ಆ. 14ರಂದು ಕಾಪು ಬಿಜೆಪಿ ಯುವಮೋರ್ಚಾದಿಂದ ‘ಯುವ ತಿರಂಗ ಯಾತ್ರೆ’

ಕಾಪು: ಕಾಪು ಬಿಜೆಪಿ ಯುವಮೋರ್ಚಾ ವತಿಯಿಂದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ‘ಯುವ ತಿರಂಗ ಯಾತ್ರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಯಾತ್ರೆಯ ಪ್ರಯುಕ್ತ ಆ.14ರಂದು ಬೆಳಿಗ್ಗೆ 7 ಗಂಟೆಗೆ ಕಟಪಾಡಿ ಜಂಕ್ಷನ್ ನಿಂದ ಕಾಪು ಪೇಟೆ ಮಾರ್ಗವಾಗಿ ಕಟಪಾಡಿ ಶ್ರೀ ವೆಂಕಟರಮಣ ದೇವಸ್ಥಾನದವರೆಗೆ ‘ಸೈಕಲ್ ಜಾಥಾ’ ಕಾರ್ಯಕ್ರಮ ನಡೆಯಲಿದೆ. ಪಕ್ಷದ ಕಾರ್ಯಕರ್ತರು ಹಾಗೂ ನೂರಾರು ಸಂಖ್ಯೆಯಲ್ಲಿ ಜನರು ಈ ಜಾಥಾದಲ್ಲಿ ಭಾಗವಹಿಸುವರು. ಕಾಪು ಮಂಡಲ ಅಧ್ಯಕ್ಷ ಶ್ರೀಕಾಂತ ನಾಯಕ್, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಜಿಲ್ಲಾ […]

ಕಾರ್ಕಳ: ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ₹ 2.36 ಲಕ್ಷ ಲಪಟಾಯಿಸಿದ ಖದೀಮರು

ಕಾರ್ಕಳ: ಸಾಲ ಕೊಡಿಸುವುದಾಗಿ ನಂಬಿಸಿ ವ್ಯಕ್ತಿಯೊಬ್ಬರ ಖಾತೆಯಿಂದ ₹ 2.36 ಲಕ್ಷ ಲಪಟಾಯಿಸಿದ ಘಟನೆ ಕಾರ್ಕಳದ ಮುಂಡ್ಕೂರು ಎಂಬಲ್ಲಿ ನಡೆದಿದೆ. ಕಾರ್ಕಳದ ಮುಂಡ್ಕೂರು ನಿವಾಸಿ ಸಿರಾಜ್ (26) ಹಣ ಕಳೆದುಕೊಂಡ ವ್ಯಕ್ತಿ. ಇವರು ಆನ್ ಲೈನ್‌ನಲ್ಲಿ ಸಾಲ ಪಡೆಯುವ ಉದ್ದೇಶದಿಂದ ಗೂಗಲ್ ನ ಲೋನ್‌ ಆ್ಯಪ್ ನಲ್ಲಿ ಹೆಸರು ಹಾಗೂ ಮೊಬೈಲ್ ಸಂಖ್ಯೆ ನಮೂದಿಸಿದ್ದರು. ಅದಾದ ಮೂರು ದಿನಗಳ ಬಳಿಕ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು, ತಾನು ಮುದ್ರಾ ಲೋನ್‌ನಿಂದ ಮಾತನಾಡುವುದಾಗಿ ನಂಬಿಸಿ ಸಾಲದ ಟ್ಯಾಕ್ಸ್ ಕಟ್ಟುವಂತೆ […]

ಕಾರ್ಕಳ: ಕೃಷಿ ತೋಟಕ್ಕೆ ಅಳವಡಿಸಿರುವ ವಿದ್ಯುತ್ ತಂತಿ ತಗುಲಿ ವ್ಯಕ್ತಿ ಸಾವು

ಕಾರ್ಕಳ: ಕೃಷಿ ತೋಟಕ್ಕೆ ಅಳವಡಿಸಿದ್ದ IBX ವಿದ್ಯುತ್ ತಂತಿ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲೂಕಿನ ಮಾಳ ಗ್ರಾಮದ ಮುಳ್ಳೂರು ಎಂಬಲ್ಲಿ ನಡೆದಿದೆ. ಮೃತರನ್ನು ಮಾಳ ಗ್ರಾಮದ ಕೂಡಬೆಟ್ಟು ಸೋಮನಾಥ ಡೋಂಗ್ರೆ ಎಂದು ಗುರುತಿಸಲಾಗಿದೆ. ಇವರು ಆಗಸ್ಟ್ 10ರಂದು ರಾತ್ರಿ ಸ್ನೇಹಿತರ ಮನೆಗೆ ಹೋಗುತ್ತಿದ್ದ ವೇಳೆ ವೆಂಕಟೇಶ ಜೋಷಿ ಅವರ ಕೃಷಿ ತೋಟಕ್ಕೆ ಅಳವಡಿಸಿರುವ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ. ಈ ಘಟನೆಗೆ ವೆಂಕಟೇಶ ಜೋಷಿಯವರ ನಿರ್ಲಕ್ಷವೇ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಕಾರ್ಕಳ […]

ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ ಲಭ್ಯವಿದೆ: ಅರ್ಜಿ ಸಲ್ಲಿಸಿ

ಉಡುಪಿ: ಪ್ರಸಕ್ತ ಸಾಲಿನಲ್ಲಿ ಅಲಿಮ್ಕೋ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ, ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ  ಉಚಿತವಾಗಿ ಆರ್ಥೋಪೆಡಿಕ್ (ಮೂಳೆ ಚಿಕಿತ್ಸೆ)/ ದೈಹಿಕ ದುರ್ಬಲತೆ, ಶ್ರವಣದೋಷ, ದೃಷ್ಟಿಹೀನತೆ ಮತ್ತು ವೃದ್ಧಾಪ್ಯದಲ್ಲಿ ಹಲ್ಲುಗಳ ನಷ್ಟ ಮುಂತಾದ ತೊಂದರೆಯುಳ್ಳ ಹಿರಿಯ ನಾಗರಿಕರಿಗೆ ಪುನರ್ವಸತಿ ತಜ್ಞರು ಸೂಚಿಸಿದ ಅರ್ಹತೆಗೆ ಅನುಗುಣವಾಗಿ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಲಿದ್ದಾರೆ, ಭಾರತ ಸರ್ಕಾರದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿಯಲ್ಲಿ ಹಿರಿಯ ನಾಗರಿಕರ ನೋಂದಾವಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದು, ಹತ್ತಿರದ ಜನ ಸೇವಾ ಕೇಂದ್ರದಲ್ಲಿ ಆನ್‌ಲೈನ್ […]

ಉಡುಪಿ: ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮ: ಆಸಕ್ತರು ಪಾಲ್ಗೊಳ್ಳಿ

ಉಡುಪಿ: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಮತ್ತು ಭಾರತೀಯ ವಿಕಾಸ್ ಟ್ರಸ್ಟ್, ಮಣಿಪಾಲ, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ  ಸ್ವ-ಉದ್ಯೋಗ ಕೈಗೊಳ್ಳಲು ಆಸಕ್ತ ಅಭ್ಯರ್ಥಿಗಳಿಗೆ, ಆಗಸ್ಟ್ 23 ರಿಂದ ಸೆಪ್ಟಂಬರ್ 01 ರವರೆಗೆ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಭಾರತೀಯ ವಿಕಾಸ್ ಟ್ರಸ್ಟ್, ಪೆರಂಪಳ್ಳಿ, ಮಣಿಪಾಲದಲ್ಲಿ ಹಮ್ಮಿಕೊಳ್ಳಲಾಗಿದೆ. ಸರ್ಕಾರದಿಂದ ಸ್ವ-ಉದ್ಯೋಗ ಯೋಜನೆಗಳು, ಬ್ಯಾಂಕಿನ ವ್ಯವಹಾರ, ಉದ್ಯಮ ನಿರ್ವಹಣೆ, ಮಾರುಕಟ್ಟೆ ಸಮೀಕ್ಷೆ, ಯೋಜನಾ ವರದಿ ತಯಾರಿಕೆ ಇತ್ಯಾದಿ ವಿಷಯಗಳ ಕುರಿತು ಅಭ್ಯರ್ಥಿಗಳಿಗೆ ಮಾಹಿತಿಗಳನ್ನು ನೀಡಲಾಗುತ್ತಿದ್ದು, 18-40 ವರ್ಷ […]