ಲಸಿಕಾ ವಿತರಣೆಯ ದಿಕ್ಕು ತಪ್ಪಿಸುತ್ತಿರುವ ಜನಪ್ರತಿನಿಧಿಗಳು, ತಮಗೆ ಬೇಕಾದವರಿಗೆ ಲಸಿಕೆ ವಿತರಣೆ: ಕ್ಸೇವಿಯರ್ ಡಿಮೆಲ್ಲೋ ಆರೋಪ

ಉಡುಪಿ: ಅಚ್ಚುಕಟ್ಟಾಗಿ ನಡೆಯುತ್ತಿದ್ದ ಕೊರೋನಾ ಲಸಿಕಾ ಕಾರ್ಯಕ್ರಮ ರಾಜಕಾರಣಿಗಳ ಮಧ್ಯ ಪ್ರವೇಶದಿಂದಾಗಿ ಹಳಿತಪ್ಪುತ್ತಿದ್ದು, ರಾಜಕಾರಣಿಗಳು ತಮಗೆ ಬೇಕಾದವರಿಗೆ ಲಸಿಕೆ ಸಿಗುವಂತೆ ಮಾಡುತ್ತಿದ್ದಾರೆ. ಮುಂಬೈ, ಬೆಂಗಳೂರಿನಂತಹ ದೂರದ ಊರುಗಳಿಂದ ಜಿಲ್ಲೆಗೆ ಬರುತ್ತಿರುವ ತಮ್ಮ ಸಂಬಂಧಿಕರಿಗೆ, ಆಪ್ತರಿಗೆ ಲಸಿಕೆ ಕೊಡುವಂತೆ ಶಿಫಾರಸ್ಸು ಮಾಡುತ್ತಿದ್ದಾರೆ. ಇದರಿಂದಾಗಿ ಸಾಮಾನ್ಯ ಜನರಿಗೆ ಸರಿಯಾದ ಸಮಯಕ್ಕೆ ಲಸಿಕೆ ಸಿಗುತ್ತಿಲ್ಲ,  ಎಂದು ಸಾಮಾಜಿಕ ಕಾರ್ಯಕರ್ತ, ತಾ.ಪಂ. ಸದಸ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಕ್ಸೇವಿಯರ್ ಡಿಮೆಲ್ಲೋ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾ.ಪಂ ವ್ಯಾಪ್ತಿಯಲ್ಲಿ ಪಿಡಿಒಗಳ ಮೂಲಕ ಸ್ಥಳೀಯ ರಾಜಕಾರಣಿಗಳು, ಪಂಚಾಯತ್ […]