ಮಣಿಪಾಲ: ನಾಪತ್ತೆಯಾಗಿದ್ದ ಬಾಲಕ ಪತ್ತೆ
ಮಣಿಪಾಲ: ಇಂದು ಮಧ್ಯಾಹ್ನ ಬಳಿಕ ನಾಪತ್ತೆಯಾಗಿದ್ದ ಮಣಿಪಾಲ ದಶರಥ ನಗರ 2ನೇ ಹಂತದ ನಿವಾಸಿ ವಿನುತಾ ಮಂಜುನಾಥ ಎಂಬವರ ಮಗ ಯತಿನ್ ಎಂಬಾತ ಸಂಜೆಯ ವೇಳೆ ಮಲ್ಪೆಯಲ್ಲಿ ಪತ್ತೆಯಾಗಿದ್ದಾನೆ. ಮಾಜಿ ಗ್ರಾಪಂ ಸದಸ್ಯ ರಾಘವೇಂದ್ರ ಶಾಂತಿನಗರ ಅವರು ಬಾಲಕನನ್ನು ಮಲ್ಪೆಯಲ್ಲಿ ಪತ್ತೆ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಈತ ಮನೆಯಲ್ಲಿ ಯಾರಿಗೂ ಹೇಳದೆ ಒಬ್ಬನೇ ಮಲ್ಪೆಗೆ ಹೋಗಿದ್ದ ಎನ್ನಲಾಗಿದೆ. ಎಷ್ಟು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಬಾಲಕನ ಪತ್ತೆಗಾಗಿ ವಾಟ್ಸಾಪ್ ನಲ್ಲಿ ಪೋಟೊ ಹಾಕಿ ಸಂದೇಶ ಕಳುಹಿಸಲಾಗಿತ್ತು. ಸಾಕಷ್ಟು […]
ರಾಜ್ಯದಲ್ಲಿ ಬಾಕಿ ಇರುವ ಚುನಾವಣೆಗಳಿಗೆ ಗ್ರೀನ್ ಸಿಗ್ನಲ್ ನೀಡಿದ ಸರ್ಕಾರ
ಬೆಂಗಳೂರು: ರಾಜ್ಯದಲ್ಲಿ ಬಾಕಿ ಇರುವ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸರ್ಕಾರ ಹಸಿರು ನಿಶಾನೆ ನೀಡಿದೆ. ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆಗಳ ಅಧ್ಯಕ್ಷ, ಉಪಾಧ್ಯಕ್ಷ, ಮೇಯರ್ ಮತ್ತು ಉಪ ಮೇಯರ್ ಹಾಗೂ ಇತರ ಪದಾಧಿಕಾರಿಗಳ ಆಯ್ಕೆಗೆ ಬಾಕಿ ಇರುವ ಚುನಾವಣೆಗಳನ್ನು ನಡೆಸಲು ಮಂಗಳವಾರದ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಹಕಾರ ಸಂಘಗಳು, ನೋಂದಾಯಿತ ಸೊಸೈಟಿಗಳು, […]
ಬಿಜೆಪಿ ಮಹಿಳಾ ಮೋರ್ಚಾ ಕಾರ್ಕಳ: ಸೇವೆ ಮತ್ತು ಸಮರ್ಪಣ ಅಭಿಯಾನ
ಕಾರ್ಕಳ: ಸೇವೆ ಮತ್ತು ಸಮರ್ಪಣ ಅಭಿಯಾನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಹುಟ್ಟು ಹಬ್ಬದ ಸಲುವಾಗಿ ಬಿಜೆಪಿ ಮಹಿಳಾ ಮೋರ್ಚಾ ಮತ್ತು ಕುಕ್ಕುಂದೂರು ಮಹಾ ಶಕ್ತಿ ಕೇಂದ್ರದ ವತಿಯಿಂದ ಕೌಡೂರು ಗ್ರಾಮದ ವಿಕಲಚೇತನ ಮಕ್ಕಳಾದ ಅಕ್ಷಯ್ ಹಾಗೂ ಆದಿತ್ಯ ನಿವಾಸಕ್ಕೆ ತೆರಳಿ ಆಹಾರ ಧಾನ್ಯಗಳ ಕಿಟ್ ವಿತರಿಸುವ ಜೊತೆಗೆ ಆರ್ಥಿಕ ನೆರವು ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುಮಿತ್ ಶೆಟ್ಟಿ, ಬಿಜೆಪಿ ಕಾರ್ಕಳ ಮಹಿಳಾ ಮೋರ್ಚಾ ಅಧ್ಯಕ್ಷೆ […]
ಮಣಿಪಾಲ: ಎಪಿಐ ಕರ್ನಾಟಕ ಚಾಪ್ಟರ್ ವಾರ್ಷಿಕ ಸಮ್ಮೇಳನ- ಕಾಪಿಕಾನ್ 2020-21 ಉದ್ಘಾಟನೆ
ಮಣಿಪಾಲ: ಎಪಿಐ ಉಡುಪಿ- ಮಣಿಪಾಲ ಚಾಪ್ಟರ್ ಮತ್ತು ಕೆಎಂಸಿ ಮಣಿಪಾಲ ವೈದ್ಯಕೀಯ ವಿಭಾಗ, ಮಾಹೆ ಮಣಿಪಾಲದ ಸಂಯುಕ್ತ ಆಶ್ರಯದಲ್ಲಿ ಹೋಟೆಲ್ ಮಣಿಪಾಲ್ ಇನ್ ನಲ್ಲಿ ಎಪಿಐ ಕರ್ನಾಟಕ ಚಾಪ್ಟರ್ ವಾರ್ಷಿಕ ಸಮ್ಮೇಳನ- ಕಾಪಿಕಾನ್ 2020-21 ಅನ್ನು ಆಯೋಜಿಸಲಾಯಿತು. ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ.ಎಚ್.ಎಸ್ ಬಲ್ಲಾಳ್ ಸಮ್ಮೇಳನಕ್ಕೆ ಚಾಲನೆ ನೀಡಿದರು. ಮಾಹೆ ಮಣಿಪಾಲದ ಕುಲಪತಿಗಳಾದ ಲೆಫ್ಟಿನೆಂಟ್ ಜನರಲ್ (ಡಾ) ಎಂ ಡಿ ವೆಂಕಟೇಶ್ , ಸಹ ಕುಲಪತಿ (ಆರೋಗ್ಯ ವಿಜ್ಞಾನ )ಗಳಾದ ಡಾ. ಪಿ ಎಲ್ ಎನ್ […]
ಉಡುಪಿ: ಲಕ್ಷ್ಮೀಂದ್ರನಗರ ನಿವಾಸಿ ಲಲಿತಾ ಎಸ್. ಶೆಟ್ಟಿಗಾರ್ ನಿಧನ
ಉಡುಪಿ: ಇಲ್ಲಿನ ಲಕ್ಷ್ಮೀಂದ್ರನಗರ ನಿವಾಸಿ ಲಲಿತಾ ಎಸ್. ಶೆಟ್ಟಿಗಾರ್ (72) ಮಂಗಳವಾರ ನಿಧನರಾದರು. ಮೃತರಿಗೆ ವಿಜಯ ಕರ್ನಾಟಕ ಉಡುಪಿ ಆವೃತ್ತಿಯ ಜಾಹೀರಾತು ವಿಭಾಗದ ಡೆಪ್ಯುಟಿ ಮ್ಯಾನೇಜರ್ ರವಿ ಶೆಟ್ಟಿಗಾರ್ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆಯು ಸೆ. 22 ರಂದು ಬೆಳಗ್ಗೆ 9.30 ರ ಸುಮಾರಿಗೆ ಇಂದ್ರಾಳಿ ಹಿಂದೂ ರುದ್ರಭೂಮಿಯಲ್ಲಿ ನಡೆಯಲಿದೆ.