ಲಯನ್ಸ್ ಕ್ಲಬ್ ಉಡುಪಿಯ ವಜ್ರಮಹೋತ್ಸವ ಕಾರ್ಯಕ್ರಮ
ಉಡುಪಿ: ಇಂದಿನ ದಿನದಲ್ಲಿ ಸರಕಾರಗಳ, ಸಂಪುಟ ಸಭೆಯ ಪ್ರತಿಯೊಂದು ತೀರ್ಮಾನವೂ ಮತ ಬ್ಯಾಂಕ್ ಆಧಾರಿತವಾಗಿರುವುದು ದುರದೃಷ್ಟಕರ ಎಂದು ಮೂಡಬಿದಿರೆಯ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅಭಿಪ್ರಾಯಪಟ್ಟಿದ್ದಾರೆ. ಅವರು ಕರಾವಳಿ ಕರ್ನಾಟಕದ ಪ್ರಥಮ ಲಯನ್ಸ್ ಕ್ಲಬ್ ಆದ ಲಯನ್ಸ್ ಕ್ಲಬ್ ಉಡುಪಿಯ ವಜ್ರಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಾಂಕ್ರಾಮಿಕ ರೋಗಗಳು ಹಿಂದೆಯೂ ಬಂದಿವೆ. ಮುಂದೆಯೂ ಬರುತ್ತವೆ. ಆದರೂ ನಿರಾಶವಾದಿಗಳಾಗುವ ಅಗತ್ಯವಿಲ್ಲ. ಜನರು ಧೃತಿಗೆಡದೆ ಸಮಸ್ಯೆಯನ್ನು ಎದುರಿಸಿ ತಮ್ಮ ಬದುಕನ್ನು ಕಟ್ಟಿಕೊಳ್ಳಬೇಕಿದೆ ಎಂದರು. “ಅನಾರೋಗ್ಯವಾದರೆ […]
ಮಣಿಪಾಲ: ಮಕ್ಕಳಲ್ಲಿ ಕಂಡುಬಂದಿದ್ದ ಜೋಡಿ ಅನ್ನನಾಳದ ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿದ ಕೆಎಂಸಿ ವೈದ್ಯರು
ಮಣಿಪಾಲ: ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಕ್ಕಳ ಶಸ್ತ್ರಚಿಕಿತ್ಸಾ ವಿಭಾಗವು ಎರಡು ಮಕ್ಕಳಲ್ಲಿ ಕಂಡುಬಂದಿದ್ದ ಸಂಕೀರ್ಣ ಮತ್ತು ಅಪರೂಪದ ಜೋಡಿ ಅನ್ನನಾಳದ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿತು. ಒಬ್ಬರಲ್ಲಿ ಎರಡು ಅನ್ನನಾಳಗಳು ಕಂಡುಬರುವುದು ಅತ್ಯಂತ ಅಪರೂಪದ ಜನ್ಮಜಾತ ಭ್ರೂಣದ ವಿರೂಪಗಳು. ಅದರಲ್ಲೂ ಕೊಳವೆಯಾಕಾರದ ಭಾಗದ ಈ ಜೋಡಿ ಅನ್ನನಾಳಗಳು ತೀರ ಅಪರೂಪವಾಗಿದೆ. ಅಂಥವರಿಗೆ ನುಂಗಲು ಕಷ್ಟವಾಗಬಹುದು, ಉಸಿರಾಟದ ತೊಂದರೆ, ಎದೆ ನೋವು, ಎಪಿಗ್ಯಾಸ್ಟ್ರಿಕ್ ಅಸ್ವಸ್ಥತೆ, ವಾಂತಿ, ಸ್ಟ್ರಿಡರ್, ಕೆಮ್ಮು, ರಕ್ತಸ್ರಾವ, ಮತ್ತು ಹೆಮೆಟಮೆಸಿಸ್ ಅಥವಾ ಪ್ರಾಸಂಗಿಕನಂತಹ […]
ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಪ್ರೈಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿಗೆ ಭಾರತ ಗೌರವ ಪ್ರಶಸ್ತಿ
ಉಡುಪಿ: ಬೆಂಗಳೂರಿನ ಜೆಫ್ ಟಾಕ್ ಫುಡ್ ಅಂಡ್ ಹಾಸ್ಪಿಟಾಲಿಟಿ ಪ್ರೈಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಗೋವಿಂದ ಬಾಬು ಪೂಜಾರಿ ಬಿಜೂರು ಅವರು ಭಾರತ ಗೌರವ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರು ಜನ್ಮಭೂಮಿ ಫೌಂಡೇಶನ್ ವತಿಯಿಂದ ಬೆಂಗಳೂರಿನ ಗಾಂಧಿನಗರದ ಸ್ಯಾಂಕ್ ಟಮ್ ಹೋಟೆಲ್ ನಲ್ಲಿ ಆ.29ರಂದು ಸಂಜೆ 5 ಗಂಟೆಗೆ ನಡೆಯುವ ರಾಜ್ಯದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ ಹಾಗೂ ಕೊರೊನಾ ವಾರಿಯರ್ಸ್ ಗೆ ಅಭಿನಂದನಾ ಸಮಾರಂಭದಲ್ಲಿ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.
ಕೋಟ: ವಿವಾಹಿತ ಮಹಿಳೆ ಕಾಣೆ
ಕೋಟ: ವಿವಾಹಿತ ಮಹಿಳೆಯೊಬ್ಬರು ನಾಪತ್ತೆಯಾಗಿರುವ ಬಗ್ಗೆ ಕೋಟ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಮಹಿಳೆಯನ್ನು ಕುಂದಾಪುರ ತಾಲೂಕಿನ ತೆಕ್ಕಟ್ಟೆ ಗ್ರಾಮದ ದೇವಾಡಿಗರಬೆಟ್ಟು ನಿವಾಸಿ ಸುನೀತಾ (32 ) ಎಂದು ಗುರುತಿಸಲಾಗಿದೆ. ಅವರು ತಾಯಿ ಮನೆಯಿಂದ ಕಾಣೆಯಾಗಿದ್ದು, ಅವರನ್ನು ಎಲ್ಲಿಯಾದರೂ ಕಂಡರೆ ಕೋಟ ಪೊಲೀಸ್ ಠಾಣೆಗೆ ಮಾಹಿತಿ ನೀಡಲು ವಿನಂತಿಸಲಾಗಿದೆ.
ಆಯಿಲ್ ಇಂಡಿಯಾದಲ್ಲಿದೆ ಉದ್ಯೋಗಾವಕಾಶಗಳು:ಈಗಲೇ ಅರ್ಜಿ ಸಲ್ಲಿಸಿ
ನವದೆಹಲಿ:ಆಯಿಲ್ ಇಂಡಿಯಾ ಸಂಸ್ಥೆ 2021ನೇ ಸಾಲಿನ ನೇಮಕಾತಿ ಆರಂಭಿಸಿದೆ. 535 ಫಿಟ್ಟರ್ ಟ್ರೇಡ್, ಬಾಯ್ಲರ್ ಸಹಾಯಕ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಅರ್ಜಿ ಹಾಕಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 23, 2021ರೊಳಗೆ ಸೂಕ್ತ ಅರ್ಜಿ ನಮೂನೆಯೊಂದಿಗೆ ಸಲ್ಲಿಸಬಹುದು. ಹುದ್ದೆ: 535 ಹುದ್ದೆ ಹೆಸರು: Fitter Trade, Boiler Attendant ಉದ್ಯೋಗ ಸ್ಥಳ: ಭಾರತದೆಲ್ಲೆಡೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 23, 2021 ಹುದ್ದೆಗಳು: ಫಿಟ್ಟರ್, ಎಲೆಕ್ಟ್ರಿಷಿಯನ್, ಮೆಕ್ಯಾನಿಕ್ ಮೋಟರ್ ವೆಹಿಕಲ್ […]