ಲಾಕ್ ಡೌನ್ ಸಡಿಲಿಕೆಯಲ್ಲಿ ತಾರತಮ್ಯ ಬೇಡ, ಎಲ್ಲಾ ವ್ಯವಹಾರಕ್ಕೂಅವಕಾಶ ಕಲ್ಪಿಸಿ: ಕ್ಸೇವಿಯರ್ ಡಿಮೆಲ್ಲೋ
ಕಾರ್ಕಳ: ಈಗಾಗಲೇ ಉಡುಪಿ ಜಿಲ್ಲೆಯಾದ್ಯಂತ ಎರಡನೇ ಹಂತದ ಲಾಕ್ ಡೌನ್ ನಲ್ಲಿ ಕೊಂಚ ಮಟ್ಟದಲ್ಲಿ ಸಡಿಲಿಕೆ ಮಾಡಲಾಗಿದ್ದು ಈ ವೇಳೆ ಕೆಲವು ಕ್ಷೇತ್ರಗಳ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಇನ್ನು ಕೆಲವರಿಗೆ ವ್ಯಾಪಾರಕ್ಕೆ ಅವಕಾಶ ಮಾಡದೇ ಇರುವುದು ಕಂಡಾಗ ಜಿಲ್ಲಾಡಳಿತ ಮಲತಾಯಿ ಧೋರಣೆ ಅನುಸರಿಸುತ್ತಿದೆಯೋ ಎಂಬ ಅನುಮಾನ ಕಾಡತೊಡಗಿದೆ. ಎಲ್ಲಾ ವ್ಯವಹಾರಗಳೂ ಅಗತ್ಯವೇ ಎಂದು ಪರಿಗಣಿಸಬೇಕು ಎಂದು ತಾ.ಪಂ ಸದಸ್ಯ, ಮಾಜಿ ಗ್ರಾ.ಪಂ. ಅಧ್ಯಕ್ಷರಾದ ಕ್ಸೇವಿಯರ್ ಡಿಮೆಲ್ಲೋ ಮನವಿ ಮಾಡಿದ್ದಾರೆ. ಕೃಷಿ ಕಾರ್ಮಿಕರು ಕೃಷಿ ಉತ್ಪನ್ನಗಳನ್ನು ಸಾಗಿಸುವ ಸಂದರ್ಭದಲ್ಲಿಯೂ […]