ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಿಗ್ಗಿ ಡೆಲಿವರಿ ಬಾಯ್ಸ್ ಗಳಿಂದ ದಿಢೀರ್ ಪ್ರತಿಭಟನೆ

ಉಡುಪಿ: ದೈನಂದಿನ ಪ್ರೋತ್ಸಾಹ ಧನ ಹೆಚ್ಚಳ ಮಾಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ವಿಗ್ಗಿ ಸಂಸ್ಥೆಯ ಡೆಲಿವರಿ ಬಾಯ್ಸ್ ಇಂದ್ರಾಳಿಯ ಸ್ವಿಗ್ಗಿ ಕಚೇರಿ ಬಳಿ ಇಂದು ಪ್ರತಿಭಟನೆ ನಡೆಸಿದರು. ನೂರಾರು ಸಂಖ್ಯೆಯಲ್ಲಿ ಪ್ರತಿಭಟನಾ ಸ್ಥಳದಲ್ಲಿ ಜಮಾಯಿಸಿದ್ದ ನೌಕರರು, ವೇತನ ಪಾವತಿಯಲ್ಲಿ ವಂಚನೆ ಹಾಗೂ ವಿವಿಧ ಸಮಸ್ಯೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಿ.ಮೀ ಗೆ ಅನುಗುಣವಾಗಿ ವೇತನ ಪಾವತಿ ಮಾಡುತ್ತಿಲ್ಲ. ಟಾರ್ಗೆಟ್ ನಲ್ಲಿ ಒಂದು ರೂಪಾಯಿ ಕಡಿಮೆಯಾದರೂ ಪ್ರೋತ್ಸಾಹ ಧನ ನೀಡುತ್ತಿಲ್ಲ. ಅಲ್ಲದೆ, ಡೆಲಿವರಿ ಬಾಯ್ […]

ರಾಜ್ಯಸಭಾ ಸದಸ್ಯ, ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಇನ್ನಿಲ್ಲ

ಮಂಗಳೂರು: ಮಾಜಿ ಕೇಂದ್ರ ಸಚಿವ, ಹಾಲಿ ರಾಜ್ಯಸಭಾ ಸದಸ್ಯ ಮತ್ತು ಕಾಂಗ್ರೆಸ್ ಮುಖಂಡ ಆಸ್ಕರ್ ಫೆರ್ನಾಂಡಿಸ್ ಅವರು (80) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಕಳೆದ ಹಲವು ದಿನಗಳಿಂದ ಮಂಗಳೂರಿನ ಯೇನಪೊಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಸ್ಕರ್ ಫೆರ್ನಾಂಡಿಸ್ ಅವರು, ಚಿಕಿತ್ಸೆ ಫಲಕಾರಿಯಾಗದೆ ಇಂದು ವಿಧಿವಶರಾದರು. ಉಡುಪಿಯಿಂದ ರಾಜಕೀಯ ಜೀವನವನ್ನು ಆರಂಭಿಸಿದ ಅವರು ಬಳಿಕ ಹಂತ ಹಂತವಾಗಿ ಉನ್ನತ ಸ್ಥಾನಕ್ಕೇರಿದ್ದರು. ಆಸ್ಕರ್ ಫೆರ್ನಾಂಡಿಸ್ ಪತ್ನಿ ಬ್ಲೋಸಂ ಫೆರ್ನಾಂಡಿಸ್, ಪುತ್ರ ಓಶಾನ್, ಪುತ್ರಿ ಓಶಾನಿ, ಅಳಿಯ ಮಾರ್ಕ್, ಸೊಸೆ […]

ಕಾರ್ಕಳ: ಉಪನ್ಯಾಸಕ ಆತ್ಮಹತ್ಯೆಗೆ ಶರಣು

ಕಾರ್ಕಳ: ಶ್ರೀ ಮಹಾಲಕ್ಷ್ಮೀ ದೇವಸ್ಥಾನದ ಅರ್ಚಕ, ಉಪನ್ಯಾಸಕ ಕಾರ್ಕಳ ನಿವಾಸಿ ರವಳನಾಥ ಶರ್ಮಾ (32) ಎಂಬವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂಬಿಎ ಪದವೀಧರರಾಗಿದ್ದ ರವಳನಾಥ ಅವರು 4 ವರ್ಷಗಳ ಹಿಂದೆ ಕಾರ್ಕಳ ಎಂಪಿಎಂ ಕಾಲೇಜಿನಲ್ಲಿಅತಿಥಿ ಉಪನ್ಯಾಸಕರಾಗಿದ್ದರು. ಮೃತರು ತಂದೆ, ತಾಯಿ, ತಮ್ಮ, ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ರಾಜ್ಯದಲ್ಲಿ ಕೋವಿಡ್ ಡೆಲ್ಟಾ ರೂಪಾಂತರದ 16 ಉಪ ತಳಿ ಪತ್ತೆ

ಬೆಂಗಳೂರು: ಕೋವಿಡ್‌–19 ಡೆಲ್ಟಾ ರೂಪಾಂತರದ 16 ಉಪ ತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಜಗತ್ತಿನಾದ್ಯಂತ ಕೋವಿಡ್ ಡೆಲ್ಟಾ ರೂಪಾಂತರದ 32 ಉಪ ರೂಪಾಂತರಗಳನ್ನು ಕಂಡುಬಂದಿದ್ದು, ಈ ಪೈಕಿ 16 ಉಪ ತಳಿಗಳು ರಾಜ್ಯದಲ್ಲಿ ಕಾಣಿಸಿಕೊಂಡಿವೆ. ರಾಜ್ಯದಲ್ಲಿ ಈಗಾಗಲೇ ಕಾಣಿಸಿಕೊಂಡಿರುವ ಎವೈ.4 ಮತ್ತು ಎವೈ.12ನ ರೂಪಾಂತರವು ನಿಧಾನವಾಗಿ ಕಡಿಮೆಯಾಗುತ್ತಿದೆ ಎಂದು ತಿಳಿದುಬಂದಿದೆ. ಈ ವೈರಾಣು ತನ್ನ ಸ್ಪೈಕ್‌ ಪ್ರೋಟಿನ್‌ನ ನೆರವಿನಿಂದ ಮನುಷ್ಯನ ಕೋಶಗಳಿಗೆ ಹಾನಿ ಮಾಡುವ ಸಾಧ್ಯತೆಯೂ ಇದೆ. ಹೀಗಾಗಿ ಇವುಗಳ ವರ್ತನೆ ಮೇಲೆ ನಿಗಾ ಇಡುವುದು […]