ಕುಂದಾಪುರ: ಟೆಂಪೋ ಡಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು

ಕುಂದಾಪುರ: ಬೈಕ್ ಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂದು  ನಡೆದಿದೆ. ಮೃತ ಬೈಕ್ ಸವಾರನನ್ನು ಕೆದೂರು ನಿವಾಸಿ ಸೃಜನ್ ಶೆಟ್ಟಿ (20) ಎಂದು ಗುರುತಿಸಲಾಗಿದೆ. ಈತ ಉಳ್ತೂರು ಶ್ರೀ ಮಹಾಲಿಂಗೇಶ್ವರ ದೇಗುಲದ ಮಹಾದ್ವಾರದ ಸಮೀಪದ ರಸ್ತೆ ತಿರುವಿನಲ್ಲಿ ಬೈಕ್ ನಲ್ಲಿ ಹೋಗುತ್ತಿದ್ದ ವೇಳೆ ಟೆಂಪೋ ಡಿಕ್ಕಿಯಾಗಿದೆ. ಇದರಿಂದ ಗಂಭೀರ ಗಾಯಗೊಂಡ ಆತನನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಕೋಟ […]

ಉಡುಪಿ: ಯುವಕ ನೇಣಿಗೆ ಶರಣು

ಉಡುಪಿ: ಇಲ್ಲಿನ ಮೂಡುಬೆಟ್ಟು ನಿವಾಸಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ನಡೆದಿದೆ. ಮೂಡುಬೆಟ್ಟು ನಿವಾಸಿ ಮಿಥುನ್ (32) ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇಂದು ಬೆಳಿಗ್ಗೆ ಕೆಲಸಕ್ಕೆ ಹೋಗಿದ್ದ ಮಿಥುನ್, ಸ್ವಲ್ಪ ಹೊತ್ತು ಕೆಲಸ ಮಾಡಿ ಮನೆಗೆ ಮರಳಿದ್ದಾನೆ. ಮನೆಗೆ ಬಂದ ಆತ ತನ್ನ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದನು. ಸ್ವಲ್ಪ ಸಮಯದ ಬಳಿಕ ಮನೆಯವರು ನೋಡದಾಗ ಮಿಥುನ್ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಗೊತ್ತಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ […]

ಉಡುಪಿ: 75ನೇ ಸ್ವಾತಂತ್ರ್ಯ ದಿನಾಚರಣೆ; ಕಾಂಗ್ರೆಸ್ ನಿಂದ ಪಾದಯಾತ್ರೆ

ಉಡುಪಿ: 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಇಂದು ನಗರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಯಿತು. ಉಡುಪಿ ಕಾಂಗ್ರೆಸ್ ಭವನದಿಂದ ಆರಂಭಗೊಂಡ ಪಾದಯಾತ್ರೆ ಬ್ರಹ್ಮಗಿರಿ-ಆಸ್ಪತ್ರೆ ರಸ್ತೆ, ಜೋಡುಕಟ್ಟೆ- ಕೋರ್ಟ್ ರಸ್ತೆ – ಕೆ.ಎಂ. ಮಾರ್ಗದ ಮೂಲಕ ಸರ್ವಿಸ್ ಬಸ್ ಸ್ಟ್ಯಾಂಡ್ ಕ್ಲಾಕ್ ಟವರ್, ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮುಖಾಂತರ ಸಮಾಪನಗೊಂಡಿತು. ಮಾಜಿ ಸಚಿವ ವಿನಯ್‌ ಕುಮಾರ್‌ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಶೋಕ್‌ ಕುಮಾರ್‌ ಕೊಡವೂರು, ಮುಖಂಡರಾದ ಪ್ರಖ್ಯಾತ್‌ ಶೆಟ್ಟಿ, […]

ಸೌದಿ ದೊರೆಯ ವಿರುದ್ಧ ಫೋಸ್ಟ್ ಪ್ರಕರಣ: ಎರಡು ವರ್ಷದ ಬಳಿಕ ತಾಯ್ನಾಡಿಗೆ ಮರಳುತ್ತಿರುವ ಕುಂದಾಪುರದ ಹರೀಶ್‌ ಬಂಗೇರ.!

ಉಡುಪಿ: ಸೌದಿ ಅರೇಬಿಯಾದ ದೊರೆಯ ವಿರುದ್ಧ ಪೋಸ್ಟ್‌ ಮಾಡಲಾಗಿದೆ ಎಂಬ ಆರೋಪದಡಿ ಸೌದಿ ಪೊಲೀಸರಿಂದ ಬಂಧಿತನಾಗಿರುವ ಕುಂದಾಪುರದ ಬೀಜಾಡಿಯ ಹರೀಶ್‌ ಬಂಗೇರ ಅವರು ಇದೇ ಆಗಸ್ಟ್ 18 ರಂದು ಬೆಂಗಳೂರು ತಲುಪಲಿದ್ದಾರೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಹರೀಶ್ ಬಂಗೇರ ತಾಯ್ನಾಡಿಗೆ ಮರಳಲು ಬೇಕಾದ ಎಲ್ಲ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿದ್ದು, ಆಗಸ್ಟ್ 17ರಂದು ಸೌದಿ ಅರೇಬಿಯಾದ ದಮಾಮ್ ವಿಮಾನ ನಿಲ್ದಾಣದಿಂದ ದೋಹಾಗೆ ಹೋಗಿ ದೋಹಾ ಮೂಲಕ ಆಗಸ್ಟ್ 18ರಂದು ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಲಿದ್ದಾರೆ […]

ಆ.15ರಂದು ಸತ್ಯನಾಥ ಸ್ಟೋರ್ಸ್‌ ನಲ್ಲಿ ನಿಮಗಾಗಿ ಕಾದಿದೆ ಬೊಂಬಾಟ್ ಫ್ರೀಡಂ ಧಮಾಕಾ ಸೇಲ್: ಹೊಸ ಸಂಭ್ರಮವನ್ನು ಮನೆಗೆ ತನ್ನಿ!

ಉಡುಪಿ: ನಾಳೆ (ಆ.15) ಭಾರತ ಸ್ವಾತಂತ್ರ್ಯೋತ್ಸವ 75ರ ಸಂಭ್ರಮ. ಈ ಪ್ರಯುಕ್ತ ಸತ್ಯನಾಥ ಸ್ಟೋರ್ಸ್ ನಲ್ಲಿ ಗ್ರಾಹಕ ವರ್ಗಕ್ಕೆ ವಿಶೇಷವಾಗಿ ಫ್ರೀಡಂ ಧಮಾಕಾ ಸೇಲ್ ಹಮ್ಮಿಕೊಳ್ಳಲಾಗಿದ್ದು ಈ ಬೊಂಬಾಟ್ ಸೇಲ್ ನಲ್ಲಿ ಭಾಗಿಯಾಗಲು ಗ್ರಾಹಕರಿಗೊಂದು ಸುವರ್ಣಾವಕಾಶ. ಕಳೆದ ಏಳು ದಶಕಗಳಿಂದ ವಸ್ತ್ರ ವ್ಯಾಪಾರ ಮೂಲಕ ಕರಾವಳಿ, ಮಲೆನಾಡು ಭಾಗದ ಗ್ರಾಹಕರ ಪ್ರೀತಿಗೆ ಪಾತ್ರವಾದ ಬ್ರಹ್ಮಾವರ, ತೀರ್ಥಹಳ್ಳಿ ಮತ್ತು ಕೊಪ್ಪ ದಲ್ಲಿರುವ ಸತ್ಯನಾಥ ಸ್ಟೋರ್ಸ್‌ ನ ಬೃಹತ್ ವಸ್ತ್ರಮಳಿಗೆಗಳಲ್ಲಿ ಉತ್ತಮ ಗುಣಮಟ್ಟದ ವಸ್ತ್ರಗಳಿಗೆ ಭರಪೂರ ರಿಯಾಯಿತಿ ನೀಡಲಾಗುತ್ತಿದೆ. ದೇಶದ […]