ಉಡುಪಿ ಜಿಲ್ಲಾ ನ್ಯಾಯಾಲಯ: ಖಾಲಿ ಇರುವ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಉಡುಪಿ: ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಸ್ಟೆನೋ ಹುದ್ದೆಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಯ ಹೆಸರು : ಸ್ಟೆನೋ ಹುದ್ದೆಗಳ ಸಂಖ್ಯೆ: 8 ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ ಪರೀಕ್ಷೆ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಹಿರಿಯ ದರ್ಜೆ ಕನ್ನಡ ಮತ್ತು ಆಂಗ್ಲ ಭಾಷೆಗಳ ಶೀಘ್ರಲಿಪಿ ಮತ್ತು ಬೆರಳಚ್ಚು ಪರೀಕ್ಷೆಗಳಲ್ಲಿ ಪಾಸಾಗಿರಬೇಕು. ವೇತನ ಶ್ರೇಣಿ: ₹27,650-₹52,650 ( ವಿವಿಧ ಭತ್ಯೆಗಳು ಸೇರಿ) ವಯಸ್ಸು: ಕನಿಷ್ಠ–18 ಗರಿಷ್ಠ–35 ನೇಮಕಾತಿ ವಿಧಾನ: ಲಿಖಿತ ಪರೀಕ್ಷೆ ಮತ್ತು ಸಂದರ್ಶನ […]

ಬೈಂದೂರು: ರೈಲು ಡಿಕ್ಕಿಯಾಗಿ ವ್ಯಕ್ತಿ ಮೃತ್ಯು

ಬೈಂದೂರು: ರಾಜಧಾನಿ ಎಕ್ಸಪ್ರೆಸ್ ರೈಲು ಡಿಕ್ಕಿಯಾಗಿ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಬಿಜೂರು ರೈಲ್ವೆ ಸ್ಟೇಷನ್ ನ ಕೆರ್ಗಾಲ್ ನಾಯ್ಕನಕಟ್ಟೆ ರೈಲ್ವೇ ಗೇಟ್ ಬಳಿ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಸ್ಥಳೀಯ ನಿವಾಸಿ ಗುರುವ ದೇವಾಡಿಗ (45) ಮೃತ ವ್ಯಕ್ತಿ. ಇವರು ಕೆರ್ಗಾಲ್ ನಾಯ್ಕನಕಟ್ಟೆ ರೈಲ್ವೇ ಗೇಟ್ ಬಳಿ ರೈಲ್ವೆ ಹಳಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ರೈಲು ಡಿಕ್ಕಿಯಾಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಳ ಮಂಜುಶ್ರೀ ಭಜನಾ ಮಂಡಳಿಯ ಯೋಗ ತರಗತಿಗೆ ಚಾಲನೆ

ಕಾರ್ಕಳ: ಮಹಿಳೆ ಸ್ವಾವಲಂಬಿಯಾಗಿ ಬದುಕಬೇಕೆಂಬ ಉದ್ದೇಶದಿಂದ ಯೋಗವನ್ನು ಕರಗತಮಾಡಿಕೊಂಡು ಹಲವಾರು ಜನರಿಗೆ ಮಾದರಿಯಾಗಬೇಕೆಂಬ ಧ್ಯೇಯದೊಂದಿಗೆ ಮಾಳದಲ್ಲಿ ಸೋಮವಾರ ಯೋಗ ತರಗತಿಗೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ರಮಿತಾ ಶೈಲೇಂದ್ರ ಮಾತನಾಡಿ, ಮಹಿಳೆ ನಾಲ್ಕುಗೋಡೆಯ ಬಂಧಿಯಾಗದೆ ತನಗೆ ತಿಳಿದಿರುವ ವಿದ್ಯೆಯನ್ನು ನಾಲ್ಕು ಜನರಿಗೆ ತಿಳಿಸುವ ಮಾತೆ ಯಾಗಬೇಕು. ನಿರಂತರ ಯೋಗದಿಂದ ಆರೋಗ್ಯವಂತರಾಗಿ ಇರಬಹುದು ಎಂದು ಶಿಬಿರಾರ್ಥಿಗಳಿಗೆ ಶುಭಹಾರೈಸಿದರು. ಯೋಗಗುರು ಕೃಷ್ಣ ದಾಸ್ ಮಾತನಾಡಿ, ಪ್ರತಿದಿನ ಯೋಗಾಸನ ಮಾಡುವುದರಿಂದ ಶತಾಯುಷಿಗಳಾಗಿ ಬದುಕಬಹುದು ಎಂದರು. ಪ್ರಮೀಳಾ ಡಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. […]

ಭಾರತಕ್ಕೆ 157 ರನ್‌ಗಳ ಭರ್ಜರಿ ಗೆಲುವು: ಸರಣಿಯಲ್ಲಿ 2–1ರ ಮುನ್ನಡೆ

ಲಂಡನ್‌: ಭಾರತ ತಂಡ ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳ ಭರ್ಜರಿ ಗೆಲುವು ಸಾಧಿಸಿತು. ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಬಿಟ್ಟುಕೊಟ್ಟರೂ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಭಾರತ ಮುಂದಿಟ್ಟ 368 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯ ತಂಡ 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ಪತನಗೊಂಡಿತು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1 ಮುನ್ನಡೆ ಸಾಧಿಸಿತು. ಸಂಕ್ಷಿಪ್ತ ಸ್ಕೋರ್ ಪಟ್ಟಿ ಇಂತಿದೆ: ಭಾರತ ಮೊದಲ ಇನ್ನಿಂಗ್ಸ್ 191ಕ್ಕೆ ಆಲೌಟ್ (ವಿರಾಟ್ ಕೊಹ್ಲಿ 50, […]