ಎಸ್ಸೆಸ್ಸೆಲ್ಸಿ ಪರೀಕ್ಷೆ; ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜಿನ ವರ್ಷ ಆರ್.ಶೆಟ್ಟಿಗೆ 621 ಅಂಕ
ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆಯ ಬಿಸಿಎಂ ಹಾಸ್ಟೆಲ್ ವಿದ್ಯಾರ್ಥಿಗಳು ವಿಶೇಷ ಸಾಧನೆ ಮಾಡಿದ್ದಾರೆ. ಬ್ರಹ್ಮಾವರದಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್‌ಪೂರ್ವ ವಸತಿ ನಿಲಯದ ವಿದ್ಯಾರ್ಥಿನಿ ವರ್ಷ ಆರ್.ಶೆಟ್ಟಿ ಶೇ.99.36 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ವರ್ಷ 625ಕ್ಕೆ 621 ಅಂಕ ಪಡೆದಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ದೇವಿಂದರ್.ಎಸ್. ಬೀರದರ್ ಅವರು ವಿದ್ಯಾರ್ಥಿನಿಗೆ ಅಭಿನಂದಿಸಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯದ ಎಲ್ಲಾ 104 […]
ಅಲೆವೂರು ರಾಮಪುರ ಮಹಿಳಾ ಸಂಘ: ರಮಾ ಜೆ. ರಾವ್ ಅಧ್ಯಕ್ಷೆ
ಉಡುಪಿ: ಅಲೆವೂರು ರಾಮಪುರ ಮಹಿಳಾ ಸಂಘದ 2021-22ರ ಸಾಲಿನ ನೂತನ ಅಧ್ಯಕ್ಷೆಯಾಗಿ ರಮಾ ಜೆ.ರಾವ್ ಅವರು ಆಯ್ಕೆಯಾಗಿದ್ದಾರೆ. ಇತರ ಪದಾಧಿಕಾರಿಗಳು: ಗೌರವಾಧ್ಯಕ್ಷೆ: ಮಮತಾ ಅಶೋಕ್ ಶೆಟ್ಟಿಗಾರ್, ಉಪಾಧ್ಯಕ್ಷರು: ಸುಮತಿ ಸೇರಿಗಾರ್, ಮಲ್ಲಿಕಾ ಗಣೇಶ್. ಪ್ರಧಾನ ಕಾರ್ಯದರ್ಶಿ: ವೀಣಾ ಜಯರಾಮ್. ಜತೆ ಕಾರ್ಯದರ್ಶಿ: ಲತಾ ಮಾದವ್. ಕೋಶಾಧಿಕಾರಿ: ರಕ್ಷಿತಾ. ಜತೆ ಕೋಶಾಧಿಕಾರಿ: ಸನಿಹ , ಅನುಷ, ಕ್ರೀಡಾ ಕಾರ್ಯದರ್ಶಿ: ಸುಚಿತ್ರ ಚರಣ್. ಜತೆ ಕ್ರೀಡಾ ಕಾರ್ಯದರ್ಶಿ: ಪ್ರಜ್ಞ ,ಅನುರಕ್ಷಾ. ಸಾಂಸ್ಕೃತಿಕ ಕಾರ್ಯದರ್ಶಿ: ಬೇಬಿ ರಾಜೇಶ್. ಜತೆ ಸಾಂಸ್ಕೃತಿಕ ಕಾರ್ಯದರ್ಶಿ: […]
ಉಡುಪಿಯ ಯುವತಿ ನಾಪತ್ತೆ
ಉಡುಪಿ: ಉಡುಪಿಯ ಕವಿತಾ ಕಂಪೌಂಡ್, ಕಾಡಬೆಟ್ಟು ನಿವಾಸಿ ಶ್ರುತಿ.ವೈ (18) ಎಂಬವರು ಸೋಮವಾರದಂದು ಬೆಳಿಗ್ಗೆ 8:30ರ ಸಮಯಕ್ಕೆ ಕಾಡಬೆಟ್ಟು ಮನೆಯಿಂದ ಕಾಣೆಯಾಗಿದ್ದಾರೆ. ಚಹರೆ: 5 ಅಡಿ ಎತ್ತರವಿದ್ದು, ಕಪ್ಪುಮೈಬಣ್ಣ, ಸಪೂರ ಮುಖ, ಗುಲಾಬಿ ಕೆಂಪು ಬಣ್ಣದ ಚೂಡಿದಾರ ಧರಿಸಿದ್ದು, ಕನ್ನಡ ತೆಲುಗು ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿ, ಉಡುಪಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಕಳ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣ ವಿದ್ಯಾರ್ಥಿ ನೇಣಿಗೆ ಶರಣು
ಕಾರ್ಕಳ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನಿರೀಕ್ಷೆ ಮಾಡಿದಷ್ಟು ಅಂಕ ಬಾರದ ಹಿನ್ನೆಲೆಯಲ್ಲಿ ಮನನೊಂದು ವಿದ್ಯಾರ್ಥಿಯೊಬ್ಬ (16) ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳ ಹವಾಲ್ದಾರ್‌ಬೆಟ್ಟು ಎಂಬಲ್ಲಿ ಇಂದು ನಡೆದಿದೆ. ಮೃತ ಬಾಲಕನನ್ನು ನಿವೃತ್ತ ಸೈನಿಕ ಸನತ್ ಕುಮಾರ್ ಅವರ ಪುತ್ರ ಎಂದು ಗುರುತಿಸಲಾಗಿದೆ. ಈತ ಕಾರ್ಕಳ ಖಾಸಗಿ ಶಾಲೆಯ ವಿದ್ಯಾರ್ಥಿಯಾಗಿದ್ದನು. ಈತನಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ. 77ರಷ್ಟು ಫಲಿತಾಂಶ ಬಂದಿತ್ತು. ಆದರೆ ಆತ ಅದಕ್ಕಿಂತ ಹೆಚ್ಚಿನ ಅಂಕದ ನಿರೀಕ್ಷಿಸಿದ್ದನು ಎನ್ನಲಾಗಿದೆ. ಇದೇ ವಿಷಯದಿಂದ ಮನನೊಂದು ತನ್ನ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ […]
ಸಭೆ, ಸಮಾರಂಭಗಳಲ್ಲಿ ಹಾರ, ತುರಾಯಿ ಬೇಡ, ಕನ್ನಡ ಪುಸ್ತಕಗಳನ್ನು ನೀಡಿ: ರಾಜ್ಯ ಸರ್ಕಾರ
ಬೆಂಗಳೂರು: ರಾಜ್ಯ ಸರ್ಕಾರ ಹಾಗೂ ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದು ಎಂದು ರಾಜ್ಯ ಸರ್ಕಾರ ಸೂಚಿಸಿದೆ. ಇಂತಹ ಕಾಣಿಕೆಗಳನ್ನು ನೀಡುವ ಬದಲು ಕನ್ನಡ ಪುಸ್ತಕಗಳನ್ನು ನೀಡಬಹುದು ಎಂದು ಸರ್ಕಾರ ಸಲಹೆ ನೀಡಿದೆ. ಈ ನಿರ್ದೇಶನವನ್ನು ಚಾಚು ತಪ್ಪದೇ ಅನುಷ್ಟಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲಾ ಸಂಸ್ಥೆಗಳು ತಮ್ಮ […]