ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಉಡುಪಿ: ಈ ಸಾಲಿನ ಉಡುಪಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಒಟ್ಟು 17 ಮಂದಿಯನ್ನು ಆಯ್ಕೆ ಮಾಡಲಾಗಿದೆ. ವಿಜೇತರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಸೆ.5ರಂದು ಬೆಳಗ್ಗೆ 9:30ಕ್ಕೆ ಸೈಂಟ್ ಸಿಸಿಲಿ ಪ್ರೌಢ ಶಾಲೆಯಲ್ಲಿ ನಡೆಯಲಿದೆ. ಪ್ರಶಸ್ತಿ ವಿಜೇತ ಶಿಕ್ಷಕರ ವಿವರ: ಕಿರಿಯ ಪ್ರಾಥಮಿಕ ವಿಭಾಗ: 1.ಶಾಂತ ಪೈ, ಸಹಾಯಕ ಶಿಕ್ಷಕಿ, ಸ.ಹಿ.ಪ್ರಾ.ಶಾಲೆ, ಯಡ್ತಾಡಿ ಬ್ರಹ್ಮಾವರ ವಲಯ, 2.ಶೇಖರ ಗಾಣಿಗ, ಸ.ಶಿ., ಸ.ಕಿ.ಪ್ರಾ.ಶಾಲೆ ಕಿಸ್ಮತಿ ಬೈಂದೂರು ವಲಯ, 3.ಮಂಜುನಾಥ ಶೆಟ್ಟಿ, ಸ.ಶಿ., ಸ.ಕಿ.ಪ್ರಾ.ಶಾಲೆ ಕುಚ್ಚೂರು ಕಾರ್ಕಳ ವಲಯ, […]
ಉಡುಪಿ: ವೀಕೆಂಡ್ ಕರ್ಫ್ಯೂ; ಬಸ್ ಸಂಚಾರ ಬಹುತೇಕ ಬಂದ್.!

ಉಡುಪಿ: ಜಿಲ್ಲೆಯಲ್ಲಿ ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಪ್ಯೂ ಜಾರಿಯಲ್ಲಿರುವುದರಿಂದ ಖಾಸಗಿ ಬಸ್ ಸಂಚಾರ ಬಹುತೇಕ ಬಂದ್ ಆಗಲಿದೆ. ಬಸ್ ಪ್ರಯಾಣಕ್ಕೆ ಅನುಮತಿ ಇದ್ದರೂ ಜನಸಂಚಾರ ಕಡಿಮೆ ಇರುವುದರಿಂದ ಎಲ್ಲ ಬಸ್ಸುಗಳು ಸಂಚರಿಸುವುದಿಲ್ಲ. ಕೆಲವೊಂದು ಬಸ್ಸುಗಳು ಸಂಚರಿಸುವ ಸಾಧ್ಯತೆ ಇದೆ. ಉಡುಪಿ ಸಿಟಿ ಬಸ್ ಮತ್ತು ಕೆನರಾ ಬಸ್ ಮಾಲೀಕರ ಸಂಘದ ಬಸ್ ಗಳ ಸಂಚಾರ ಇರುವುದಿಲ್ಲ ಎಂದು ಸಿಟಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮತ್ತು ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ […]
ಖಾಸಗಿತನ ನೀತಿ ಉಲ್ಲಂಘನೆ: ವಾಟ್ಸ್ಆ್ಯಪ್‌ಗೆ ₹1,952.87 ಕೋಟಿ ದಂಡ.!

ಡಬ್ಲಿನ್: ಯುರೋಪಿಯನ್ ಒಕ್ಕೂಟಗಳ ದತ್ತಾಂಶ ಖಾಸಗಿತನ ನೀತಿಯನ್ನು ಉಲ್ಲಂಘಿಸಿರುವ ವಾಟ್ಸ್ಆ್ಯಪ್‌ಗೆ 22.5 ಕೋಟಿ ಯೂರೋ (ಅಂದಾಜು ₹1,952.87 ಕೋಟಿ) ದಂಡ ವಿಧಿಸಲಾಗಿದೆ. ಐರ್ಲೆಂಡ್‌ನ ದತ್ತಾಂಶ ಭದ್ರತಾ ಸಮಿತಿ (ಡಿಪಿಸಿ) ಸೂಚನೆಯಂತೆ, ವಾಟ್ಸ್ಆ್ಯಪ್‌ಗೆ ಭಾರಿ ಮೊತ್ತದ ದಂಡ ವಿಧಿಸಲಾಗಿದೆ. ದಂಡ ವಿಧಿಸಿರುವುದಕ್ಕೆ ವಾಟ್ಸ್ಆ್ಯಪ್ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದೆ. ಅಲ್ಲದೆ, ವಾಟ್ಸ್ಆ್ಯಪ್ ಸದಾ ಸುರಕ್ಷಿತ ಮತ್ತು ಖಾಸಗಿತನ ಸಹಿತ ಸೇವೆಯನ್ನು ನೀಡುತ್ತದೆ ಎಂದು ಕಂಪನಿ ವಕ್ತಾರರು ಹೇಳಿದ್ದಾರೆ. ಫೇಸ್‌ಬುಕ್ ಒಡೆತನದ ವಾಟ್ಸ್‌ಆ್ಯಪ್ ಯುರೋಪಿಯನ್ ರಾಷ್ಟ್ರಗಳಲ್ಲಿ […]
ಮಣಿಪಾಲ: ನೀವಿಯಸ್ ಸೊಲ್ಯೂಷನ್ಸ್ ಸಂಸ್ಥೆಯ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿ

ಮಣಿಪಾಲ: ನೀವಿಯಸ್ ಸೊಲ್ಯೂಷನ್ಸ್ ಸಂಸ್ಥೆಯು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಡುಪಿ, ಕಾರ್ಕಳ ಮತ್ತು ಮಂಗಳೂರಿನಲ್ಲಿ ತಮ್ಮ ಉದ್ಯೋಗಿಗಳಿಗೆ ಮತ್ತು ಅವರ ಕುಟುಂಬ ಹಾಗೂ ಸ್ನೇಹಿತರಿಗೆ ಕೋವಿಡ್ ಲಸಿಕೆಯನ್ನು ನೀಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ನೀವಿಯಸ್ ಸೊ ಲ್ಯೂಷನ್ಸ್, ಗೂಗಲ್ ಕ್ಲೌಡ್ ಪ್ರೀಮಿಯರ್ ನ ಪ್ರಶಸ್ತಿ ವಿಜೇತ ಜಂಟಿ ಸಂಸ್ಥೆಯ ಪ್ರಧಾನ ಕಚೇರಿಯು ಉಡುಪಿಯಲ್ಲಿದ್ದು, ಬೇರೆ ಬೇರೆ ಕಡೆಗಳ ಸುಮಾರು 300 ಉದ್ಯೋಗಿಗಳನ್ನು ಹೊಂದಿದೆ. ಮಣಿಪಾಲ ಹಾಗೂ ಮಂಗಳೂರಿನ ಮರೇನಾ ಕಾಂಪ್ಲೆಕ್ಸ್ ನಲ್ಲಿ ಉದ್ಯೋಗಿಗಳು 2 ನೇ […]
ಉಡುಪಿ: ಜಿಲ್ಲೆಯಾದ್ಯಂತ ಇಂದಿನಿಂದ (ಸೆ.3) ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ಜಾರಿ

ಉಡುಪಿ: ಕೋವಿಡ್ ಸೋಂಕನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುವ ಉದ್ದೇಶದಿಂದ ಜಿಲ್ಲೆಯಾದ್ಯಂತ ಇಂದಿನಿಂದ ರಾತ್ರಿ 9ಗಂಟೆಯಿಂದ (ಸೆ.3) ಸೋಮವಾರ (ಸೆ.6) ಬೆಳಿಗ್ಗೆ 5 ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ಡಿಸಿ ಕೂರ್ಮ ರಾವ್ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೀಕೆಂಡ್ ಕರ್ಪ್ಯೂ ಅವಧಿಯಲ್ಲಿ ತುರ್ತು ಹಾಗೂ ಅಗತ್ಯ ಸೇವೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಉಳಿದಂತೆ ಜನರ ಓಡಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು. ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ದಿನಸಿ ಅಂಗಡಿ, ಮೀನು ಹಾಗೂ ಮಾಂಸದ ಅಂಗಡಿಗಳಿಗೆ ಬೆಳಿಗ್ಗೆ 5ರಿಂದ […]