ಬಾಲಪ್ರತಿಭೆಯ ಕೈಯಲ್ಲಿರಳಿದ ತರಕಾರಿ ತ್ರಿವರ್ಣ ಧ್ವಜ
ಕಟಪಾಡಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬಾಲ ಪ್ರತಿಭೆ ಪ್ರಥಮ್ ಕಾಮತ್ ಕಟಪಾಡಿ ಇವರು ರಚಿಸಿದ ತರಕಾರಿ ತ್ರಿವರ್ಣ ಧ್ವಜ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ. ಬಟಾಟೆ, ಕ್ಯಾರೆಟ್, ಬೆಳ್ಳುಳ್ಳಿ, ಹಾಗೂ ಹಸಿಮೆಣಸು ಬಳಸಿ ರಚಿಸಿರುವ ಕಲಾಕೃತಿ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಕೆ. ನಾಗೇಶ್ ಕಾಮತ್, ಕೆ. ಸುಜಾತ ಕಾಮತ್ ದಂಪತಿಯ ಪುತ್ರ ಪ್ರಥಮ್ ಕಾಮತ್ ಜಾದೂ ಪ್ರದರ್ಶನದಲ್ಲಿಯೂ ಪ್ರಖ್ಯಾತಿ ಗಳಿಸಿದ್ದಾರೆ. ಇದರ ಜೊತೆಗೆ ಅವರು ಚಿತ್ರಕಲೆ, ಕ್ರಾಫ್ಟ್, ಕ್ಲೇ ಮಾಡೆಲಿಂಗ್, ಛದ್ಮವೇಷಗಳಲ್ಲಿಯೂ ಎತ್ತಿದ ಕೈ. ಉದಯ ಟಿವಿಯ […]
ವಿಶ್ವಚಾಂಪಿಯನ್ ಡ್ಯಾನ್ಸ್ ಸ್ಪೋರ್ಟ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ ಮಣಿಪಾಲದ ಅರ್ಚನಾ ಜೈವಿಠಲ್
ಉಡುಪಿ: ಆಸ್ಟ್ರಿಯಾದ ಗ್ರಾಜ್‌ನಲ್ಲಿ ಆ. 20ರಿಂದ ಆರಂಭವಾಗಲಿರುವ ವಿಶೇಷ ಒಲಿಂಪಿಕ್ಸ್ ಡ್ಯಾನ್ಸ್ ಸ್ಪೋರ್ಟ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಮಣಿಪಾಲದ ಅರ್ಚನಾ ಜೈವಿಠಲ್ ಅವರು ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಆಸ್ಟ್ರಿಯಾ, ಚೆಕ್ ರಿಪಬ್ಲಿಕ್, ಇಸ್ಟೊನಿಯಾ, ಜರ್ಮನಿ, ಗ್ರೀಸ್, ಐಸ್‌ಲ್ಯಾಂಡ್, ಲಿಥುನಿಯಾ, ನಾರ್ತ್ ಮೆಸಿಡೊನಿಯಾ, ನಾರ್ವೆ, ಸ್ಲೊವೆಕಿಯಾ, ಉಕ್ರೇನ್, ಅಮೆರಿಕಾ ಹಾಗೂ ಭಾರತ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸುತ್ತಿವೆ. ಅರ್ಚನಾ ಜೈವಿಠಲ್ ಶಾಸ್ತ್ರೀಯ ನೃತ್ಯ ವಿಭಾಗದಲ್ಲಿ 90 ಸೆಕೆಂಡ್‌ಗಳ ಏಕ ವ್ಯಕ್ತಿ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮಾಹೆ ಹಾಗೂ ಅರ್ಚನಾ ಟ್ರಸ್ಟ್ ಜಂಟಿಯಾಗಿ ವಿಶೇಷ […]
ಬಿಜೆಪಿ ಯುವಮೋರ್ಚಾ ಕಾಪು ಮಂಡಲದಿಂದ ಯುವ ತಿರಂಗಾ ಯಾತ್ರೆ
ಕಾಪು: ಬಿಜೆಪಿ ಯುವಮೋರ್ಚಾ ಕಾಪು ಮಂಡಲ ಇದರ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಅಂಗವಾಗಿ ಇಂದು ಯುವ ತಿರಂಗಾ ಯಾತ್ರೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್, ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾ ಪ್ರಧಾನ ಕಾರ್ಯದರ್ಶಿ ಯಶ್ ಪಾಲ್ ಸುವರ್ಣ ಅವರು ಕಾಪು ಮಂಡಲ ಯುವಮೋರ್ಚಾ ಅಧ್ಯಕ್ಷ ಸಚಿನ್ ಸುವರ್ಣ ಅವರಿಗೆ ರಾಷ್ಟ್ರ ಧ್ವಜ ಹಸ್ತಾಂತರಿಸುವ ಮೂಲಕ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಕಟಪಾಡಿಯಿಂದ ಕಾಪು ಪೇಟೆಗೆ ತೆರಳಿ ಅಲ್ಲಿಂದ […]
ಕಾರ್ಕಳ: ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣ; ಅಪರಾಧಿಗೆ ಜೀವಾವಧಿ ಶಿಕ್ಷೆ
ಉಡುಪಿ: ಮೂರು ವರ್ಷಗಳ ಹಿಂದೆ ಕಾರ್ಕಳ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆಸಿ ಆಕೆ ಗರ್ಭವತಿಯಾಗಲು ಕಾರಣನಾದ ಆರೋಪಿಯ ಕೃತ್ಯ ಸಾಕ್ಷ್ಯಾಧಾರಗಳಿಂದ ಸಾಬೀತಾಗಿದ್ದು, ಈ ಹಿನ್ನೆಲೆಯಲ್ಲಿ ಆತನನ್ನು ಅಪರಾಧಿಯೆಂದು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೋ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎರ್ಮಾಳು ಕಲ್ಪನಾ ಅವರು ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಶಂಕರ್ (30) ಅತ್ಯಾಚಾರ ಎಸಗಿದ ಅಪರಾಧಿ. ಈತನಿಗೆ ಪೋಕ್ಸೋ ಕಾಯ್ದೆಯಡಿ ಜೀವಾವಧಿ ಶಿಕ್ಷೆ, 15 ಸಾವಿರ ದಂಡ […]