ಕೃಷ್ಣಜನ್ಮಾಷ್ಟಮಿ: ಉಡುಪಿ ಕೃಷ್ಣಮಠದಲ್ಲಿ ಯಾವುದಕ್ಕೆ ಅವಕಾಶ?, ಯಾವುದಕ್ಕಿಲ್ಲ?
ಉಡುಪಿ: ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಉಡುಪಿ ಕೃಷ್ಣಮಠದಲ್ಲಿ ಸರಳ ಹಾಗೂ ಸಾಂಪ್ರದಾಯಿಕ ರೀತಿಯಲ್ಲಿ ಶ್ರೀಕೃಷ್ಣಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಇಂದು (ಆ. 30) ಮತ್ತು ಆ. 31ರಂದು ನಡೆಯಲಿರುವ ಕೃಷ್ಣಜನ್ಮಾಷ್ಟಮಿಯಲ್ಲಿ ಯಾವುದೆಲ್ಲ ಇರಲಿದೆ?., ಯಾವುದಿಲ್ಲ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ. ಯಾವುದಕ್ಕೆಲ್ಲ ಅವಕಾಶ: 1. ನಿಗದಿತ ಸಮಯದಲ್ಲಿ ಕೃಷ್ಣ ದೇವರ ದರ್ಶನಕ್ಕೆ ಅವಕಾಶ. 2. ಅರ್ಘ್ಯ ಪ್ರದಾನಕ್ಕೆ ಮೂರು ಕಡೆ ವ್ಯವಸ್ಥೆ. 3. ಉತ್ಸವದ ನಂತರ ಉಂಡೆ ಚಕ್ಕುಲಿ ವಿತರಣೆ. 4. C4U […]
‘ಡಾರ್ಕ್ ಅಲೈಟ್’ ವೇಷ ಧರಿಸಿ ಅಸಹಾಯಕರ ನೆರವಿಗೆ ಮುಂದಾದ ರವಿ ಕಟಪಾಡಿ..!
ಉಡುಪಿ: ಪ್ರತಿವರ್ಷ ಕೃಷ್ಣಜನ್ಮಾಷ್ಟಮಿಗೆ ವಿಭಿನ್ನ ಮಾದರಿಯ ವೇಷ ಧರಿಸಿ, ಆ ಮೂಲಕ ಧನ ಸಂಗ್ರಹ ಮಾಡಿ ಅನಾರೋಗ್ಯ ಪೀಡಿತ ಮಕ್ಕಳಿಗೆ ಹಾಗೂ ಅಸಹಾಯಕರಿಗೆ ನೆರವಿನ ಹಸ್ತ ಚಾಚುತ್ತಿರುವ ಸಮಾಜ ಸೇವಕ ರವಿ ಕಟಪಾಡಿ ಅವರು ಈ ಬಾರಿ ಡಾರ್ಕ್ ಅಲೈಟ್ ವೇಷ ಧರಿಸಿದ್ದಾರೆ. ಆ ಮೂಲಕ ಅನಾರೋಗ್ಯ ಪೀಡಿತ ಏಳು ಮಕ್ಕಳ ನೆರವಿಗೆ ಮುಂದಾಗಿದ್ದಾರೆ. ರವಿ ಅವರು ಕಳೆದ ಆರು ವರ್ಷದಲ್ಲಿ ವೇಷ ಧರಿಸಿ 72 ಲಕ್ಷ ರೂಪಾಯಿ ಸಂಗ್ರಹಿಸಿ ದಾನ ಮಾಡಿದ್ದಾರೆ. ಈ ಬಾರಿ ಹಾಲಿವುಡ್ […]
ಉಡುಪಿ: ಸೆ.1ರಿಂದ ಜಿಲ್ಲೆಯಾದ್ಯಂತ ಶಾಲಾ ಕಾಲೇಜು ಆರಂಭ; ಸಚಿವ ವಿ. ಸುನಿಲ್ ಕುಮಾರ್
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಗಣನೀಯವಾಗಿ ಇಳಿಕೆಯಾದ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಸೆಪ್ಟೆಂಬರ್ 1ರಿಂದ 9ರಿಂದ 12ನೇ ತರಗತಿಯವರೆಗಿನ ಶಾಲಾ ಕಾಲೇಜುಗಳನ್ನು ತೆರೆಯಲು ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು. ಉಡುಪಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಾದ್ಯಂತ ಸೆ.1ರಿಂದ 9ರಿಂದ 12 ತರಗತಿಯವರೆಗೆ ಶಾಲಾ ಕಾಲೇಜು ಪುನರಾರಂಭವಾಗಲಿದೆ. ಕೋವಿಡ್ ನಿಯಮಾನುಸಾರ ತರಗತಿ ಆರಂಭವಾಗಲಿದ್ದು, ಶಿಕ್ಷಕರಿಗೆ ಕೋವಿಡ್ ಲಸಿಕೆ ಕಡ್ಡಾಯಗೊಳಿಸಲಾಗಿದೆ. ಕೋವಿಡ್ ಲಸಿಕೆ ಪಡೆದ ಶಿಕ್ಷಕರು ಮಾತ್ರ ಮಕ್ಕಳಿಗೆ ಬೋಧನೆ […]
ಕಾಬೂಲ್ ಏರ್ಪೋರ್ಟ್ ರಾಕೆಟ್ ದಾಳಿ: ಸಾವು- ನೋವಿನ ಆತಂಕ
ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ ಮೇಲೆ ಇಂದು ಮುಂಜಾನೆ 5 ರಾಕೆಟ್ಗಳಿಂದ ದಾಳಿ ನಡೆದಿದೆ. ಮೊದಲು ಏರ್ಪೋರ್ಟ್ನ ಮೇಲೆ ಹಾರಾಟ ನಡೆಸಿ, ಬಳಿಕ ಏರ್ಪೋರ್ಟ್ ಮತ್ತು ಸುತ್ತಮುತ್ತ ದಾಳಿ ಫೈರಿಂಗ್ ಮಾಡಿವೆ. ಇನ್ನು ಅಮೆರಿಕ ಸೇನೆ ರಾಕೆಟ್ಗಳನ್ನ ಸಿ-ರ್ಯಾಮ್ ಡಿಫೆನ್ಸ್ ಸಿಸ್ಟಮ್ ಮೂಲಕ ಹೊಡೆದೋಡಿಸಲಾಗಿದೆ. ಏರ್ಪೋರ್ಟ್ನಲ್ಲಿ ಆರ್ಟಿಲರಿ ಮೊರ್ಟರ್ಸ್ಗಳನ್ನ ಅಳವಡಿಸಲಾಗಿತ್ತು. ಇವುಗಳ ಮೂಲಕ ಅಮೆರಿಕ ಸೈನಿಕರು ರಾಕೆಟ್ ದಾಳಿಯನ್ನ ಎದುರಿಸಿದ್ದಾರೆ ಎಂಬ ಮಾಹಿತಿ ಇದೆ. ಇನ್ನು ದಾಳಿಯಲ್ಲಿ ಈವರೆಗೆ ಯಾವುದೇ ಸಾವು ನೋವಿನ ವರದಿಗಳಾಗಿಲ್ಲ. ಕೆಲವು ಕಾರ್ಗಳು […]
ಪ್ರಕೃತಿಯ ನಡುವೆ ಕಣ್ಮನ ಸೆಳೆಯೋ ಶ್ರೀ ಕೃಷ್ಣ: ಮಹೇಶ್ ದೇವಾಡಿಗ ಕ್ಲಿಕ್ಕಿಸಿದ ಚಿತ್ರಗಳಿವು
ಉಡುಪಿ ಜಿಲ್ಲೆಯ ಅಡ್ವೆ ನಿವಾಸಿ ಪ್ರಸ್ತುತ ಕಾಂಜರ ಕಟ್ಟೆಯಲ್ಲಿ “ಸ್ಮೈಲ್ ಫೋಟೋಗ್ರಫಿ”ಎನ್ನುವ ಸ್ಟುಡಿಯೋ ನಡೆಸಿ, ವೃತ್ತಿಪರ ಛಾಯಾಗ್ರಹಣದಲ್ಲಿ ತೊಡಗಿರುವ ಮಹೇಶ್ ದೇವಾಡಿಗ ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ಲಿಕ್ಕಿಸಿದ ಚೆಂದದ ಚಿತ್ರಗಳ ಸರಣಿಯಿದು. ಪ್ರಕೃತಿಯ ನಡುವೆ ಗಮನ ಸೆಳೆಯುವ ಕೃಷ್ಣ ವೇಷದ ಈ ಚಿತ್ರ ತನ್ನ ಅತ್ಯುತ್ತಮ ಕಾಂಬಿನೇಶನ್ ನಿಂದ ಕೂಡಿದೆ.ಮಹೇಶ್ ದೇವಾಡಿಗ ಅವರ ಸಂಪರ್ಕ :9844674895