ಕ್ರೀಡಾಲೋಕದ ನಕ್ಷತ್ರ, ಯುವ ಕ್ರೀಡಾಳುಗಳ ಅಪ್ರತಿಮ ಗುರು: ಉಡುಪಿಯ ಶಾಲಿನಿ ಶೆಟ್ಟಿ ಯಶೋಗಾಥೆ ಇದು!

ನಮ್ಮ ದೇಶದಲ್ಲಿ ಕ್ರಿಕೆಟ್ ಮತ್ತು ಇನ್ನಿತರ ಕ್ರೀಡೆಗಳಿಗೆ ಇರುವ ತರತಮ ವ್ಯವಸ್ಥೆಯಿಂದಾಗಿ ಸಾವಿರಾರು ಕ್ರೀಡಾಳುಗಳ ಪ್ರತಿಭೆಗಳು ಬೆಳಕಿಗೆ ಬಾರದೇ ಕರುಟಿ, ಮುರುಟಿ, ಮುದುರಿ ಹೋಗುತ್ತಿರುವುದಂತು ಸತ್ಯ. ಆದರೂ ಕೆಲವೊಮ್ಮೆ ಕೆಲವು ಕ್ರೀಡಾಪಟುಗಳು ತಮ್ಮ ಅದ್ವಿತೀಯ ಸಾಧನೆ, ಪ್ರತಿಭೆ, ಪ್ರಬಲವಾದ ಇಚ್ಛಾಶಕ್ತಿಯಿಂದ ಕ್ರೀಡಾಂಬರದಲ್ಲಿ ನಕ್ಷತ್ರಗಳಂತೆ ಮಿಂಚಿ ಪ್ರಜ್ವಲಿಸುತ್ತಾರೆ. ಇನ್ನೂ ಕೆಲವರು ವನಸುಮಗಳಂತೆ ಜಗದ ಪೊಗಳಿಕೆಗೆ ಬಾಯಿ ಬಿಡದೆ ಎಲೆಯ ಮರೆಯ ಪಿಂತಿರ್ದು ತಾನಾಯಿತು ತನ್ನ ಸಾಧನೆಯಾಯ್ತು ಎಂದು ಸದ್ದಿಲ್ಲದೆ ತಮ್ಮಷ್ಟಕ್ಕೆ ತಾವೇ ಸಾಧಿಸಿಕೊಂಡು ಮುಂದುವರಿಯುತ್ತಾರೆ. ಹೀಗೆ ಪ್ರಚಾರಕ್ಕೆ ಹಾತೊರೆಯದೆ […]
ಬೈಲಕೆರೆ ಯುವಕ ಮಂಡಲದ ಮಾಹಿತಿ ಸೇವಾ ಕೇಂದ್ರ ಹಾಗೂ ರಸ್ತೆ ಸುರಕ್ತಾ ದರ್ಪಣದ ಉದ್ಘಾಟನೆ

ಬೈಲಕೆರೆ: ಬೈಲಕೆರೆ ಯುವಕ ಮಂಡಲದ ಸಹಯೋಗದಲ್ಲಿ ಬೈಲಕೆರೆ ಮಾಹಿತಿ ಸೇವಾ ಕೇಂದ್ರದ ಉದ್ಘಾಟನೆ ಹಾಗೂ ರಸ್ತೆ ಸುರಕ್ಷಾ ದರ್ಪಣದ ಬಿಡುಗಡೆ ಕಾರ್ಯಕ್ರಮ ಭಾನುವಾರ ಬೈಲಕೆರೆಯಲ್ಲಿ ನಡೆಯಿತು. ಉಡುಪಿ ತಾಪಂ ಕಾರ್ಯನಿರ್ವಣಾಧಿಕಾರಿ ಮೋಹನ್ ರಾಜ್ ಅವರು ಸೇವಾ ಕೇಂದ್ರ ಹಾಗೂ ರಸ್ತೆ ಸುರಕ್ಷಾ ದರ್ಪಣವನ್ನು ಉದ್ಘಾಟಿಸಿದರು. ತೆಂಕನಿಡಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಾಯತ್ರಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಇಲಾಖೆಯ ವೈದ್ಯಾಧಿಕಾರಿ ಡಾ. ಪ್ರೀಮಾ ಲವೀನ, ಅಂಗನವಾಡಿ ಶಿಕ್ಷಕಿ ಸುನೀತಾ, ಆಶಾ ಕಾರ್ಯಕರ್ತೆ ಲೀಲಾ, ಯುವಕ ಮಂಡಲ ಅಧ್ಯಕ್ಷ ಶ್ರೀಜಿತ್ […]
ಆ. 18ಕ್ಕೆ ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆ ಉಡುಪಿಗೆ ಆಗಮನ

ಉಡುಪಿ: ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆಶಯದಂತೆ ನೂತನ ಕೇಂದ್ರ ಸಚಿವರನ್ನು ಪರಿಚಯಿಸುವ ಮತ್ತು ಸರಕಾರದ ವಿವಿಧ ಜನಪರ ಯೋಜನೆಗಳನ್ನು ಪ್ರಚಲಿತಗೊಳಿಸುವ ನಿಟ್ಟಿನಲ್ಲಿ ದೇಶದಾದ್ಯಂತ ಜನಾಶೀರ್ವಾದ ಯಾತ್ರೆ ನಡೆಯಲಿದೆ. ಇದೇ ಆಗಸ್ಟ್ 18ರಂದು ನೂತನ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆಯವರ ನೇತೃತ್ವದಲ್ಲಿ ಉಡುಪಿ ಜಿಲ್ಲೆಗೆ ಜನಾಶೀರ್ವಾದ ಯಾತ್ರೆ ಆಗಮಿಸಲಿದ್ದು, ಉಡುಪಿ ಜಿಲ್ಲಾ ಬಿಜೆಪಿ ವತಿಯಿಂದ ಹೆಬ್ರಿಯಲ್ಲಿ ಯಾತ್ರೆಯನ್ನು ಸ್ವಾಗತಿಸಲಾಗುವುದು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ […]
ಇಂಡಿಯನ್ ಐಡಲ್ 12ನೇ ಆವೃತ್ತಿ: ಉತ್ತರಾಖಂಡದ ಪವನ್‌ದೀಪ್ ವಿಜೇತ

ಮುಂಬೈ: ಜನಪ್ರಿಯ ರಿಯಾಲಿಟಿ ಶೋ ‘ಇಂಡಿಯನ್ ಐಡಲ್’ನ 12ನೇ ಆವೃತ್ತಿಯ ವಿಜೇತರಾಗಿ ಉತ್ತರಾಖಂಡದ ಪವನ್‌ದೀಪ್ ರಾಜನ್ ಹೊರಹೊಮ್ಮಿದ್ದಾರೆ. ಅರುಣಿತಾ ಕಾಂಜಿಲಾಲ್ ಹಾಗೂ ಸಾಯಲಿ ಕಾಂಬ್ಳೆ ಅವರು ಎರಡನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ನಿಹಾಲ್ ತಾವ್ರೊ ಅವರು 5ನೇ ಸ್ಥಾನ ಪಡೆದಿದ್ದಾರೆ. ಡ್ಯಾನಿಷ್ ಮೊಹ್ಮದ್, ಷಣ್ಮುಖಪ್ರಿಯಾ ಅವರು ಕ್ರಮವಾಗಿ 4 ಹಾಗೂ 6ನೇ ಸ್ಥಾನ ಪಡೆದಿದ್ದಾರೆ.
ಪೇರಡ್ಕ: ಮಲೆಕುಡಿಯ ಸಂಘದಿಂದ 75ನೇ ಸ್ವಾತಂತ್ರ್ಯೋತ್ಸವ

ಉಡುಪಿ: ಜಿಲ್ಲಾ ಮಲೆಕುಡಿಯ ಸಂಘದ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಪೇರಡ್ಕ ಕೇಂದ್ರ ಕಚೇರಿ ಆವರಣದಲ್ಲಿ ಆಚರಿಸಲಾಯಿತು. ಜಿಲ್ಲಾ ಸಂಘದ ಗೌರವ ಸಲಹೆಗಾರರಾದ ವೀರಪ್ಪ ಗೌಡ ಪೇರಡ್ಕ ಧ್ವಜಾರೋಹಣ ನೆರವೇರಿಸಿದರು. ಧ್ವಜ ವಂದನೆ ಕಾರ್ಯಕ್ರಮವನ್ನು ವಿಷ್ಣುಮೂರ್ತಿ ಕೆರ್ವಾಶೆ ನೆರವೇರಿಸಿಕೊಟ್ಟರು. ರಾಜ್ಯ ಮಲೆಕುಡಿಯ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಧರ ಗೌಡ ಈದು, ಸಂಘಟನಾ ಕಾರ್ಯದರ್ಶಿ ಗಂಗಾಧರ್ ಈದು, ಉಪಾಧ್ಯಕ್ಷ ಗೋಪಾಲ್ ಗೌಡ, ಕಾರ್ಯದರ್ಶಿ ಸಾಧು ನಾರ್ಜೆ, ಸುಂದರ್ ರೆಂಜಾಳ, ಹೆಬ್ರಿ ತಾಲೂಕು ಕಾರ್ಯದರ್ಶಿ ಹರೀಶ್ ಅಂಡಾರು, ಕಾರ್ಕಳ ಸಂಘಟನಾ ಕಾರ್ಯದರ್ಶಿ […]