ಇನ್ನು ನೀವು ಇಂಗ್ಲೀಷ್ ಕಷ್ಟ ಅನ್ನೋ ಹಾಗೇ ಇಲ್ಲ: ಇಲ್ಲಿದೆ ಸಿಂಪಲ್ಲಾಗ್ ಒಂದ್ ಇಂಗ್ಲೀಷ್ ಕ್ಲಾಸ್

ನಿಮಗೆ ಬೇಗ ಬೇಗ ಇಂಗ್ಲೀಷ್ ಕಲಿಬೇಕು, ಇಂಗ್ಲೀಷ್ ನಲ್ಲಿ ಪಟ ಪಟ ಅಂತ ಮಾತಾಡ್ಬೇಕು ಅಂತ ಆಸೆ ಇರಬಹುದು. ಅದಕ್ಕಾಗಿ ನೀವು ದುಬಾರಿ ಇಂಗ್ಲೀಷ್ ಸ್ಪೀಂಕಿಂಗ್ ಕ್ಲಾಸ್ ಮೊರೆಹೋಗಬೇಕಾಗಿಲ್ಲ. ಉಡುಪಿXPRESS.COM  ಮಾಧ್ಯಮ ಸಹಯೋಗದಲ್ಲಿ ಜೀರೋ ಟು ಜೀರೋ ಇಂಗ್ಲೀಷ್ ಕ್ಲಾಸ್ ಶುರುವಾಗಿದೆ. ಇಂಗ್ಲೀಷ್ ತಜ್ಞರಾದ ಕಾರ್ಕಳದ ಉಪನ್ಯಾಸಕ ಮಹೇಶ್ ಶೆಣೈ ಅವರು ಸುಲಭವಾಗಿ ನಿಮಗೆ ಕನ್ನಡದಲ್ಲೇ ಇಂಗ್ಲೀಷ್ ಪಾಠ ಮಾಡ್ತಾರೆ. ಪ್ರತೀ ಶನಿವಾರ ಸಂಜೆ 4.30 ಕ್ಕೆ ಇವರ ಯು-ಟ್ಯೂಬ್ ಕ್ಲಾಸ್ ಗೆ ನೀವು ಹಾಜರಾಗಬಹುದು. ಕೆಳಗಿನ […]

ಉಡುಪಿ: ಸೀಲ್ ಡೌನ್ ಮಾಡಿರುವ ಗ್ರಾಪಂಗಳಲ್ಲಿ ಜೂನ್ 7ರಂದು ಅಗತ್ಯ ವಸ್ತು‌ ಖರೀದಿಗೆ ಅವಕಾಶ

ಉಡುಪಿ: 50ಕ್ಕಿಂತ ಹೆಚ್ಚು ಕೋವಿಡ್ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಜೂನ್ 2ರಿಂದ ಕಂಪ್ಲೀಟ್ ಲಾಕ್ ಡೌನ್ ಘೋಷಿಸಿರುವ ಜಿಲ್ಲೆಯ 35 ಗ್ರಾಮ ಪಂಚಾಯತ್ ಗಳಲ್ಲಿ ಸೋಮವಾರ (ಜೂನ್ 7) ಒಂದು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಕುಂದಾಪುರದಲ್ಲಿ ಹೇಳಿಕೆ ನೀಡಿದ್ದಾರೆ. ಜೂನ್ 2ರಿಂದ ಐದು ದಿನಗಳ‌ ಕಾಲ ಕಂಪ್ಲೀಟ್ ಲಾಕ್ ಡೌನ್ ಘೋಷಿಸಿರುವ ಗ್ರಾಪಂಗಳಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗಿವೆ. ಜಿಲ್ಲಾಡಳಿತದ ಸೀಲ್ ಡೌನ್ ಪ್ರಕ್ರಿಯೆ ಪರಿಣಾಮಕಾರಿಯಾಗಿದೆ. ಜನರು ಕೂಡ […]

ಜಿಲ್ಲಾ ಗೃಹರಕ್ಷಕ ದಳ ಕಚೇರಿಗೆ ಪ್ರವಾಹ ರಕ್ಷಣಾ ಸಾಮಗ್ರಿಗಳ ವಿತರಣೆ

ಉಡುಪಿ ಜೂ4:  ಬೆಂಗಳೂರಿನ ಡಿಜಿಪಿ ಕಚೇರಿಯಿಂದ ಉಡುಪಿ ಜಿಲ್ಲಾ ಗೃಹರಕ್ಷಕ ಕಚೇರಿಗೆ 2 ಇನ್ ಫ್ಲೆಟೇಬಲ್ ಬೋಟ್, 1 ಒಬಿಎಂ ನೀಡಲಾಗಿದ್ದು, ಇದರೊಂದಿಗೆ  ಉಡುಪಿ ಜಿಲ್ಲಾಡಳಿತ ನೀಡಿರುವ ರೈನ್ ಕೋಟ್, ಲೈಫ್ ಜಾಕೆಟ್, ಟ್ಯೂಬ್, ಗಮ್ ಬೂಟ್ ಮತ್ತು ಹಗ್ಗಗಳನ್ನು, ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು,  ಪ್ರವಾಹ ಪೀಡಿತ ಸ್ಥಳಗಳಾದ ಪಡುಬಿದ್ರಿ ಮತ್ತು ಬ್ರಹ್ಮಾವರಕ್ಕೆ ಪಡುಬಿದ್ರಿ ಘಟಕಾಧಿಕಾರಿ ನವೀನ್ ಕುಮಾರ್, ಬ್ರಹ್ಮಾವರ ಘಟಕದ ಘಟಕಾಧಿಕಾರಿ ಸ್ಟೀವನ್ಪ್ರಕಾಶ್ ಅವರಿಗೆ ಗೃಹರಕ್ಷಕದಳದ ಜಿಲ್ಲಾ ಕಚೇರಿಯಲ್ಲಿ ಇಂದು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಪಡುಬಿದ್ರೆಮತ್ತು  ಬ್ರಹ್ಮಾವರ […]

ಉಡುಪಿ: ಕಟ್ಟಡದಿಂದ ಜಿಗಿದು ಕೊರೊನಾ ಸೋಂಕಿತ ಮಹಿಳೆ ಆತ್ಮಹತ್ಯೆ

ಉಡುಪಿ: ಪತಿ ಕೋವಿಡ್ ಸೋಂಕಿನಿಂದಾಗಿ ಗಂಭೀರ ಸ್ಥಿತಿಯಲ್ಲಿರುವ ವಿಷಯ ತಿಳಿದು ಮನನೊಂದ ಕೊರೊನಾ ಸೋಂಕಿತ ಪತ್ನಿ ವಸತಿ ಸಮುಚ್ಚಯವೊಂದರ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಉಡುಪಿ ನಗರದಲ್ಲಿ ಸಂಭವಿಸಿದೆ. ಮೃತರನ್ನು ಉಡುಪಿ ಜೋಡುಕಟ್ಟೆಯ ಜನಾರ್ಧನ್ ಟವರ್‌ನ ನಿವಾಸಿ ಗಂಗಮ್ಮ (70) ಎಂದು ಗುರುತಿಸಲಾಗಿದೆ. ಇವರ ಪತಿ ಕೊರೊನಾ ಸೋಂಕಿಗೆ ತುತ್ತಾಗಿ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇದೇ ಕಾರಣದಿಂದ ಮನನೊಂದು ಗಂಗಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಇವರು […]

ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ವಿವಿಧ ಸಹಾಯಧನ ಜುಲೈ 15 ರ ವರೆಗೆ ವಿಸ್ತರಣೆ

ಉಡುಪಿ ಜೂನ್ 4:  ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ  ಮಂಡಳಿ ವತಿಯಿಂದ ನೀಡಲಾಗುವ ವಿವಿಧ ಸಹಾಯಧನ/ಪ್ರೋತ್ಸಾಹಧನ  ಪಡೆಯಲು ನಿಗದಿಗೊಳಿಸಿದ್ದ ಕೊನೆಯ ದಿನಾಂಕವನ್ನು ಜುಲೈ 15 ರ ವರೆಗೆ ವಿಸ್ತರಿಸಲಾಗಿದ್ದು, ಕಾರ್ಮಿಕರು ಇದರ ಪ್ರಯೋಜನ ಪಡೆಯುವಂತೆ ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ತಿಳಿಸಿದ್ದಾರೆ.