6 ಅಥವಾ 8 ವಾರಗಳಲ್ಲಿ ಕೋವಿಡ್ ಮೂರನೇ ಅಲೆ ಅಪ್ಪಳಿಸಲಿದೆ: ತಜ್ಞರ ಎಚ್ಚರಿಕೆ
ನವದೆಹಲಿ: ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ದೇಶದಲ್ಲಿ ಈಗ ಮೂರನೇ ಅಲೆ ಭೀತಿ ಉಂಟಾಗಿದೆ. ದೇಶದಲ್ಲಿ ಮುಂದಿನ 6 ರಿಂದ 8 ವಾರಗಳಲ್ಲಿ ಕೊರೊನಾ 3ನೇ ಅಲೆ ಕಾಣಿಸಿಕೊಳ್ಳಲಿದೆ ಎಂದು ಏಮ್ಸ್ನ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ ಕೋವಿಡ್ ಅನ್ ಲಾಕ್ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆ ಕೋವಿಡ್ ನಿಯಮಗಳನ್ನು ಪಾಲಿಸುವುದು ಕಣ್ಮರೆಯಾಗುತ್ತಿದೆ. ಮೊದಲ ಮತ್ತು ಎರಡನೇ ಅಲೆಯ ನಂತರವೂ ನಾವು ಪಾಠ ಕಲಿತಿಲ್ಲ. ಇಷ್ಟೆಲ್ಲ ಆದರೂ ಜನರು ಮತ್ತೆ ಗುಂಪು ಸೇರುತ್ತಿದ್ದಾರೆ. ಇದು ಮೂರನೇ […]
ಸಿಂಪಲ್ಲಾಗಿ ಕಲೀರಿ ಇಂಗ್ಲೀಷ್:ಈ ವಾರದ ಇಂಗ್ಲೀಷ್ ಕ್ಲಾಸ್ ವಿಡಿಯೋ ಇಲ್ಲಿದೆ
ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಜೀರೋ ಟು ಹೀರೋ ಇಂಗ್ಲೀಷ್ ಕ್ಲಾಸ್ ಶುರುವಾಗಿದೆ. ಇಂಗ್ಲೀಷ್ ತಜ್ಞರಾದ ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ. ಕೆಳಗಿನ ಲಿಂಕ್ ಒತ್ತಿ ಈ ವಾರದ ಇಂಗ್ಲೀಷ್ ಕ್ಲಾಸ್ ಗೆ ಎಂಟ್ರಿ ಆಗಿ https://youtu.be/nbFK22snwDk
ಉಡುಪಿ: ನಾಳೆ (ಜೂ.20) ಜಿಲ್ಲೆಯಲ್ಲಿ ಯಾವುದೇ ಕೋವಿಡ್ ಲಸಿಕಾ ಶಿಬಿರ ಇಲ್ಲ
ಉಡುಪಿ: ನಾಳೆ (ಜೂನ್ 20) ಜಿಲ್ಲೆಯಲ್ಲಿ ಯಾವುದೇ ಕೋವಿಡ್ 19 ಲಸಿಕಾ ಕಾರ್ಯಕ್ರಮ ಇರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಹಲ್ಲುಗಳ ಅಂದ-ಚೆಂದ ಹೆಚ್ಚಿಸೋದು ತುಂಬಾ ಸಿಂಪಲ್: ಈ ಟಿಪ್ಸ್ ಫಾಲೋ ಮಾಡಿ ಸಾಕು
ನಗು ನಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ನಗುವನ್ನು ಆಕರ್ಷಕವಾಗಿಸುವಲ್ಲಿ ನಮ್ಮ ಹಲ್ಲುಗಳು ಮುಖ್ಯ ಪಾತ್ರ ವಹಿಸುತ್ತದೆ. ಸುಂದರ ಬಿಳಿ ಹಲ್ಲುಗಳು ನಗುವಿನ ಜೊತೆ ಮುಖದ ಚೆಲುವನ್ನು ಕೂಡ ಹೆಚ್ಚಿಸುತ್ತದೆ. ಆದರೆ ಕೆಲವರ ಹಲ್ಲು ಹಳದಿ ಅಥವಾ ಡಲ್ ಆಗಿರುತ್ತದೆ. ಅದಕ್ಕಾಗಿ ಪದೇಪದೇ ಡೆಂಟಿಸ್ಟ್ ಬಳಿ ಓಡಲು ಸಾಧ್ಯವಿಲ್ಲ. ಸರಳ ವಿಧಾನದಿಂದ ಇದೆಲ್ಲವೂ ಸಾಧ್ಯ ಪ್ರತಿ ಎರಡು ತಿಂಗಳಿಗೊಂದು ಹೊಸ ಬ್ರಷ್ ಬಳಸಿ ಉತ್ತಮ ಫಲಿತಾಂಶಗಳನ್ನು ಪಡೆಯಲು ನಿಯಮಿತವಾಗಿ ನಿಮ್ಮ ಬ್ರಷ್ ಬದಲಾಯಿಸುವುದು ಬಹಳ ಮುಖ್ಯ . ಅವಧಿಯ […]
ಡಿಸೆಂಬರ್ ವರೆಗೆ ಜಿಪಂ, ತಾಪಂ ಚುನಾವಣೆ ನಡೆಸಲ್ಲ: ಈಶ್ವರಪ್ಪ
ದಾವಣಗೆರೆ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದ್ದರೂ ಮೂರನೇ ಅಲೆ ಅಪ್ಪಳಿಸುವ ಭೀತಿ ಇದೆ. ಹೀಗಾಗಿ ಡಿಸೆಂಬರ್ ವರೆಗೆ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ನಡೆಸುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಮವಾರ ಸಂಜೆ ರಾಜ್ಯ ಸಚಿವ ಸಂಪುಟದ ಸಭೆ ನಡೆಯಲಿದೆ. ಅಲ್ಲಿ ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.