ಉಡುಪಿ: ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೊಳ್ಳಲಿದೆ ವೀಕೆಂಡ್ ಕರ್ಫ್ಯೂ; ಜನರ ಅನಗತ್ಯ ಓಡಾಟಕ್ಕೆ ಸಂಪೂರ್ಣ ಬ್ರೇಕ್

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ದೃಢಪಡುವ ಪಾಸಿಟಿವಿಟಿ ದರವನ್ನು ಸೊನ್ನೆಗೆ ಇಳಿಸುವ ಉದ್ದೇಶದಿಂದ ಜಿಲ್ಲಾಡಳಿತ ವೀಕೆಂಡ್ ಕರ್ಫ್ಯೂ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ನಿರ್ಧರಿಸಿದೆ. ಅಗತ್ಯ ಮತ್ತು ತುರ್ತು ಚಟುವಟಿಕೆಗಳನ್ನು ಹೊರತುಪಡಿಸಿ ಜೂನ್ 25ರ ಶುಕ್ರವಾರ ಸಂಜೆ 7 ಗಂಟೆಯಿಂದ ಜೂ. 28ರ ಸೋಮವಾರ ಬೆಳಿಗ್ಗೆ 5ಗಂಟೆಯವರೆಗೆ ವ್ಯಕ್ತಿಗಳ ಚಲನೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಿ ಜಿಲ್ಲಾಧಿಕಾರಿ‌ ಜಿ. ಜಗದೀಶ್ ಆದೇಶ ಹೊರಡಿಸಿದ್ದಾರೆ. ವೀಕೆಂಡ್ ಕರ್ಫ್ಯೂ ಅವಧಿಯಲ್ಲಿ ಈ ಕೆಳಕಂಡ ಅಗತ್ಯ ಚಟುವಟಿಕೆಗಳಿಗೆ ಅವಕಾಶ: ಎಲ್ಲಾ ರಾಜ್ಯ ಮತ್ತು ಕೇಂದ್ರ ಸರ್ಕಾರದ […]

ಇಲ್ಲಿದೆ ಕಿರುಚಿತ್ರ ಸ್ಪರ್ಧೆ:ಆಸಕ್ತರು ಭಾಗವಹಿಸಿ

ಉಡುಪಿ : ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಜಲಶಕ್ತಿ ಮಂತ್ರಾಲಯವು ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಆಗಸ್ಟ್ 15 ರ ವರೆಗೆ ರಾಷ್ಟಿಯ ಸ್ವಚ್ಛತಾ ಫಿಲ್ಮೋಂ ಕಾ ಅಮೃತ್ ಮಹೋತ್ಸವ (ಅಜಾದ್ ಕಾ ಅಮೃತ್ ಮಹೋತ್ಸವ) ಎಂಬ ಹೆಸರಿನಡಿ ರಾಷ್ಟ ಮಟ್ಟದ ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಿದೆ. ಕಿರುಚಿತ್ರ ಸ್ಪರ್ಧೆಯು ಎರಡು ವರ್ಗಗಳಲ್ಲಿ ನಡೆಯಲಿದ್ದು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಡಿ ಕೆಲಸ ನಿರ್ವಹಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರು / ಪಿಎಂಯು […]

ಕಾರ್ಕಳ,ಕಾಪು: ಬೋಧಕ ಹುದ್ದೆ ಖಾಲಿ ಇದೆ :ಆಸಕ್ತರು ಅರ್ಜಿ ಸಲ್ಲಿಸಿ

ಉಡುಪಿ : ಪ್ರಸಕ್ತ ಸಾಲಿನಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಲ್ಮರ ಮತ್ತು ಕಾಪು ತಾಲೂಕಿನ ಮಲ್ಲಾರುವಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೌಲಾನಾ ಆಜಾದ್ ಮಾದರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಖಾಲಿ ಇರುವ ಹಿಂದಿ ಭಾಷಾ ಶಿಕ್ಷಕರ – 2 ಹುದ್ದೆ (ವಿದ್ಯಾರ್ಹತೆ: ಬಿ.ಎ, ಬಿ.ಎಡ್), ಸಮಾಜ ವಿಜ್ಞಾನ ಶಿಕ್ಷಕರ – 2 ಹುದ್ದೆ ಮತ್ತು ವಿಜ್ಞಾನ ಶಿಕ್ಷಕರ – 2  (ವಿದ್ಯಾರ್ಹತೆ: ಬಿ.ಎಸ್ಸಿ. ಬಿಎಡ್/ ಎಂ.ಎಸ್ಸಿ) ಬೋಧಕ ಹುದ್ದೆಗಳಿಗೆ ಅತಿಥಿ ಶಿಕ್ಷಕರ ಸೇವೆಯನ್ನು ಪಡೆಯಲು […]

ಆಗುಂಬೆ ಘಾಟಿ- ಭಾರಿ ವಾಹನಗಳ ಸಂಚಾರ ನಿಷೇಧ

ಉಡುಪಿ : ರಾಷ್ಟ್ರಿಯ ಹೆದ್ದಾರಿ 169ಎ ರ ತೀರ್ಥಹಳ್ಳಿ-ಉಡುಪಿ ರಸ್ತೆಯ ಆಗುಂಬೆ ಘಾಟಿ ರಸ್ತೆಯು ಕಿರಿದಾಗಿದ್ದು, ಮಳೆಗಾಲದಲ್ಲಿ ಭಾರಿ ಸರಕು ಸಾಗಾಣೆ ವಾಹನಗಳು ಸಂಚರಿಸುವುದರಿAದ ರಸ್ತೆ ಬದಿಯ ಮಣ್ಣು ಕುಸಿದು, ಸುಗಮ ಸಂಚಾರಕ್ಕೆ ತೊಂದರೆಯಾಗುವ ಸಾಧ್ಯತೆ ಇರುವುದರಿಂದ ಕೇಂದ್ರ ಮೋಟಾರು ವಾಹನ ಕಾಯ್ದೆ 1988 ರ ಕಲಂ 115 ಹಾಗೂ ರಾಜ್ಯ ಮೋಟಾರು ವಾಹನಗಳ ನಿಯಮ 1989 ಕಲಂ 221(ಎ)(2) & (5) ರನ್ವಯ ರಾಷ್ಟ್ರಿಯ ಹೆದ್ದಾರಿ 169 ಎ ರಸ್ತೆಯ ಆಗುಂಬೆ ಘಾಟಿಯಲ್ಲಿ ಅಕ್ಟೋಬರ್ 15 […]

ಉಡುಪಿ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಉಡುಪಿ: ಸರಿಯಾದ ಉದ್ಯೋಗ ಸಿಗದೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಡಯಾನ ಇಂದಿರಾನಗರ ಎಂಬಲ್ಲಿ ನಡೆದಿದೆ. ಮೃತನನ್ನು ಇಂದಿರಾನಗರ ನಿವಾಸಿ ಧನಂಜಯ ಎಸ್. (36) ಎಂದು ಗುರುತಿಸಲಾಗಿದೆ. ಈತ ಅವಿವಾಹಿತನಾಗಿದ್ದು, ಸರಿಯಾದ ಕೆಲಸವೂ ಇರಲಿಲ್ಲ. ಅಲ್ಲದೆ, ಕಳೆದ ಐದು ವರ್ಷಗಳಿಂದ ಮಾನಸಿಕ  ಖಿನ್ನತೆಗೆ ಒಳಗಾಗಿದ್ದು, ಇದೇ ಕಾರಣದಿಂದ ಮನನೊಂದು ಜೂನ್ 23ರಂದು ಮನೆಯ ಬಳಿಯ ಸರ್ಕಾರಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.