ಸಿಎಂ ಬದಲಾವಣೆ ಖಚಿತ ಆಗ್ತಿದ್ದಂತೆ ಗದ್ದುಗೆಗಾಗಿ ತೆರೆಮರೆಯಲ್ಲಿ ನಡೀತಿದೆ ಕಸರತ್ತು.!

ಬೆಂಗಳೂರು: ಸಿಎಂ ಬದಲಾವಣೆ ವಿಚಾರ ತೀವ್ರಗೊಂಡ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಕಸರತ್ತು ಜೋರಾಗಿದ್ದು, ಕೆಲವು ನಾಯಕರಿಂದ ಸಿಎಂ ಪಟ್ಟಕ್ಕೇರಲು ತೆರೆಮರೆಯಲ್ಲಿ ತಯಾರಿ ನಡೆಯುತ್ತಿದೆ. ಇಬ್ಬರು ನಾಯಕರ ಮಧ್ಯೆ ಪ್ರಬಲ ಪೈಪೋಟಿ ಇದೆ ಎನ್ನಲಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮತ್ತು ರಾಜ್ಯ ಗಣಿಗಾರಿಕೆ ಸಚಿವ ಮುರುಗೇಶ್​​ ನಿರಾಣಿ ಮುಖ್ಯಮಂತ್ರಿ ಹುದ್ದೆಗಾಗಿ ಭಾರೀ ಪೈಪೋಟಿ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರ ಸಚಿವ, ಧಾರವಾಡ ಸಂಸದರಾಗಿರುವ ಪ್ರಹ್ಲಾದ್ ಜೋಶಿ ಹಾಗೂ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿರುವ ಮುರುಗೇಶ್ ನಿರಾಣಿ […]

ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಆರೋಪ: ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾ ಬಂಧನ

ಮುಂಬೈ: ಅಶ್ಲೀಲ ಚಿತ್ರಗಳನ್ನು ತಯಾರಿಸಿದ ಮತ್ತು ಕೆಲವು ಆ್ಯಪ್‌ಗಳ ಮೂಲಕ ಅವುಗಳನ್ನು ಬಿತ್ತರಿಸಿದ ಆರೋಪದ ಮೇಲೆ ಉದ್ಯಮಿ ಮತ್ತು ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಅವರನ್ನು ಸೋಮವಾರ ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅಶ್ಲೀಲ ಚಿತ್ರಗಳ ತಯಾರಿ ಮತ್ತು ಅವುಗಳನ್ನು ಕೆಲವು ಅಪ್ಲಿಕೇಶನ್‌ಗಳ ಮೂಲಕ ಬಿತ್ತರಿಸುತ್ತಿರುವ ಬಗ್ಗೆ 2021ರ ಫೆಬ್ರುವರಿಯಲ್ಲಿ ಮುಂಬೈನ ಅಪರಾಧ ವಿಭಾಗದಲ್ಲಿ ಪ್ರಕರಣ ದಾಖಲಾಗಿತ್ತು. ಅವರು ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಈ ಬಗ್ಗೆ ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ ಎಂದು […]

ಸ್ಥಳೀಯ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ಡೀಮ್ಡ್ ಫಾರೆಸ್ಟ್ ಗುಮ್ಮ: ಉದ್ಯಮಿಗಳಿಗೆ ನ್ಯಾಯ, ಬಡವರಿಗೆ, ಕೃಷಿಕರಿಗೆ ಅನ್ಯಾಯ:ಕ್ಸೇವಿಯರ್ ಡಿ ಮೆಲ್ಲೋ

ಕಾರ್ಕಳ : ಯಾವುದೇ ಸ್ಥಳೀಯ ಚುನಾವಣೆ ಅಗಲಿ ಅಥವಾ ಎಂಪಿ, ಎಂಎಲ್ ಚುನಾವಣೆಯಾಗಲಿ ಚುನಾವಣೆಯ ದಿನಾಂಕ ನಿಗದಿಯಾಗುತ್ತಿದಂತೆ ಜನರ ತಲೆಕೆಡಿಸುವ  ಯೋಜನೆಗಳು ಕಾರ್ಕಳಕ್ಕೇನು ಹೊಸತಲ್ಲ ಇದೀಗ ಮತ್ತೆ ಗುಮ್ಮ ಯೋಜನೆ ಕುರಿತು ವದಂತಿ ಹಬ್ಬಿಸಿ ಜನರಿಗೆ ದಾರಿ ತಪ್ಪಿಸುವ ಕೆಲಸವಾಗುತ್ತಿದೆ‌. ಎಂದು ಸಾಮಾಜಿಕ ‌ಹೋರಾಟಗಾರ ಕೃಷಿಕ ಕ್ಸೇವಿಯರ್ ಡಿ ಮೆಲ್ಲೋ ಗಂಭೀರವಾಗಿ ಆರೋಪಿಸಿದ್ದಾರೆ. ಸ್ಥಳೀಯ ಚುನಾವಣೆಯ ಸಂದರ್ಭದಲ್ಲಿ ಡೀಮ್ಡ್ ಫಾರೆಸ್ಟ್ ಗೊಂದಲ, ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಹುಲಿಯೋಜನೆ, ಕಸ್ತೂರಿ ರಂಗನ್ ಇಂತಹ ಯೋಜನೆಗಳ ಬಗ್ಗೆ […]