ಸೆಮಿಫೈನಲ್ ನಲ್ಲಿ ಎಡವಿದ ಭಾರತ ಮಹಿಳಾ ಹಾಕಿ ತಂಡ: ಚಿನ್ನದ ಪದಕ ಗೆಲ್ಲುವ ಕನಸು ಭಗ್ನ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನ ಮಹಿಳಾ ಹಾಕಿ ಸೆಮಿಫೈನಲ್ ನಲ್ಲಿ ಭಾರತ ಮಹಿಳಾ ತಂಡವು ಸೋಲು ಕಂಡಿದ್ದು, ಚಿನ್ನದ ಪದಕ ಗೆಲ್ಲುವ ಅವಕಾಶದಿಂದ ವಂಚಿತವಾಗಿದೆ. ಭಾರತ ತಂಡವು ಅರ್ಜೆಂಟೀನಾ ವಿರುದ್ಧ 1-2 ಗೋಲುಗಳ ಅಂತರದ ಸೋಲು ಅನುಭವಿಸಿದೆ. ಇದರೊಂದಿಗೆ ಫೈನಲ್‌ಗೆ ಪ್ರವೇಶಿಸುವಲ್ಲಿ ವಿಫಲವಾಗಿದೆ. ಇದೇ ಮೊದಲ ಬಾರಿಗೆ ಒಲಿಂಪಿಕ್ ಹಾಕಿಯ ಸೆಮಿಫೈನಲ್ ಪ್ರವೇಶಿಸಿ ಇತಿಹಾಸ ಬರೆದಿರುವ ಮಹಿಳಾ ತಂಡಕ್ಕೀಗ ಮಗದೊಂದು ಅವಕಾಶವಿದ್ದು, ಕಂಚಿನ ಪದಕಕ್ಕಾಗಿ ಹೋರಾಡಲಿದ್ದಾರೆ.

ಉಡುಪಿ: ಫೇಸ್ ಬುಕ್ ನಿಂದ ಪರಿಚಯವಾದ ವ್ಯಕ್ತಿಯಿಂದ ದೋಖಾ; ₹19 ಲಕ್ಷ ಕಳೆದುಕೊಂಡ ಮಹಿಳೆ

ಉಡುಪಿ: ದೆಹಲಿಯಲ್ಲಿ ಫಾರ್ಮಸಿ ತೆರೆಯುವುದಾಗಿ ನಂಬಿಸಿ ವಂಚಕನೊಬ್ಬ ಮಹಿಳೆಯೊಬ್ಬರಿಂದ ಬರೋಬ್ಬರಿ ₹ 19 ಲಕ್ಷ ಲಪಟಾಯಿಸಿದ ಘಟನೆ ಉಡುಪಿಯಲ್ಲಿ ನಡೆದಿದೆ. ಲಿನೆಟ್ ಸಿಮಾ ರೊಡ್ರಿಗಸ್‌ (38) ಹಣ ಕಳೆದುಕೊಂಡ ಮಹಿಳೆ. ಇವರು ಕುವೈಟ್‌ ದೇಶದಲ್ಲಿ ಉದ್ಯೋಗದಲ್ಲಿದ್ದರು. ಇವರಿಗೆ ಇತ್ತೀಚೆಗೆ ಫೇಸ್ ಬುಕ್ ಮೂಲಕ ಡಾ. ಆ್ಯಂಡ್ರಿವ್‌ ಫೆಲಿಕ್ಸ್‌ (ಆರೋಪಿ) ಎಂಬುವವರ ಪರಿಚಯವಾಗಿತ್ತು. ಬಳಿಕ ಈ ಪರಿಚಯ ಪರಸ್ಪರ ಮೊಬೈಲ್ ನಂಬರ್ ಹಂಚಿಕೊಳ್ಳುವ ಮಟ್ಟಿಗೆ ಮುಂದುವರಿದಿತ್ತು. ಆರೋಪಿ ಫೆಲಿಕ್ಸ್ ತಾನು ವೃತ್ತಿಯಲ್ಲಿ ವೈದ್ಯನಾಗಿದ್ದು, ನಾನು ದೆಹಲಿಯಲ್ಲಿ ಒಂದು ಫಾರ್ಮಸಿ […]

ಕಾರ್ಕಳ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ; ಆರೋಪಿಯ ಬಂಧನ

ಕಾರ್ಕಳ: ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಪೋಕ್ಸೋ ಕಾಯ್ದೆಯಡಿ ಕಾರ್ಕಳ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಗುಲ್ವಾಡಿಯ ಇಮ್ರಾನ್ (24) ಎಂದು ಗುರುತಿಸಲಾಗಿದೆ. ಈತ 12 ವರ್ಷದ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಎನ್ನಲಾಗಿದೆ. ಈ ಬಗ್ಗೆ ಉಡುಪಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಲ್ಲಿ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಲಕಿಯ ಮನೆಗೆ ಹೋಗಿ ಆಪ್ತ ಸಮಾಲೋಚನೆ ನಡೆಸಿದಾಗ ಲೈಂಗಿಕ‌ ಕಿರುಕುಳ […]

ಬೊಮ್ಮಾಯಿ ಸಂಪುಟದಲ್ಲಿ‌ ಉಡುಪಿ ಜಿಲ್ಲೆಗೆ ಡಬಲ್ ಧಮಾಕ; ಸುನಿಲ್ ಕುಮಾರ್, ಕೋಟಾಗೆ ಮಂತ್ರಿ ಭಾಗ್ಯ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಉಡುಪಿ ಜಿಲ್ಲೆಗೆ ಜಾಕ್ ಪಾಟ್ ಹೊಡೆದಿದ್ದು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರಿಗೆ ಮಂತ್ರಿ ಸ್ಥಾನ ಲಭಿಸಿದೆ. ಕೋಟ ಮತ್ತು ಸುನಿಲ್ ಇಬ್ಬರೂ ಆರ್ ಎಸ್ಎಸ್ ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ರಾಜಕೀಯದಲ್ಲಿ ಕ್ಲೀನ್ ಇಮೇಜ್ ಹೊಂದಿರುವ ನಾಯಕರಾಗಿದ್ದಾರೆ. ಇಬ್ಬರೂ ಬಿಲ್ಲವ ಸಮುದಾಯಕ್ಕೆ ಸೇರಿದವರಾಗಿದ್ದು, ಸಹಜವಾಗಿಯೇ ಸಮುದಾಯದ ಶೀರಕ್ಷೆಯೂ ಇವರ ಮೇಲಿದೆ. ಈ ಎಲ್ಲ ಕಾರಣಗಳಿಂದ ಒಂದೇ ಜಿಲ್ಲೆಯವರಾಗಿದ್ದರೂ […]

ಕರಾವಳಿಯ ಸುನಿಲ್ ಕುಮಾರ್, ಕೋಟ, ಅಂಗಾರಗೆ ಸಚಿವ ಸ್ಥಾನ; ಬೊಮ್ಮಾಯಿ ಸಂಪುಟದ ನೂತನ ಸಚಿವರ ಪಟ್ಟಿ ಪ್ರಕಟ

ಬೆಂಗಳೂರು: ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟದಲ್ಲಿ ಕರಾವಳಿ ಕರ್ನಾಟಕಕ್ಕೆ ಮೂರು ಮಂತ್ರಿ ಸ್ಥಾನ ಸಿಕ್ಕಿದೆ. ಅದರಲ್ಲೂ ಉಡುಪಿ ಜಿಲ್ಲೆಯ ಇಬ್ಬರಿಗೆ ಮಂತ್ರಿ ಭಾಗ್ಯ ಲಭಿಸಿದೆ. ಕಾರ್ಕಳ ಶಾಸಕ ಸುನೀಲ್ ಕುಮಾರ್, ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ್ ಪೂಜಾರಿ ಹಾಗೂ ದ.ಕ. ಜಿಲ್ಲೆಯ ಸುಳ್ಯ ಶಾಸಕ ಅಂಗಾರ ಅವರಿಗೆ ಅವಕಾಶ ಲಭ್ಯವಾಗಿದೆ. ಆದರೆ ಕುಂದಾಪುರ ಶಾಸಕ ಹಾಲಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮತ್ತೆ ಅದೃಷ್ಟ ಕೈಕೊಟ್ಟಿದ್ದು, ಅವರಿಗೆ ಸಚಿವ ಸ್ಥಾನ ಸಿಗದಿರುವುದು ಅಭಿಮಾನಿಗಳಿಗೆ ಭಾರೀ ನಿರಾಸೆಯಾಗಿದೆ. ನೂತನ ಸಚಿವರ […]