ಭಾರತ ಹಿಂದಿನಂತೆಯೇ ಅಫ್ಗನ್ನರ ಪರವಾಗಿ ನಿಲ್ಲಲಿದೆ: ಜೈಶಂಕರ್
ನವದೆಹಲಿ: ಅಫ್ಘಾನಿಸ್ತಾನವು ಗಂಭೀರವಾದ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಭಾರತವು ಹಿಂದಿನಂತೆಯೇ ಅಘ್ಗನ್ನರ ಪರವಾಗಿ ನಿಲ್ಲಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಉನ್ನತಮಟ್ಟದ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ನೆರೆಯ ರಾಷ್ಟ್ರವಾಗಿ ಭಾರತವು ಅಲ್ಲಿನ ಬೆಳವಣಿಗೆಗಳನ್ನು ಗಮನಿಸುತ್ತಿದೆ. ಅಫ್ಘಾನಿಸ್ತಾನಕ್ಕೆ ಸಹಾಯ ಮಾಡಲು ಸಾಧ್ಯವಾದಷ್ಟು ಉತ್ತಮವಾದ ವಾತಾವರಣವನ್ನು ಸೃಷ್ಟಿಸಲು ಅಂತರರಾಷ್ಟ್ರೀಯ ಸಮುದಾಯವು ಒಗ್ಗೂಡಬೇಕು ಎಂದೂ ಜೈಶಂಕರ್ ಕರೆ ನೀಡಿದರು.
ಆಸ್ಕರ್ ಫೆರ್ನಾಂಡೀಸ್ ನಿಧನಕ್ಕೆ ಕ್ಸೇವಿಯರ್ ಡಿಮೆಲ್ಲೋ ಸಂತಾಪ
ಕಾರ್ಕಳ:ಮಾಜಿ ಸಚಿವ ಹಾಗೂ ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಫೆರ್ನಾಂಡೀಸ್ ಅವರ ನಿಧನಕ್ಕೆ ಬೆಳ್ಮಣ್ ಮಾಜಿ ತಾ.ಪಂ.ಸದಸ್ಯ,ಸಾಮಾಜಿಕ ಹೋರಾಟಗಾರರಾದ ಕ್ಸೇವಿಯರ್ ಡಿಮೆಲ್ಲೋ ಅವರು ಸಂತಾಪ ಸೂಚಿಸಿದ್ದಾರೆ. ಆಸ್ಕರ್ ಫೆರ್ನಾಂಡಿಸ್ ಅವರಿಂದ ಬೆಳ್ಮಣ್ ಭಾಗದಲ್ಲಿ ರಸ್ತೆ ಕಾಮಗಾರಿಗಳು ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಗಳಾಗಿವೆ.ಕರಾವಳಿಯ ಸಾಮಾನ್ಯ ಕುಟುಂಬದಲ್ಲಿ ಜನಿಸಿ ರಾಷ್ಟ್ರೀಯ ಕಾಂಗ್ರೆಸ್ ನಾಯಕರಾಗಿ ಮೇರು ವ್ಯಕ್ತಿತ್ವ ಹೊಂದಿದ್ದ ಆಸ್ಕರ್ ಫೆರ್ನಾಂಡೀಸ್ ಅವರು ತಮ್ಮ ಸರಳ ಸಜ್ಜನಿಕೆಯ ಮೂಲಕ ದೇಶಾದ್ಯಂತ ಅಪಾರ ಮಂದಿ ಪಕ್ಷಾತೀತ ಅಭಿಮಾನಿಗಳನ್ನು ಹೊಂದಿದ್ದರು.ಎಂದವರು ತಿಳಿಸಿದ್ದಾರೆ. ಅವರ ಅಕಾಲಿಕ […]
ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರ ಉಡುಪಿಗೆ ಆಗಮನ; ಶೋಕ ಮಾತಾ ಇಗರ್ಜಿಯಲ್ಲಿ ಶ್ರದ್ಧಾಂಜಲಿ
ಉಡುಪಿ: ಸೋಮವಾರ ನಿಧನರಾದ ಮಾಜಿ ಕೇಂದ್ರ ಸಚಿವ, ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫೆರ್ನಾಂಡಿಸ್ ಅವರ ಪಾರ್ಥಿವ ಶರೀರ ಇಂದು ಬೆಳಿಗ್ಗೆ 9.30ಕ್ಕೆ ಸುಮಾರಿಗೆ ಮಂಗಳೂರಿನಿಂದ ಉಡುಪಿಗೆ ತರಲಾಗಿದೆ. ಉಡುಪಿ ಶೋಕ ಮಾತಾ ಇಗರ್ಜಿಗೆ ಆಗಮಿಸಿದ ಪಾರ್ಥಿವ ಶರೀರಕ್ಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಜಿಲ್ಲಾಧಿಕಾರಿ ಕೂರ್ಮಾ ರಾವ್ ಅಂತಿಮ ನಮನ ಸಲ್ಲಿಸಿದರು. ಬಳಿಕ ಉಡುಪಿ ಬಿಷಪ್ ಜೆರಾಲ್ಡ್ ಐಸಾಕ್ ಲೋಬೊ ಅವರ ನೇತೃತ್ವದಲ್ಲಿ ಬಲಿಪೂಜೆ ಹಾಗೂ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ […]