ಕಾಂಗ್ರೆಸ್‌ ವಕ್ತಾರರಾಗಿ ಶುಭದ ರಾವ್‌ ನೇಮಕ

ಕಾರ್ಕಳ: ಕಾರ್ಕಳ ಬ್ಲಾಕ್‌ ಕಾಂಗ್ರೆಸ್‌ ವಕ್ತಾರರಾಗಿ ಪುರಸಭಾ ಸದಸ್ಯ ಶುಭದ ರಾವ್‌ ಅವರು ನೇಮಕಗೊಂಡಿದ್ದಾರೆ. ಮಾಜಿ ಮುಖ್ಯಮಂತ್ರಿ ಡಾ. ಎಂ. ವೀರಪ್ಪ ಮೊಯ್ಲಿ ಅವರ ನಿರ್ದೇಶನದ ಮೇರೆಗೆ ಅವರನ್ನು ಆಯ್ಕೆ ಮಾಡಲಾಗಿದೆ. ಕಾರ್ಕಳ ಪುರಸಭೆಗೆ ಮೂರನೇ ಬಾರಿಗೆ ಚುನಾಯಿತ ಸದಸ್ಯರಾಗಿ ಅವರು, ಈ ಹಿಂದೆ ಯುವ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.  

ಪರೀಕ: ಸಿಡಿಲು ಬಡಿದು ತಂದೆ-ಮಗ ಗಂಭೀರ

ಮಣಿಪಾಲ: ನಾಗದೇವರಿಗೆ ತನು ಹಾಕಲು ಹೋಗುತ್ತಿದ್ದ ವೇಳೆ ಸಿಡಿಲು ಬಡಿದು ತಂದೆ ಮತ್ತು ಮಗ ಗಂಭೀರವಾಗಿ ಗಾಯಗೊಂಡ ಘಟನೆ ಆತ್ರಾಡಿ ಸಮೀಪದ ಪರೀಕ ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಗಂಭೀರ ಗಾಯಗೊಂಡವರನ್ನು ಪರೀಕದ ನಿವಾಸಿ ಸೋಮನಾಥ ಶೆಟ್ಟಿ ಎಂದು ಗುರುತಿಸಲಾಗಿದೆ. ಅವರು ಇಂದು ಬೆಳಿಗ್ಗೆ ಮಗನೊಂದಿಗೆ ಮನೆಯ ನಾಗಬನಕ್ಕೆ ತನು ಹಾಕಲು ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಏಕಾಏಕಿಯಾಗಿ ಸಿಡಿಲು ಬಡಿದಿದ್ದು, ಇದರಿಂದ ಇಬ್ಬರಿಗೂ ಗಂಭೀರ ಗಾಯವಾಗಿದೆ. ಗಾಯಗೊಂಡ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಾರ್ಕಳ: ಮಾನಸಿಕ ಖಿನ್ನತೆಯಿಂದ ಮನನೊಂದ ಯುವಕ ಆತ್ಮಹತ್ಯೆಗೆ ಶರಣು

ಕಾರ್ಕಳ: ಯುವಕನೊಬ್ಬ ಮಾನಸಿಕ ಖಿನ್ನತೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಎಂಬಲ್ಲಿ ನಡೆದಿದೆ. ನಂದಳಿಕೆ ಗ್ರಾಮದ ನಿವಾಸಿ ರಾಜೇಂದ್ರ ಪ್ರಸಾದ್ (47) ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಇವರು ಕಳೆದ 17ವರ್ಷಗಳಿಂದ ದುಬೈಯಲ್ಲಿ ಕೆಲಸ ಮಾಡಿಕೊಂಡಿದ್ದು, ರಜೆಯಲ್ಲಿ ಊರಿಗೆ ಬಂದಿದ್ದರು. ಕೋವಿಡ್-19 ನಿಂದಾಗಿ ಮತ್ತೆ ದುಬೈಗೆ ಹೋಗಲು ಆಗದೇ ಇದ್ದುದರಿಂದ ತೀವ್ರ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಆ.17ರಂದು ಮನೆಯಿಂದ ಹೊರಗಡೆ ಹೋದವರು ಮತ್ತೆ ಮನೆಗೆ ಬಾರದೆ ಕಾಣೆಯಾಗಿದ್ದರು. ಆ.19 ಗುರುವಾರದಂದು ಮನೆಯ […]

‘ಕೆಜಿಎಫ್-2’ ಚಿತ್ರದ ಸ್ಯಾಟ್ ಲೈಟ್ ರೈಟ್ಸ್ ದಾಖಲೆ ಮೊತ್ತಕ್ಕೆ ಮಾರಾಟ

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ಚಾಪ್ಟರ್-2 ಚಿತ್ರದ ದಕ್ಷಿಣ ಭಾರತೀಯ ಭಾಷೆಯಗಳ ಸ್ಯಾಟ್ ಲೈಟ್ ಪ್ರಸಾರದ ಹಕ್ಕನ್ನು ಜೀ ವಾಹಿನಿ ಖರೀದಿಸಿದೆ. ಈ ಕುರಿತಾಗಿ ಹೊಂಬಾಳೆ ಫಿಲಂಸ್​, ನಿರ್ದೇಶಕ ಪ್ರಶಾಂತ್​ ನೀಲ್, ಯಶ್​ ತಮ್ಮ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದಾರೆ. ಬಹುನಿರೀಕ್ಷಿತ ಕೆಜಿಎಫ್  ಚಾಪ್ಟರ್ 2 ಸಿನಿಮಾದ ಸ್ಯಾಟಲೈಟ್ ಹಕ್ಕುಗಳನ್ನು ಜೀ ಸಂಸ್ಥೆ ತನ್ನ ತೆಕ್ಕೆಗೆ ತೆಗೆದುಕೊಂಡಿದ್ದು, ಬರೋಬ್ಬರಿ ನೂರು ಕೋಟಿ ರೂ. ಕೊಟ್ಟು ಸ್ಯಾಟಲೈಟ್ ರೈಟ್ಸ್ ಖರೀದಿಸಿದೆ ಎಂದು ತಿಳಿದುಬಂದಿದೆ. […]

ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆ: ದಿ. ಗೋಪಶೆಟ್ಟಿ ಜನ್ಮಶತಾಬ್ದಿ ಅಂಗವಾಗಿ ವಿವಿಧ ಸಾಮಾಜಿಕ ಕಾರ್ಯಕ್ರಮ

ಕಾರ್ಕಳ: ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನಡೆಸುತ್ತಿರುವ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳು ಹಲವಾರು ಮೈಲುಗಲ್ಲುಗಳನ್ನು ಸಾಧಿಸುತ್ತಾ ನಾಡಿನ ಹೆಮ್ಮೆಯ ಕಾಲೇಜಾಗಿ ಹೊರಹೊಮ್ಮಿದೆ. ಪ್ರಸಕ್ತ ವರ್ಷ ಸಂಸ್ಥೆಯ ಸಂಸ್ಥಾಪಕರಾದ ದಿ. ಗೋಪಶೆಟ್ಟಿಯವರ ಜನ್ಮಶತಾಬ್ದಿ ವರ್ಷ. ಜೊತೆಗೆ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವದ ಸಂಭ್ರಮ. ಈ ಸ್ಮರಣೀಯ ಸಂದರ್ಭ ಉಡುಪಿಯ ಕಡಿಯಾಳಿ ಬಳಿಯಿರುವ ನಾಗಬನ ಕ್ಯಾಂಪಸ್‍ನಲ್ಲಿ ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜನ್ನು ಪ್ರಾರಂಭಿಸಿರುವುದು ಹರ್ಷದಾಯಕ ಸಂಗತಿ. ಈ ಎಲ್ಲಾ ಸಂಭ್ರಮಕೆ ಮೆರುಗು ಎನ್ನುವಂತೆ ಇದೇ ತಿಂಗಳ 21ರ […]