ಅಸ್ಸಾಂ-ಮಿಜೋರಾಂ ಗಡಿ ಸಂಘರ್ಷ: ಆರು ಪೊಲೀಸರ ಹತ್ಯೆ

ಗುವಾಹಟಿ: ಅಸ್ಸಾಂ ಮತ್ತು ಮಿಜೋರಾಂ ರಾಜ್ಯದ ಮಧ್ಯೆ ಗಡಿ ಸಂಘರ್ಷ ಉಂಟಾಗಿದ್ದು, ಈ ವೇಳೆ ನಡೆದ ಗುಂಡಿನ ದಾಳಿಯಲ್ಲಿ ಅಸ್ಸಾಂನ ಆರು ಮಂದಿ ಪೊಲೀಸರು ಮೃತಪಟ್ಟಿದ್ದಾರೆ. ಗುಂಡಿನ ದಾಳಿ ಮತ್ತು ಕಲ್ಲುತೂರಾಟದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಎರಡು ರಾಜ್ಯಗಳ ನಡುವಿನ ಗಡಿ ಸಂಘರ್ಷ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸಭೆ ನಡೆಸಿದ ಎರಡೇ ದಿನದಲ್ಲಿ ಈ ಹಿಂಸಾಚಾರ ನಡೆದಿದೆ. ದಕ್ಷಿಣ ಅಸ್ಸಾಂನ ಕಚಾರ್ ಜಿಲ್ಲೆ ಮತ್ತು ಮಿಜೋರಾಂನ ಕೊಲಾಸಿಬ್ […]

ಆಸ್ಕರ್ ಫೆರ್ನಾಂಡಿಸ್ ಮೆದುಳಿನ ಶಸ್ತ್ರಚಿಕಿತ್ಸೆ ಯಶಸ್ವಿ: ಆರೋಗ್ಯ ಸ್ಥಿರ

ಮಂಗಳೂರು: ಕಳೆದ ಎಂಟು ದಿನಗಳಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾಂಗ್ರೆಸ್ ಹಿರಿಯ ನಾಯಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಅವರಿಗೆ ವೈದ್ಯರು ಯಶಸ್ವಿಯಾಗಿ ಮೆದುಳಿನ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ವೈದ್ಯ ಡಾ. ಸುನಿಲ್ ಶೆಟ್ಟಿ ಮತ್ತು ಡಾ. ದಿವಾಕರ್ ತಂಡ ಶಸ್ತ್ರ ಚಿಕಿತ್ಸೆ ನಡೆಸಿದ್ದು, ಸದ್ಯ ಆಸ್ಕರ್  ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳಿಂದ ತಿಳಿದುಬಂದಿದೆ. ಪತ್ನಿ ಬ್ಲೋಸಂ ಫೆರ್ನಾಂಡಿಸ್ ಮತ್ತು ಮಕ್ಕಳು ಹಾಗೂ ಮಾಜಿ ಸಚಿವರಾದ ರಮಾನಾಥ ರೈ ಮತ್ತು ವಿನಯಕುಮಾರ್ […]

ಒಲಿಂಪಿಕ್ಸ್ ಹಾಕಿ: ಸ್ಪೇನ್ ವಿರುದ್ಧ ಭಾರತಕ್ಕೆ ಭರ್ಜರಿ ಜಯ

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡವು ಎರಡನೇ ಜಯ ಗಳಿಸಿದೆ. 3-0 ಅಂತರದಿಂದ ಸ್ಪೇನ್ ತಂಡವನ್ನು ಮಣಿಸುವ ಮೂಲಕ ಒಲಿಂಪಿಕ್ಸ್‌ನಲ್ಲಿ ಭರ್ಜರಿ ಗೆಲುವು ದಾಖಲಿಸಿದೆ. ಕಳೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹೀನಾಯ ಸೋಲು ಕಂಡಿದ್ದ ಭಾರತ ತಂಡವು ಮಂಗಳವಾರದ ಪಂದ್ಯದಲ್ಲಿ ಮತ್ತೆ ಪುಟಿದೆದ್ದಿದೆ. ‘ಎ’ ಗುಂಪಿನ ಪಂದ್ಯದಲ್ಲಿ ವಿಶ್ವದ ನಂ. 9 ಸ್ಪೇನ್‌ ವಿರುದ್ಧ ಗೆಲುವು ದಾಖಲಿಸುವಲ್ಲಿ ಸಿಮ್ರನ್‌ಜೀತ್‌ ಸಿಂಗ್ ಮತ್ತು ರೂಪೀಂದರ್ ಪಾಲ್ ಸಿಂಗ್ ಮಹತ್ತರ ಪಾತ್ರ ವಹಿಸಿದರು. ಕ್ರೀಡಾಕೂಟದ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ […]