ಉಡುಪಿ: ಅನ್ ಲಾಕ್ ಮಾರ್ಗಸೂಚಿಯ ಉಲ್ಲಂಘನೆ ಆಗದಂತೆ ಕ್ರಮಕೈಗೊಳ್ಳಿ; ಡಿಸಿ ಜಿ. ಜಗದೀಶ್ ಸೂಚನೆ
ಉಡುಪಿ: ಜಿಲ್ಲೆಯಲ್ಲಿ ಜೂನ್ 14ರಿಂದ ಆರಂಭವಾಗುವ ಅನ್ ಲಾಕ್ ಅವಧಿಯಲ್ಲಿ ಸರ್ಕಾರದ ಮಾರ್ಗಸೂಚಿಯಲ್ಲಿ ತಿಳಿಸಿರುವ ಚಟುವಟಿಕೆಗಳು ಮಾತ್ರ ನಡೆಯಲು ಅನುಮತಿ ನೀಡಿ, ಮಾರ್ಗಸೂಚಿಗಳ ಉಲ್ಲಂಘನೆ ಆಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ತಹಸಿಲ್ದಾರ್ ಗಳು ಮತ್ತು ನಗರ ಸ್ಥಳೀಯ ಸಂಸ್ಥೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ. ಜಗದೀಶ್ ಸೂಚನೆ ನೀಡಿದರು. ಅವರು ಇಂದು ವಿಡಿಯೋ ಸಂವಾದದ ಮೂಲಕ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕೋವಿಡ್ ನಿರ್ಬಂಧಗಳನ್ನು, ಎಲ್ಲಾ ಅಧಿಕಾರಿಗಳು ಮತ್ತು ಪಂಚಾಯತ್ ಗಳ ಸಹಕಾರದಿಂದ ಯಶಸ್ವಿಯಾಗಿ […]
ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಸಬ್ಸಿಡಿ ಹೆಚ್ಚಳ
ನವದೆಹಲಿ: ವಿದ್ಯುತ್ ಚಾಲಿತ ವಾಹನಗಳ ತಯಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ 2ನೇ ಹಂತದ ಯೋಜನೆಯಲ್ಲಿ (ಫೇಮ್–2) ದ್ಚಿಚಕ್ರ ವಾಹನಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಶೇಕಡ 50ರಷ್ಟು ಹೆಚ್ಚಿಸಿದೆ. ಕೇಂದ್ರದ ನಿರ್ಧಾರದಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನಗಳ ಬೆಲೆಯು ಪೆಟ್ರೋಲ್ ಎಂಜಿನ್ ವಾಹನಗಳ ಆಸುಪಾಸಿಗೆ ಇಳಿಕೆ ಆಗಲಿದೆ’ ಎಂದು ವಿದ್ಯುತ್ ಚಾಲಿತ ವಾಹನಗಳ ತಯಾರಕರ ಸಂಘದ (ಎಸ್ಎಂಇವಿ) ಪ್ರಧಾನ ನಿರ್ದೇಶಕ ಸೋಹಿಂದರ್ ಗಿಲ್ ಅಭಿಪ್ರಾಯಪಟ್ಟಿದ್ದಾರೆ. ನಗರ ಪ್ರದೇಶದಲ್ಲಿ ಬಳಸುವ ವಿದ್ಯುತ್ ಚಾಲಿತ ಸ್ಕೂಟರ್ ಬೆಲೆಯು ₹ 60 […]
ಕೆದೂರು: ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘದಿಂದ ದಿನಸಿ ಕಿಟ್ ವಿತರಣೆ
ಕುಂದಾಪುರ: ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ ಕುಂದಾಪುರ ವಲಯ ಹಾಗೂ ಕರ್ನಾಟಕ ಭೋವಿ ವಡ್ಡರ ಕ್ಷೇಮಾಭಿವೃದ್ಧಿ ಸಂಘ ಕೆದೂರು ಇವರ ವತಿಯಿಂದ ಕುಂದಾಪುರ ತಾಲೂಕಿನ ಕೆದೂರು, ಬೇಳೂರು, ಹೆಸ್ಕುತ್ತೂರು ಮತ್ತು ದೊಡ್ಡನರೆಕಲ್ಲು ಗ್ರಾಮದ ಕೊರೊನಾ ಸೋಂಕಿನಿಂದ ಸೀಲ್ ಡೌನ್ ಆದ ಮತ್ತು ಅಶಕ್ತ ಬಡ ಕುಟುಂಬಗಳಿಗೆ ಉಚಿತ ದಿನಸಿ ಆಹಾರ ಸಾಮಗ್ರಿಗಳನ್ನು ವಿತರಣೆ ಮಾಡಲಾಯಿತು. ಕುಂದಾಪುರ ತಾಲೂಕು ವಡ್ಡರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಗದೀಶ್ ಕೆದೂರು ಮತ್ತು ಅರುಣಕುಮಾರ್ ಕಾಳಾವರ ಇವರ ಸಹಕಾರದೊಂದಿಗೆ 21 ಕುಟುಂಬಗಳಿಗೆ […]
ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದಿಂದ “ಶ್ರೀಕೃಷ್ಣ ಮುಖ್ಯಪ್ರಾಣ ಪ್ರಾಣರಕ್ಷಾ” ಆ್ಯಂಬುಲೆನ್ಸ್ ಹಸ್ತಾಂತರ
ಉಡುಪಿ: ಉಡುಪಿ ಶ್ರೀಕೃಷ್ಣಮಠ ಪರ್ಯಾಯ ಅದಮಾರು ಮಠದ ವತಿಯಿಂದ ಕೋವಿಡ್ 19 ನಿರ್ವಹಿಸಲು ಜಿಲ್ಲಾಡಳಿತಕ್ಕೆ ನೆರವಾಗಲು ₹20 ವೆಚ್ಚದ “ಶ್ರೀಕೃಷ್ಣ ಮುಖ್ಯಪ್ರಾಣ ಪ್ರಾಣರಕ್ಷಾ” ಆ್ಯಂಬುಲೆನ್ಸ್ ವಾಹನವನ್ನು ಪರ್ಯಾಯ ಅದಮಾರು ಮಠಾಧೀಶರಾದ ಈಶಪ್ರಿಯತೀರ್ಥ ಸ್ವಾಮೀಜಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರಿಗೆ ಹಸ್ತಾಂತರಿಸಿದರು. ಪಲಿಮಾರು ಮಠಾಧೀಶರಾದ ವಿದ್ಯಾಧೀಶತೀರ್ಥ ಶ್ರೀಪಾದರು, ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಶ್ರೀಪಾದರಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಶಿರೂರು ಮಠಾಧೀಶರಾದ ಶ್ರೀವೇದವರ್ಧನತೀರ್ಥ ಶ್ರೀಪಾದರು, ಉಡುಪಿ […]
ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಕಂಪ್ಯೂಟರ್ ಕೊಡುಗೆ
ಉಡುಪಿ ಜೂ11: ಉಡುಪಿ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಗೆ ಕೋವಿಡ್ 19 ನಿರ್ವಹಣೆಗೆ ಅವಶ್ಯವಿರುವ ಕಂಪ್ಯೂಟರ್ ನ್ನು, ಶಾಸಕ ರಘುಪತಿ ಭಟ್ ಅವರ ಶಿಫಾರಸ್ಸಿನಂತೆ , ಮುದ್ರಾಡಿ ರಾಘವೇಂದ್ರ ಕಲ್ಕೂರ, ಕರ್ನಾಟಕ ಬ್ಯಾಂಕ್ ನ ನಿವೃತ್ತ ಸಿಬ್ಬಂದಿ ಇವರು ಕೊಡುಗೆಯಾಗಿ ನೀಡಿರುತ್ತಾರೆ ಎಂದು ಉಡುಪಿ ತಾಲೂಕು ಆರೋಗ್ಯಾಧಿಕಾರಿ ವಾಸುದೇವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.