ಸೆಲೂನ್, ಬ್ಯುಟಿಪಾರ್ಲರ್ ತೆರೆಯಲು ಅನುಮತಿ ನೀಡಿ: ಉಡುಪಿ ಜಿಲ್ಲಾ ಸವಿತಾ ಸಮಾಜದಿಂದ ಜಿಲ್ಲಾಧಿಕಾರಿಗೆ ಮನವಿ

ಉಡುಪಿ: ಲಾಕ್ ಡೌನ್ ನಿಂದ ಮುಚ್ಚಿರುವ ಸೆಲೂನ್ ಹಾಗೂ ಬ್ಯುಟಿಪಾರ್ಲರ್ ಗಳನ್ನು ತೆರೆಯಲು ಅನುಮತಿ ನೀಡುವಂತೆ ಕೋರಿ ಉಡುಪಿ ಜಿಲ್ಲಾ ಸವಿತಾ ಸಮಾಜ ಸಂಘದಿಂದ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಇಂದು ಮನವಿ ನೀಡಲಾಯಿತು. ನಿಯೋಗದಲ್ಲಿ ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ವಿಶ್ವನಾಥ್ ಭಂಡಾರಿ ನಿಂಜೂರು, ಪ್ರಧಾನ ಕಾರ್ಯದರ್ಶಿ ಸದಾಶಿವ ಬಂಗೇರ ಕುರ್ಕಾಲು, ಗೌರವ ಅಧ್ಯಕ್ಷ ಬನ್ನಂಜೆ ಗೋವಿಂದ ಭಂಡಾರಿ ಇದ್ದರು.

ಜೂನ್ 21ರಿಂದ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎಲ್ಲ ಸೇವೆಗಳು ಸಾರ್ವಜನಿಕರಿಗೆ ಮುಕ್ತ

ಮಣಿಪಾಲ: ಸೋಮವಾರದಿಂದ (ಜೂನ್ 21) ಜಾರಿಗೆ ಬರುವಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಯ ಎಲ್ಲ ಹೊರರೋಗಿ ವಿಭಾಗಗಳು, ಒಳರೋಗಿ ಸೇವೆಗಳು, ನಾನ್ – ಓಪಿಡಿ ವಿಶೇಷ ಸೇವೆಗಳು ಮತ್ತು ಆರೋಗ್ಯ ತಪಾಸಣೆ ಪ್ಯಾಕೇಜ್ ಸೇರಿದಂತೆ ಎಲ್ಲಾ ವಿಭಾಗಗಳು ಸಾರ್ವಜನಿಕರಿಗೆ ಸೇವೆಗೆ ಮುಕ್ತವಾಗಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ತಿಳಿಸಿದ್ದಾರೆ. ಹೊರರೋಗಿ ವಿಭಾಗ ಸೇವೆಗಳು ಇಡೀ ದಿನ ಅಂದರೆ ಬೆಳಿಗ್ಗೆ 8ರಿಂದ ಸಂಜೆ 5ರ ವರೆಗೆ ಲಭ್ಯವಾಗಲಿದೆ. ಹಾಗೆ, ಎಲ್ಲ ರೀತಿಯ ಶಸ್ತ್ರಚಿಕಿತ್ಸಾ ಸೌಲಭ್ಯ ಕೂಡ […]

ಉಡುಪಿ: ನಿಟ್ಟೂರು ನಿವಾಸಿ ನಾಪತ್ತೆ

ಉಡುಪಿ: ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ನಿವಾಸಿ ವಾದಿರಾಜ ಗಾಣಿಗ (39) ಜೂನ್ 13ರಿಂದ ನಾಪತ್ತೆಯಾಗಿದ್ದು, ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಾದಿರಾಜ ಗಾಣಿಗ ತನ್ನ ಹೆಂಡತಿ-ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದವರು. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಊರಿಗೆ ಬಂದಿದ್ದರು.‌ ಜೂನ್ 9 ರಂದು ತನ್ನ ಅಕ್ಕನ ಮನೆಯಾದ ಕುಂದಾಪುರದ ಬಸ್ರೂರು ಮೂರುಕೈಗೆ ಹೋಗಿದ್ದರು. ಜೂನ್ 13ರಂದು ಸರಕು ಸಾಗಾಟದ ಲಾರಿಯಲ್ಲಿ ಉಡುಪಿಗೆ ಬಂದು ಇಂದ್ರಾಳಿ ರೈಲ್ವೆ ನಿಲ್ದಾಣ ರಸ್ತೆಯ ಬಳಿ ಇಳಿದುಕೊಂಡಿದ್ದರು. ಆದರೆ […]

ಲಾಕ್ ಡೌನ್ ನಿಯಮಾವಳಿ ಸಡಿಲಿಕೆ ಬಗ್ಗೆ ನಾಳೆ ತೀರ್ಮಾನ; ಸಿಎಂ ಯಡಿಯೂರಪ್ಪ

ಬೆಂಗಳೂರು: ಜೂನ್‌ 21ರ ಬಳಿಕ ಕೋವಿಡ್‌ ಲಾಕ್‌ಡೌನ್‌ ನಿಯಮಾವಳಿಗಳಲ್ಲಿ ಸಡಿಲಿಕೆ ಮಾಡಬೇಕೆ ಎಂಬ ಬಗ್ಗೆ ಶನಿವಾರ ತೀರ್ಮಾನ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತಿಳಿಸಿದರು. ರಾಜ್ಯದಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿ. ಇನ್ನೊಂದು ಕಡೆ ಕೋವಿಡ್ 3ನೇ ಅಲೆ ಅಪ್ಪಳಿಸುವ ಭೀತಿಯೂ ಇದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದರು. 20 ಜಿಲ್ಲೆಗಳಲ್ಲಿ ಜೂ.14 ರಿಂದ ಭಾಗಶಃ ಲಾಕ್‌ಡೌನ್‌ ತೆರವು ಮಾಡಲಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಮುಂದುವರಿದಿತ್ತು.

ಜಿಟಿ ಜಿಟಿ ಮಳೆಗೆ ಈ ಆರೋಗ್ಯಕರ ಸೂಪ್ ಜೊತೆಗಿದ್ರೆ ಆಹಾ ಏನ್ ಮಜಾ ಅಂತೀರಿ!

  ಮಳೆಗಾಲ ಶುರುವಾಯ್ತು ಅಂದ್ರೆ ಏನಾದರೂ ಬಿಸಿ-ಬಿಸಿ ಮಾಡಿ ತಿನ್ನಬೇಕು ಅಥವಾ ಕುಡಿಯಬೇಕು ಎಂಬ ಬಯಕೆಯಾಗುವುದು ಸಹಜ. ಜೋರಾಗಿ ಮಳೆ ಸುರಿಯುವ ಸಮಯದಲ್ಲಿ ಬಿಸಿ-ಬಿಸಿ ಸೂಪ್ ಮಾಡಿ ಕುಡಿಯುವುದರಲ್ಲಿರುವ ಮಜಾ ಬೇರ್ಯಾವುದರಲ್ಲೂ ಇಲ್ಲ. ಇದರಿಂದ ನಾಲಿಗೆಗೆ ರುಚಿಯೂ ಹೆಚ್ಚುತ್ತದೆ, ಮೈಯ ಚಳಿಯೂ ಬಿಡುತ್ತದೆ. ಆಲಸ್ಯದಿಂದ ಕೂಡಿರುವ ದೇಹಕ್ಕೆ ಉಲ್ಲಾಸ ನೀಡುತ್ತದೆ. ಮಳೆಗಾಲದಲ್ಲಿ ಬಿಸಿ-ಬಿಸಿಯಾದ ಸೂಪ್ ಕುಡಿಯುವುದರಿಂದ ಆರೋಗ್ಯಕ್ಕೂ ಒಳ್ಳೆಯದು. ಸೂಪ್ ನ ಸೇವನೆಯಿಂದ ಜೀರ್ಣಶಕ್ತಿ ವೃದ್ಧಿಯಾಗುತ್ತದೆ  ಎನ್ನುತ್ತಾರೆ  ಸಿಂಥಿಯಾ ಮೆಲ್ವಿನ್.  ಅವರ  ಈ ವಾರದ  “ನಮ್ಮ ಆರೋಗ್ಯ […]