಸಿಗರು ಪ್ರಾಣಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕೆಲವು […]

ರಾಷ್ಟ್ರೀಯ ಶಿಕ್ಷಣ ನೀತಿ 2020ರ ರಾಜ್ಯ ಕಾರ್ಯಪಡೆಯ ಸದಸ್ಯರಾಗಿ ಡಾ. ಮಹಾಬಲೇಶ್ವರ ರಾವ್ ನೇಮಕ

ಉಡುಪಿ: ಉಡುಪಿ ಡಾ. ಟಿಎಂಎ ಪೈ ಶಿಕ್ಷಣ ಕಾಲೇಜಿನ ಸಮನ್ವಯಾಧಿಕಾರಿ, ಶಿಕ್ಷಣ ಚಿಂತಕ ಡಾ. ಮಹಾಬಲೇಶ್ವರ ರಾವ್ ಅವರನ್ನು ಕರ್ನಾಟಕ ರಾಜ್ಯ ಸರಕಾರ ‘ರಾಷ್ಟ್ರೀಯ ಶಿಕ್ಷಣ ನೀತಿ 2020’ರ ಅನುಷ್ಠಾನ ಕುರಿತಾದ ಕಾರ್ಯಪಡೆಯ ಸದಸ್ಯರನ್ನಾಗಿ ನೇಮಕ ಮಾಡಿದೆ. ಮಹಾಬಲೇಶ್ವರ ರಾವ್, ಸ್ವತಂತ್ರ ಹಾಗೂ ಅನುವಾದ ಎರಡೂ ಸೇರಿ 145ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ 2019ನೇ ಸಾಲಿನ ಪುಸ್ತಕ ಬಹುಮಾನ ಪಡೆದಿರುವ ಡಾ. ರಾವ್, ಕಳೆದ ನಲವತ್ತೈದು ವರ್ಷಗಳಿಂದ ಶಿಕ್ಷಣ ಕ್ಷೇತ್ರದಲ್ಲಿ ತಮ್ಮನ್ನು ತಾವು […]

ಉಡುಪಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಹೆರಿಟೇಜ್ ಚಿನ್ನಾಭರಣ ಪ್ರದರ್ಶನ- ಮಾರಾಟಕ್ಕೆ ಚಾಲನೆ

ಉಡುಪಿ: ನಗರದ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಮಳಿಗೆಯಲ್ಲಿ ಸೆ.30ರವರೆಗೆ ಪ್ರಪಥಮ ಬಾರಿಗೆ ಹಮ್ಮಿಕೊಳ್ಳಲಾದ ಹೆರಿಟೇಜ್ ಕಲಾತ್ಮಕ ಚಿನ್ನಾಭರಣಗಳ ಸಂಗ್ರಹಗಳೊಂದಿಗೆ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಬುಧವಾರ ಚಾಲನೆ ದೊರೆತಿದೆ. ಅಜೆಕಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ವಿದ್ಯಾ ಪೈ ಹೆರಿಟೇಜ್ ಕಲಾತ್ಮಕ ಚಿನ್ನಾಭರಣಗಳನ್ನು ಅನಾವರಣಗೊಳಿಸುವ ಮೂಲಕ ಪ್ರದರ್ಶನಕ್ಕೆ ಚಾಲನೆ ನೀಡಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ರೂಪದರ್ಶಿಗಳಾದ ಅನುರಾಧ,ಸುಮಾ ಆರ್, ಸ್ಪರ್ಶ ಜೈನ್ ಹಾಗೂ ಸಮೀಕ್ಷಾ ಕ್ಯಾಟ್ವಾಕ್ ಮೂಲಕ […]

ಕಾರ್ಕಳ: ನಿವೃತ್ತ ಉಪನ್ಯಾಸಕ ಆತ್ಮಹತ್ಯೆಗೆ ಶರಣು

ಕಾರ್ಕಳ: ನಿವೃತ್ತ ಕಾಲೇಜು ಉಪನ್ಯಾಸಕರೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ತೆಳ್ಳಾರು ಎಂಬಲ್ಲಿ ನಡೆದಿದೆ. ಕಾರ್ಕಳ ಭುವನೇಂದ್ರ ಕಾಲೇಜಿನ ನಿವೃತ್ತ ಉಪನ್ಯಾಸಕ ತೆಳ್ಳಾರು 14ನೇ ಅಡ್ಡರಸ್ತೆಯ ಭಾಗೀರತಿ ನಿವಾಸದ ಟಿ. ಜಯರಂಗ ಭಟ್ (75) ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಪತ್ನಿ, ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮಣಿಪಾಲ: ಎಂಐಟಿಯ 35 ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗ; ವಾರ್ಷಿಕ 44 ಲಕ್ಷ ರೂ.ಗಳ ಪ್ಯಾಕೇಜ್

ಉಡುಪಿ: ಮಣಿಪಾಲ ಎಂಐಟಿ ಕಾಲೇಜಿನ 35 ವಿದ್ಯಾರ್ಥಿಗಳಿಗೆ ಮೈಕ್ರೋಸಾಫ್ಟ್ ನಲ್ಲಿ ಉದ್ಯೋಗ ಲಭಿಸಿದ್ದು, ವಾರ್ಷಿಕ 44 ಲಕ್ಷ ರೂ. ಗಳ ಪ್ಯಾಕೇಜ್ ದೊರೆಯಲಿದೆ. ಇತ್ತೀಚೆಗಿನ ವರ್ಷಗಳಲ್ಲಿ ಅಂತಿಮ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೀಡಲಾದ ಅತೀ ದೊಡ್ಡ ಮೊತ್ತದ ಸಂಬಳದ ಪ್ಯಾಕೇಜ್ ಇದಾಗಿರುವುದಾಗಿ ಎಂಐಟಿ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ. ಮೈಕ್ರೋಸಾಫ್ಟ್ ಅಲ್ಲದೆ ಅಡೋಬ್‌, ಅಮೆಜಾನ್‌, ಬಜಾಜ್‌ ಫಿನ್‌ಸರ್ವ್‌, ಚಾರ್ಜ್‌ಬೀ, ಸಿಸ್ಕೊ ಸಿಸ್ಟಮ್ಸ್‌, ಸಿಟ್ರಿಕ್ಸ್‌ ಆರ್‌ ಆ್ಯಂಡ್‌ ಡಿ, ಕ್ಲೌಡೆರಾ, ವೆಸ್ಟರ್ನ್ ಡಿಜಿಟಲ್‌ನಂತಹ ಪ್ರತಿಷ್ಠಿತ ಕಂಪೆನಿಗಳು ವರ್ಚುವಲ್‌ ಮೂಲಕ ಕ್ಯಾಂಪಸ್‌ […]