ಉದ್ಯಾವರ: ಮಹಿಳೆ ನೇಣುಬಿಗಿದುಕೊಂಡು ಆತ್ಮಹತ್ಯೆ

ಉದ್ಯಾವರ: ಇಲ್ಲಿನ ಪಿತ್ರೋಡಿ ನಿವಾಸಿ ಸುಕನ್ಯ(52) ಎಂಬವರು ಗುರುವಾರ ಮಧ್ಯಾಹ್ನ ಮನೆಯ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಉದ್ಯಾವರ ಗ್ರಾಪಂ ಬಿಜೆಪಿ ಬೆಂಬಲಿತ ಸದಸ್ಯ ಹಾಗೂ ಉದ್ಯಾವರ ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಸಹಿತ ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಅಸಹಾಯಕ ವೃದ್ದೆ ಹೊಸಬೆಳಕು ಆಶ್ರಮಕ್ಕೆ ದಾಖಲು

ಉಡುಪಿ : ನಿಟ್ಟೂರು ಸಖಿ ಒನ್ ಸ್ಟಾಪ್ ಸೆಂಟರ್‍ನಲ್ಲಿಆಶ್ರಯ ಪಡೆದಿದ್ದ ಅಸಹಾಯಕ ವೃದ್ಧೆ ಸಂಕಿ (65) ಇವರನ್ನು ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಮೂಲಕ ಮಣಿಪಾಲದ ಹೊಸಬೆಳಕು ಆಶ್ರಮಕ್ಕೆ ದಾಖಲಿಸಲಾಗಿದೆ. ಇವರು ಮೂಲತಃ ಪಡುಬಿದ್ರೆಯವರಾಗಿದ್ದು, ಪತಿ, ಮಕ್ಕಳು, ಆಶ್ರಯವಿಲ್ಲದೆ ಬೀದಿಯಲ್ಲಿಅಸಹಾಯಕ ಪರಿಸ್ಥಿತಿಯಲ್ಲಿದ್ದರು.ಇವರನ್ನು ವಿಶು ಶೆಟ್ಟಿ ಎಂಬವರು ಸಖಿ ಒನ್ ಸ್ಟಾಪ್ ಸೆಂಟರ್‍ಗೆ ತಾತ್ಕಾಲಿಕವಾಗಿ ದಾಖಲಿಸಿದ್ದರು.ಇದೀಗ ವೃದ್ಧೆಗೆ ಆಶ್ರಯದ ಅವಶ್ಯಕತೆ ಇದ್ದಿದ್ದರಿಂದ ಹಿರಿಯ ನಾಗರಿಕ ಸಹಾಯವಾಣಿ ಕೇಂದ್ರದ ಸಿಬ್ಬಂದಿ ಗಣೇಶ್‍ರವರು ವೃದ್ಧೆಯನ್ನು ಮಣಿಪಾಲದ ಸರಳಬೆಟ್ಟಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ.

ಮೀನುಗಾರರಿಗೆ ಕೋವಿಡ್-2ನೇ ಅಲೆಯ ಪರಿಹಾರ ಪ್ಯಾಕೇಜ್

ಉಡುಪಿ : ರಾಜ್ಯದಲ್ಲಿ ಕೋವಿಡ್ 2ನೇ ಅಲೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಈಗಾಗಲೇ ಲಾಕ್‍ಡೌನ್‍ ಜಾರಿಯಲ್ಲಿದ್ದು. ಇದರಿಂದ ಬಾಧಿತವಾದ ಸಮಾಜದ ವಿವಿಧ ವರ್ಗಗಳಿಗೆ ಪರಿಹಾರದ ಪ್ಯಾಕೇಜ್‍ನ್ನು ಸರ್ಕಾರವು ಘೋಷಣೆ ಮಾಡಿದೆ. ಪ್ರಸ್ತುತ ಸಾಲಿನಲ್ಲಿ ಭಾರತ ಸರ್ಕಾರದ ಉಳಿತಾಯ ಮತ್ತು ಪರಿಹಾರಯೋಜನೆಯಡಿ ನೋಂದಾಯಿಸಿಕೊಂಡ ಮೀನುಗಾರರಿಗೆ ತಲಾ ರೂ.3000ಗಳ ಪರಿಹಾರವನ್ನು ಕೋವಿಡ್‍ ಎರಡನೇ ಪ್ಯಾಕೇಜ್ ನಿಧಿಯಡಿಯಲ್ಲಿ ಸರ್ಕಾರದ ಮಾರ್ಗಸೂಚಿ ಮೇರೆಗೆ ಘೋಷಿಸಲಾಗಿದೆ. ಈ ಯೋಜನೆಯ ಸದರಿ ಪರಿಹಾರವನ್ನು ಡಿ.ಬಿ.ಟಿ (ಡೈರೆಕ್ಟ್ ಬೆನಿಫಿಶರಿಟ್ರಾನ್‍ಸ್ಫರ್ ಪೋರ್ಟ್‍ಲ್) ಮುಖಾಂತರ ಅರ್ಹ ಫಲಾನುಭವಿಗಳಿಗೆ ಪಾವತಿಸಬೇಕಾಗಿರುವುದರಿಂದ ಎಲ್ಲಾ […]

ಬೆಳ್ತಂಗಡಿ: ಶ್ರೀಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ ಬುಲ್ ಬುಲ್ ವಿದ್ಯಾರ್ಥಿಗಳಿಗೆ ರಾಜ್ಯ ಪುರಸ್ಕಾರ

ಬೆಳ್ತಂಗಡಿ: ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಬೆಂಗಳೂರು ರಾಜ್ಯ ಸಂಸ್ಥೆ ಆಯೋಜಿಸಿದ ಹೀರೆಕ್ ಗರಿ ರಾಜ್ಯ ಪುರಸ್ಕಾರ ಪರೀಕ್ಷೆ ಬರೆದು ಉತ್ತೀರ್ಣರಾದ ಬೆಳ್ತಂಗಡಿ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯ 11 ಬುಲ್ ಬುಲ್ ವಿದ್ಯಾರ್ಥಿಗಳು ರಾಜ್ಯ ಪುರಸ್ಕಾರವನ್ನು ಪಡೆದಿದ್ದಾರೆ. ಇವರಿಗೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ, ಧರ್ಮಸ್ಥಳ ಆಂಗ್ಲಮಾಧ್ಯಮ ಶಾಲೆಯ ಕ್ಯಾಪ್ಟನ್ ಪ್ರಮೀಳಾ ಅವರು ತರಬೇತಿಯನ್ನು ನೀಡಿರುತ್ತಾರೆ. ಮುಖ್ಯ ಶಿಕ್ಷಕಿ ಹೇಮಲತಾ ಎಂ.ಆರ್. ಸಹಕಾರ ನೀಡಿರುತ್ತಾರೆ.

ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೀರಮ್ ಬಳಕೆಯಾಗಿಲ್ಲ: ಭಾರತ್ ಬಯೋಟೆಕ್ ಸ್ಪಷ್ಟನೆ

ನವದೆಹಲಿ: ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಅಂಗಾಂಗಳಿಂದ ಬೇರ್ಪಡಿಸಿದ ದ್ರವ (ಸೀರಮ್) ಬಳಸಲಾಗಿತ್ತೇ.?, ಇಲ್ಲವೇ? ಎಂಬ ವದಂತಿಗೆ ಕೇಂದ್ರ ಆರೋಗ್ಯ ಇಲಾಖೆ ತೆರೆಎಳೆದಿದೆ. ಕೊವ್ಯಾಕ್ಸಿನ್ ಲಸಿಕೆಯಲ್ಲಿ ನವಜಾತ ಕರುವಿನ ದ್ರವ (ಸೀರಮ್) ಬಳಕೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭಾರತ್ ಬಯೋಟೆಕ್ ಸ್ಪಷ್ಟನೆ ನೀಡಿದೆ. ಕೊವ್ಯಾಕ್ಸಿನ್ ಲಸಿಕೆಯನ್ನು ರೂಪಿಸುವಾಗ ನಡೆದ ಪ್ರಯೋಗಗಳಲ್ಲಿ, ಸಿದ್ಧತೆಯ ಹಂತದಲ್ಲಿ ಮಾತ್ರ ಕರುಗಳ ಸೀರಮ್‌ ಬಳಕೆಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ಹೊರಬಂದಿರುವ ಕೊವ್ಯಾಕ್ಸಿನ್ ಲಸಿಕೆಗಳಲ್ಲಿ ಕರುವಿನ ರಕ್ತದ ಕಣಗಳು […]