ಲಕ್ಷಾಂತರ ಮೌಲ್ಯದ ಗಂಧದ ಮರಗಳ ಕಳ್ಳತನಕ್ಕೆ ಯತ್ನ; ಇಬ್ಬರು ಖದೀಮರನ್ನು ಸೆರೆಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದ ಹಿಂದೂ ಕಾರ್ಯಕರ್ತರು
ಬಂಟ್ವಾಳ: ಇಲ್ಲಿನ ಕಲ್ಲಡ್ಕ ಸಮೀಪದ ಅನಂತಾಡಿ ಗ್ರಾಮದ ಸುಳ್ಲಮಲೆ ಗುಡ್ಡೆ ಅರಣ್ಯದಲ್ಲಿ ಲಕ್ಷಾಂತರ ಮೌಲ್ಯದ ಗಂಧದ ಮರಗಳನ್ನು ಕಳ್ಳತನ ಮಾಡಲು ಯತ್ನಿಸುತ್ತಿದ್ದ ಇಬ್ಬರು ಖದೀಮರನ್ನು ಹಿಂದು ಸಂಘಟನೆಯ ಯುವಕರು ಸೆರೆಹಿಡಿದು ಅರಣ್ಯಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಬಂಧಿತರನ್ನು ಇಬ್ರಾಹಿಂ ಹಾಗೂ ಮೊಯಿದ್ದೀನ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಸುಳ್ಲಮಲೆ ಗುಡ್ಡೆ ಅರಣ್ಯದಲ್ಲಿ ಗಂಧದ ಮರಗಳನ್ನು ಕಡಿಯುತ್ತಿದ್ದರು. ಇದರ ಸುಳಿವು ಪಡೆದ ಯುವಕರು ದಿಢೀರ್ ದಾಳಿ ನಡೆಸಿ ಇಬ್ಬರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಇಬ್ಬರು ಖದೀಮರನ್ನು ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ. ಅಧಿಕಾರಿಗಳು […]