ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿವಿಧ ಹುದ್ದೆ: ಅರ್ಜಿ ಆಹ್ವಾನ
ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅನುಷ್ಠಾನದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಯೋಜನೆಯಡಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ಖಾಲಿ ಇರುವ 3 ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಯ ವಿವರ: ಅಕೌಂಟೆಂಟ್ ಕಂ ಕ್ಲರ್ಕ್/ ಸ್ಟೋರ್ ಕೀಪರ್‌ನ 1 ಹುದ್ದೆಗೆ ಬಿ.ಕಾಂ ಪದವಿ ಮತ್ತು ಕಂಪ್ಯೂಟರ್ ಅನುಭವ ಹೊಂದಿರುವವರು (ಮಾಸಿಕ ಗೌರವಧನ 12,000), ಕೃತಕಾಂಗ ಜೋಡಣೆ ಪಿ & ಓ ಅಭಿಯಂತರು 1 ಹುದ್ದೆಗೆ ಪಿ & […]
ಬಾದಾಮಿಯಿಂದಲೇ ಮತ್ತೊಮ್ಮೆ ಸ್ಪರ್ಧೆ: ಸಿದ್ದರಾಮಯ್ಯ ಘೋಷಣೆ
ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯನವರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಗೊಂದಲಕ್ಕೆ ಕೊನೆಗೂ ತೆರೆಬಿದ್ದಿದೆ. ನಾನು ಚಾಮರಾಜಪೇಟೆ ಅಳಿಯ ಅಂತ ಹೇಳಿಕೆ ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಿವಾಸದೆದುರು ಇಂದು ಬಾದಾಮಿಯ ನೂರಾರು ಬೆಂಬಲಿಗರು ಜಮಾಯಿಸಿದ್ದು, ಬದಾಮಿಯಿಂದಲೇ ಮುಂದಿನ ಬಾರಿಯೂ ಸ್ಪರ್ಧಿಸುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ಅವರು, ತಾವು ಬಾದಾಮಿ ಬಿಟ್ಟು ಎಲ್ಲಿಯೂ ಸಹ ಚಾಮರಾಜಪೇಟೆಯಿಂದ ಚುನಾವಣೆಗೆ ನಿಲ್ತೀನಿ ಅಂತ ಹೇಳಿಲ್ಲ ಎಂದು ಸ್ಪಷ್ಟನೆ […]
ಬ್ರಹ್ಮಾವರ ಗ್ರಾಮಾಂತರ ಬಿಜೆಪಿ ವತಿಯಿಂದ ಗಿಡ ನೆಡುವ ಕಾರ್ಯಕ್ರಮ
ಬ್ರಹ್ಮಾವರ: ಬ್ರಹ್ಮಾವರ ಗ್ರಾಮಾಂತರ ಬಿಜೆಪಿ ವತಿಯಿಂದ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಸವಿನೆನಪಿನ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಕೊಕ್ಕರ್ಣೆಯಲ್ಲಿ ಆಯೋಜಿಸಲಾಯಿತು. ಗ್ರಾಮಾಂತರ ಬಿಜೆಪಿ ಉಪಾಧ್ಯಕ್ಷೆ ಲಕ್ಷ್ಮೀ ಅಡಿಗ ಹೊರ್ಲಾಳಿ ಅವರ ಮನೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷೆ ವೀಣಾ ನಾಯಕ್ , ಬಿಜೆಪಿ ಕೊಕ್ಕರ್ಣೆ ಮಹಾಶಕ್ತಿ ಕೇಂದ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಶ್ರೀ ವಿಜಯಕುಮಾರ್ ಶೆಟ್ಟಿ ಕೆಂಜೂರು, ಸಹಸಂಚಾಲಕ ಮಂಜುನಾಥ ಕೊಕ್ಕರ್ಣೆ, ಪಂಚಾಯಿತಿ ಸದಸ್ಯ ಗಣೇಶ, ಕಾರ್ಯಕರ್ತರಾದ ವಿಶ್ವನಾಥ ಅಡಿಗ […]
ಕರ್ನಾಟಕದ ರಾಜ್ಯಪಾಲರಾಗಿ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ನೇಮಕ
ಬೆಂಗಳೂರು: ಕೇಂದ್ರ ಕ್ಯಾಬಿನೆಟ್ ವಿಸ್ತರಣೆ ಬೆನ್ನಲ್ಲೇ ಕರ್ನಾಟಕ ಸಹಿತ ಎಂಟು ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಲಾಗಿದೆ. ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್ ಅವರನ್ನು ನೇಮಕ ಮಾಡಲಾಗಿದೆ. ತಾವರ್ ಚಂದ್ ಅವರು ಕೇಂದ್ರ ಸಾಮಾಜಿಕ, ನ್ಯಾಯ ಸಬಲೀಕರಣ ಸಚಿವರಾಗಿದ್ದರು. ವಜೂಭಾಯಿ ವಾಲಾ ಅವರ ರಾಜ್ಯಪಾಲ ಅಧಿಕಾರಾವಧಿ ಕೆಲವು ತಿಂಗಳ ಹಿಂದೆಯೇ ಮುಗಿದಿದ್ದರೂ, ಅವರನ್ನೇ ರಾಜ್ಯಪಾಲರಾಗಿ ಮುಂದುವರೆಸಲಾಗಿತ್ತು. ರಾಜ್ಯಪಾಲರ ಪಟ್ಟಿ ಹೀಗಿದೆ: ಥಾವರ್ಚಂದ್ ಗೆಹ್ಲೋಟ್- ಕರ್ನಾಟಕ ಬಂಡಾರು ದತ್ತಾತ್ರೇಯ- ಹರಿಯಾಣ ಮಂಗುಭಾಯಿ […]
ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್ ಗೆ ಡಿಕ್ಕಿ: ಸವಾರ ಮೃತ್ಯು
ಬಾಗಲಕೋಟೆ: ಡಿಸಿಎಂ ಲಕ್ಷ್ಮಣ ಸವದಿ ಮಗನ ಕಾರು ಬೈಕ್ವೊಂದಕ್ಕೆ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಹುನಗುಂದದಿಂದ ವಿಜಯಪುರ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ ಅವರ ಕಾರು ಚಿತ್ರದುರ್ಗ -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 50 ಕೂಡಲಸಂಗಮ ಕ್ರಾಸ್ ಬಳಿ ಬೈಕ್ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ಬೈಕ್ ಸವಾರ ಕೂಡ್ಲೆಪ್ಪ(58) ಅವರ ತಲೆಗೆ ಗಂಭೀರ ಗಾಯವಾಗಿತ್ತು. ಕೂಡಲೇ ಅವರನ್ನ ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿತ್ತು. […]