ಉಡುಪಿ ಅಷ್ಟಮಿಗೆ ರೆಡಿಯಾಗಿವೆ ಕಲಾತ್ಮಕ ಕುಡಿಕೆಗಳು

ಉಡುಪಿ:ಶ್ರೀಕೃಷ್ಣ ಮಠದಲ್ಲಿ, ಶ್ರೀಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ದಿನಾಂಕ ನಡೆಯುವ ಶ್ರೀಕೃಷ್ಣ ಲೀಲೋತ್ಸವದ ಮೊಸರು ಕುಡಿಕೆಯ ಮಡಿಕೆಗಳಿಗೆ ಬ್ರಹ್ಮಾವರದ ಮಂಜುನಾಥ ಆಚಾರ್ಯ ಮತ್ತು ಸಂಗಡಿಗರು ರಂಗವಲ್ಲಿ ಬಿಡಿಸಿದರು.  

ಕೊನೆಗೂ ಉಡುಪಿ ಡಿಸಿ ವರ್ಗಾವಣೆ

ಉಡುಪಿ  ಉಡುಪಿಯ ಜಿಲ್ಲಾಧಿಕಾರಿ ಆಗಿ ಸೇವೆ ಸಲ್ಲಿಸುತಿದ್ದ ಜಿ. ಜಗದೀಶ್ ಅವರನ್ನು ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ಯಾಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಂಡಿ ಅಗಿ ಕಾರ್ಯನಿರ್ವಹಿಸುತಿದ್ದ ಕುರ್ಮಾ ರಾವ್(ಐಎಎಸ್) ಇವರನ್ನು ಉಡುಪಿಯ ನೂತನ ಜಿಲ್ಲಾಧಿಕಾರಿ ಆಗಿ ಸರಕಾರ ನೇಮಿಸಿದೆ. ಜಿ. ಜಗದೀಶ್ ರವರನ್ನು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಕಳೆದ 2 ವರ್ಷಗಳಿಂದ ಜಿ. ಜಗದೀಶ್ ಉಡುಪಿಯ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿ ಜನಸ್ನೇಹಿಯಾಗಿದ್ದರು.ಕೊರೊನಾ ಮೊದಲನೆ ಮತ್ತು ಎರಡನೆ […]

ಕೊರೊನಾ ಹೊಡೆತಕ್ಕೆ ನಲುಗಿದ ದೊಡ್ಡಣ್ಣ; ದಿನೇ ದಿನೇ ಏರುತ್ತಿದೆ ಸಾವಿನ ಸಂಖ್ಯೆ

ನ್ಯೂಯಾರ್ಕ್: ಜಗತ್ತಿನ ದೊಡ್ಡಣ್ಣ ಅಮೆರಿಕಾದಲ್ಲಿ ಕೋವಿಡ್ ಡೆಲ್ಟಾ ರೂಪಾಂತರದ ಆರ್ಭಟ ಮುಂದುವರೆದಿದೆ. ಕೋವಿಡ್ ಡೆಲ್ಟಾ ರೂಪಾಂತರವು ಸಮುದಾಯದಲ್ಲಿ ಹರಡುತ್ತಿದ್ದು, ಲಸಿಕೆ ಪಡೆಯದೆ ಇದ್ದವರಲ್ಲಿ ಕಾಳ್ಗಿಚ್ಚಿನಂತೆ ಹರಡಿ ಸಾವುಗಳ ಸಂಖ್ಯೆ ಮಿಂಚಿನ ಗತಿಯಲ್ಲೇರುತ್ತಿವೆ. 14 ದಿನಗಳಲ್ಲಿ ಸೋಂಕಿನ ಪ್ರಮಾಣ ಶೇ. 21ರಷ್ಟು ಏರಿಕೆಯಾಗಿದ್ದು, ದಿನವೊಂದರ ಸಾವಿನ ಪ್ರಮಾಣ- 1,266 ರಷ್ಟಿದೆ. ಅಮೆರಿಕಾದ ಒರೆಗಾನ್ ರಾಜ್ಯದಲ್ಲಿ ಕೋವಿಡ್ ನಿಂದ ಸಾವಿನ ಸಂಖ್ಯೆ ಏರುತ್ತಿದ್ದು, ಮೃತ ದೇಹಗಳನ್ನು ಸಾಗಿಸಲು ಶೈತ್ಯಾಗಾರ ಟ್ರಕ್ ವಿತರಣೆಯನ್ನು ಆರಂಭಿಸಲಾಗಿದೆ. ಈಗಾಗಲೇ ಒಂದು ಟ್ರಕ್​ ಕಾರ್ಯಾಚರಣೆಯಲ್ಲಿದ್ದು ಇನ್ನೊಂದು […]

ಮಣಿಪಾಲ ಕೆಎಂಸಿ ಆಸ್ಪತ್ರೆ: ಆ.31ರಂದು ಹೊರರೋಗಿ ವಿಭಾಗಕ್ಕೆ ರಜೆ

ಮಣಿಪಾಲ: ಉಡುಪಿ ಶ್ರೀಕೃಷ್ಣಮಠದಲ್ಲಿ ಶ್ರೀ ಕೃಷ್ಣಜನ್ಮಾಷ್ಟಮಿ (ವಿಟ್ಲ ಪಿಂಡಿ) ಪ್ರಯುಕ್ತ ಆಗಸ್ಟ್ 31ರ ಮಂಗಳವಾರದಂದು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಅಪಘಾತ ಮತ್ತು ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಾಹನ ಮಾಲೀಕರಿಗೆ ಗುಡ್ ನ್ಯೂಸ್; ಎಲ್ಲ ರಾಜ್ಯಗಳಿಗೂ ಹೊಂದುವಂತೆ ಒಂದೇ ವಾಹನ ನೋಂದಣಿ ಸಂಖ್ಯೆ

ನವದೆಹಲಿ: ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸ್ಥಳಾಂತರಗೊಳ್ಳುವ ವಾಹನ ಮಾಲೀಕರಿಗೆ ಗುಡ್ ನ್ಯೂಸ್. ಇನ್ಮುಂದೆ ನೀವು ತಮ್ಮ ವಾಹನವನ್ನು ಮರು ನೋಂದಣಿ ಮಾಡುವ ಅಗತ್ಯವಿಲ್ಲ. ಹೌದು, ಹೊಸ ವಾಹನಗಳಿಗೆ ‘ಭಾರತ್‌ ಸರಣಿ’ (ಬಿಎಚ್‌–ಸಿರೀಸ್‌) ಎನ್ನುವ ಹೊಸ ನೋಂದಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಈ ವ್ಯವಸ್ಥೆಯಿಂದಾಗಿ ವಾಹನ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸ್ಥಳಾಂತರಗೊಂಡಾಗ ಅಲ್ಲಿ ಮರು ನೋಂದಣಿ ಮಾಡುವ ಅಗತ್ಯ ಇರುವುದಿಲ್ಲ. ಮೊದಲಿಗೆ ರಕ್ಷಣಾ ಸಿಬ್ಬಂದಿ, ಕೇಂದ್ರ ಮತ್ತು ರಾಜ್ಯ ಸರ್ಕಾರಿ ಉದ್ಯೋಗಿಗಳು, ಸರ್ಕಾರಿ ಸ್ವಾಮ್ಯದ […]