ಬ್ರಾಹ್ಮಣ ಸಮುದಾಯದ ನಾಯಕರನ್ನು ಸಿಎಂ ಮಾಡಲು ಬಿಜೆಪಿ ಹೈಕಮಾಂಡ್ ಒಲವು.!
ಬೆಂಗಳೂರು: ಬಿ.ಎಸ್. ಯಡಿಯೂರಪ್ಪನವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಕರ್ನಾಟಕದ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಚರ್ಚೆ ಜೋರಾಗಿದ್ದು, ಈ ಮಧ್ಯೆ ಬಿಜೆಪಿ ಹೈಕಮಾಂಡ್ ಬ್ರಾಹ್ಮಣ ಸಮಾಜದ ನಾಯಕನಿಗೆ ಸಿಎಂ ಪಟ್ಟ ಕಟ್ಟಲು ಉತ್ಸುಕವಾಗಿದೆ ಎಂದು ಯಡಿಯೂರಪ್ಪನವರ ವಿರೋಧಿ ಬಣದಲ್ಲಿ ಮಾತುಗಳು ಕೇಳಿಬರುತ್ತಿವೆ. ಅದರಲ್ಲೂ ಕೇಂದ್ರ ಸಚಿವ, ಸಂಸದ ಪ್ರಹ್ಲಾದ್ ಜೋಶಿ ಬದಲು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಬಗ್ಗೆ ಹೈಕಮಾಂಡ್ಗೆ ಹೆಚ್ಚಿನ ಒಲವಿದೆ ಎಂಬ ಮಾತುಗಳೂ ಹರಿದಾಡುತ್ತಿದೆ. ಬ್ರಾಹ್ಮಣ ಸಮುದಾಯದವರು ಸಿಎಂ […]
ಬ್ರಹ್ಮಾವರ ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಸಂಸ್ಥೆ: ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭ
ಉಡುಪಿ: ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಸಮೀಪದ ಮಧುವನ್ ಕಾಂಪ್ಲೆಕ್ಸ್ ನಲ್ಲಿರುವ “ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್” ಸಂಸ್ಥೆಯಲ್ಲಿ ವಿವಿಧ ಕೋರ್ಸ್ ಗಳಿಗೆ ಪ್ರವೇಶಾತಿ ಆರಂಭಗೊಂಡಿದೆ. ಕೋರ್ಸ್ ಗಳ ವಿವರ ಈ ಕೆಳಕಂಡಂತಿವೆ. BS.C Nursing (ಬಿ.ಎಸ್.ಸಿ ನರ್ಸಿಂಗ್) ಅರ್ಹತೆ: ಕೇಂದ್ರೀಯ ಪ್ರೌಡ ಶಿಕ್ಷಣ ಮಂಡಳಿಯಿಂದ ಪಿಯುಸಿ / + 2 / ಸೀನಿಯರ್ ಸೆಕೆಂಡರಿ ಅಥವಾ ಯಾವುದೇ ರಾಜ್ಯ ಮಂಡಳಿಯು ನಡೆಸುವ ಯಾವುದೇ ಸಮಾನ ಪರೀಕ್ಷೆ. ಈ ಕೋರ್ಸ್ ಅವಧಿ 4 ವರ್ಷಗಳು. Bachelor of […]
ನಾನು ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡುತ್ತಿದ್ದೇನೆ: ಬಿಎಸ್ ವೈ
ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರಕ್ಕೆ ಎರಡು ವರ್ಷ ಪೊರೈಸಿದ ಹಿನ್ನೆಲೆಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಭಾವುಕರಾದರು. ವಿದಾಯ ಭಾಷಣದ ಕೊನೆಯಲ್ಲಿ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ತೀರ್ಮಾನಿಸಿದ್ದೇನೆ. ನಾನು ದುಃಖದಿಂದ ರಾಜೀನಾಮೆ ನೀಡುತ್ತಿಲ್ಲ, ಖುಷಿಯಿಂದ ನೀಡುತ್ತಿದ್ದೇನೆ ಎಂದರು. ಪಕ್ಷದಲ್ಲಿ 75 ವರ್ಷ ದಾಟಿದ ಯಾವುದೇ ವ್ಯಕ್ತಿಗೂ ಪಕ್ಷದಲ್ಲಿ ಸ್ಥಾನ ಇಲ್ಲ ಎಂಬ ಪದ್ಧತಿ ಇದೆ. ಆದ್ರೆ ಯಡಿಯೂರಪ್ಪನ ಬಗ್ಗೆ ಪ್ರೀತಿ ಇಟ್ಟು ಅವಕಾಶ ಮಾಡಿಕೊಟ್ಟರು. ಪ್ರೀತಿ, ನಂಬಿಕೆ ಇಟ್ಟು ನನಗೆ ಎರಡು ವರ್ಷ […]
ಸಿಎಂ ಸ್ಥಾನಕ್ಕೆ ಬಿ.ಎಸ್. ಯಡಿಯೂರಪ್ಪ ರಾಜೀನಾಮೆ ಘೋಷಣೆ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸಿಎಂ ಬದಲಾವಣೆ ಚರ್ಚೆಗೆ ಕಡೆಗೂ ತೆರೆ ಬಿದ್ದಿದೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಬಿ.ಎಸ್. ಯಡಿಯೂರಪ್ಪ ಇಂದು ಘೋಷಣೆ ಮಾಡಿದ್ದಾರೆ. ಮಧ್ಯಾಹ್ನ ರಾಜಭವನಕ್ಕೆ ತೆರಳಿ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸುವುದಾಗಿ ಸಿಎಂ ಯಡಿಯೂರಪ್ಪ ಘೋಷಿಸಿದ್ದಾರೆ. ಮಧ್ಯಾಹ್ನ ಊಟದ ಬಳಿಕ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವೆ ಎಂದು ಯಡಿಯೂರಪ್ಪ ಗದ್ಗದಿತರಾಗಿ ಹೇಳಿದರು. ಸರ್ಕಾರಕ್ಕೆ ಎರಡು ವರ್ಷ ತುಂಬಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ […]
ಕಾರ್ಗಿಲ್ ಯುದ್ಧದ ಆ ರೋಮಾಂಚಕ ಕ್ಷಣಗಳನ್ನು ಬಿಚ್ಚಿಡುತ್ತಾರೆ ಉಡುಪಿ ಜಿಲ್ಲೆಯ ಈ ಹೆಮ್ಮೆಯ ಯೋಧ
ಭಾರತೀಯ ಸೈನ್ಯದ ಬಗ್ಗೆ ಕೇಳುವಾಗ ರೊಮಾಂಚನ, ಕೌತುಕಗಳು ಮೂಡುತ್ತದೆ. ಕಾಶ್ಮೀರ ಕಣಿವೆಯಲ್ಲಿ ಪ್ರತಿದಾಳಿ ನಡೆಸಲು ಸಜ್ಜಾಗುವ ಭಾರತೀಯ ಪಡೆಯ ಬಗ್ಗೆ ಕೇಳುವಾಗಲೆ ಮೈ ಜುಮ್ಮೆನ್ನುತ್ತದೆ ಅಲ್ವಾ? ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಯೋಧರೊಬ್ಬರ ಸಾಹಸ ಯಶೋಗಾಥೆ ಗೆ ಇಂದಿನ ಈ ಕಾರ್ಗಿಲ್ ವಿಜಯ್ ದಿನ ಸಾಕ್ಷಿಯಾಗಿದೆ. ಅವರ ಹೆಸರು ರವೀಂದ್ರ ಕಾಮತ್. ಎಸ್ ಅನಂತ ಕಾಮತ್ ಮತ್ತು ಶ್ರೀಮತಿ ಪದ್ಮಾವತಿ ಕಾಮತ್ ಅವರ ಮಗನಾಗಿ ಜನಿಸಿದ ರವೀಂದ್ರ ಕಾಮತ್ ಶಿಕ್ಷಣ ಮುಗಿಸಿದ ಬಳಿಕ 1996 […]