ಡೆಲ್ಟಾ ಪ್ಲಸ್ ವೈರಸ್ ನ ತೀವ್ರತೆ ಅಧಿಕ: ಡಾ. ಮಂಜುನಾಥ್
ಬೆಂಗಳೂರು: ಕೊರೊನಾ ರೂಪಾಂತರ ತಳಿ ‘ಡೆಲ್ಟಾ ಪ್ಲಸ್’ ವೇಗವಾಗಿ ಹರಡಲಿದ್ದು, ಅದರ ತೀವ್ರತೆ ಜಾಸ್ತಿ ಇರುತ್ತದೆ ಎಂದು ಜಯದೇವ ಹೃದ್ರೋಗ ಸಂಸ್ಥೆ ನಿರ್ದೇಶಕ ಹಾಗೂ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸದಸ್ಯರೂ ಆಗಿರುವ ಡಾ.ಸಿ.ಎನ್. ಮಂಜುನಾಥ್ ಹೇಳಿದರು. ಡೆಲ್ಟಾ ಪ್ಲಸ್ ಸೋಂಕಿನ ಬಗ್ಗೆ ಹೆಚ್ಚಿನ ಅಧ್ಯಯನಗಳು ನಡೆಯಬೇಕಿದೆ. ನಾಲ್ಕರಿಂದ ಐದು ತಿಂಗಳ ಅವಧಿಯಲ್ಲಿ ವೈರಾಣು ರೂಪಾಂತರಗೊಳ್ಳುವುದು ಸಹಜ, ಅನಗತ್ಯವಾಗಿ ಆತಂಕ ಪಡಬೇಕಾಗಿಲ್ಲ. ಆದರೆ, ಈ ವರ್ಷ ಪೂರ್ತಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುವ ಅತ್ಯಗತ್ಯವಾಗಿದೆ ಎಂದರು. ಮಾರುಕಟ್ಟೆಯಲ್ಲಿರುವ ಲಸಿಕೆಗಳು […]
ಕೊರೊನಾ ರೂಪಾಂತರಿ ತಳಿ ‘ಡೆಲ್ಟಾ ಪ್ಲಸ್’ ಸೋಂಕಿಗೆ ಮಹಿಳೆ ಬಲಿ
ಭೋಪಾಲ್: ಕೋವಿಡ್ ಎರಡನೇ ಅಲೆಯ ಆರ್ಭಟ ಕೊಂಚ ಕಡಿಮೆಯಾಯ್ತು ಎನ್ನುವಾಗಲೇ ದೇಶದಲ್ಲಿ ಕೊರೊನಾ ವೈರಸ್ ರೂಪಾಂತರಿ ತಳಿ ‘ಡೆಲ್ಟಾ ಪ್ಲಸ್’ ಸೋಂಕಿನ ಭೀತಿ ಉಂಟಾಗಿದೆ. ಮಧ್ಯಪ್ರದೇಶದಲ್ಲಿ ಐವರಲ್ಲಿ ಡೆಲ್ಟಾ ಪ್ಲಸ್ ಸೋಂಕು ದೃಢಪಟ್ಟಿದ್ದು, ಅವರಲ್ಲಿ ಒಬ್ಬರು ಮಹಿಳೆ ಮೃತಪಟ್ಟಿದ್ದಾರೆ ಎಂದು ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವ ವಿಶ್ವಾಸ್ ಸರಂಗ್ ಗುರುವಾರ ತಿಳಿಸಿದ್ದಾರೆ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದ ಇತರ ನಾಲ್ವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮರಣ ಹೊಂದಿದ ವ್ಯಕ್ತಿ ಉಜ್ಜೈನಿ ಮೂಲದವರಾಗಿದ್ದು, ಅವರು […]
ಕುಕ್ಕೆಹಳ್ಳಿ: ಕೋವಿಡ್-19 ಲಸಿಕಾ ಅಭಿಯಾನ
ಉಡುಪಿ: ಕುಕ್ಕೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಹಯೋಗದಲ್ಲಿ ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ವಿಜೇತ್ ಕುಮಾರ್ ಅವರ ನೇತೃತ್ವದಲ್ಲಿ ಕೋವಿಡ್-19 ಲಸಿಕಾ ಅಭಿಯಾನ ಇಂದು ಬೆಳ್ಳರ್ಪಾಡಿ ಶಾಲೆಯಲ್ಲಿ ಯಶಸ್ವಿಯಾಗಿ ನಡೆಯಿತು. 102 ಫಲಾನುಭವಿಗಳಿಗೆ ಕೋವಿಡ್ ಶಿಲ್ಡ್ ಲಸಿಕೆ ನೀಡಲಾಯಿತು. ಕುಕ್ಕೆಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅರ್ಚನಾ ಹೆಗ್ಡೆ, ಸಿಬ್ಬಂದಿಗಳಾದ ನವೀನ್ ಪ್ರಭು, ಕಲಾವತಿ, ಮಲಾತಿ ಹಾಗೂ ಆಶಾ ಕಾರ್ಯಕರ್ತೆ ಜಯಲಕ್ಷ್ಮೀ ಅವರು ಲಸಿಕಾ ಅಭಿಯಾನಕ್ಕೆ ಸಹಕರಿಸಿದರು. ಕಾಪು ಮಂಡಲ ಪ್ರಧಾನ ಕಾರ್ಯದರ್ಶಿ ಅನಿಲ್ […]
ಮಣಿಪಾಲ: ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕರೆ ಮಾಡಿ ಕೂಲಿಕಾರ್ಮಿಕನ ಖಾತೆಯಿಂದ ₹30 ಸಾವಿರ ಲಪಟಾಯಿಸಿದ ವಂಚಕ.!
ಮಣಿಪಾಲ: ವಂಚಕನೊಬ್ಬ ಬ್ಯಾಂಕ್ ಮ್ಯಾನೇಜರ್ ಹೆಸರಿನಲ್ಲಿ ಕರೆ ಮಾಡಿ ವ್ಯಕ್ತಿಯೊಬ್ಬರ ಖಾತೆಯಿಂದ ₹ 30 ಸಾವಿರ ಲಪಟಾಯಿಸಿದ ಘಟನೆ ಅಲೆವೂರು ಗ್ರಾಮದ ಪ್ರಗತಿನಗರದಲ್ಲಿ ಇಂದು ಬೆಳಿಗ್ಗೆ ನಡೆದಿದೆ. ಪ್ರಗತಿನಗರದ ಕೂಲಿಕಾರ್ಮಿಕರೊಬ್ಬರಿಗೆ ಇಂದು ಬೆಳಿಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು ಕರೆ ಮಾಡಿದ್ದು, ತಾನು ಸಿಂಡಿಕೇಟ್ ಮ್ಯಾನೇಜರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ ನಿಮ್ಮ ಎಟಿಎಮ್ ಕಾರ್ಡ್ ಬ್ಲಾಕ್ ಆಗಿದ್ದು, ಅದನ್ನು ಸರಿಪಡಿಸಲು ನಿಮ್ಮ ದಾಖಲೆ ನೀಡಬೇಕು ಎಂದಿದ್ದಾನೆ. ಅದರಂತೆ ಕೂಲಿಕಾರ್ಮಿಕ ತನ್ನ ಬ್ಯಾಂಕ್ ಖಾತೆಯ ಮಾಹಿತಿಯನ್ನು ವಂಚಕನಿಗೆ ತಿಳಿಸಿದ್ದಾನೆ. ಅಲ್ಲದೆ, […]
ಮಣಿಪಾಲ: ಮನೆಯೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; ಅಪಾರ ಹಾನಿ
ಮಣಿಪಾಲ: ಅಡುಗೆ ಮಾಡುತ್ತಿದ್ದ ವೇಳೆ ಅನಿಲ ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡ ಘಟನೆ ಮಣಿಪಾಲ ಅನಂತ ನಗರದ ಸೋನಿ ಕ್ಲಿನಿಕ್ ನ ಹಿಂಬದಿಯಲ್ಲಿ ಇರುವ ಮನೆಯೊಂದರಲ್ಲಿ ಬುಧವಾರ ರಾತ್ರಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ . ಸಿಲಿಂಡರ್ ನಲ್ಲಿ ಅನಿಲ ಸೋರಿಕೆಯಾಗಿ ಬೆಂಕಿ ಹತ್ತಿಕೊಂಡಿತ್ತು. ಮನೆಯವರು ಒದ್ದೆ ಬಟ್ಟೆಗಳನ್ನು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಅದು ನಿಯಂತ್ರಣಕ್ಕೆ ಬಂದಿಲ್ಲ. ಏಕಾಏಕಿಯಾಗಿ ಸಿಲಿಂಡರ್ ಗೆ ಬೆಂಕಿ ಹತ್ತಿಕೊಂಡಿದೆ. ಕೂಡಲೇ ಎಚ್ಚೆತ್ತ ಮನೆಯವರು ಮನೆಯಿಂದ ಹೊರಗೆ […]