ಮಂಗಳೂರು:ಕೆನರಾ ಬ್ಯಾಂಕ್ ಸಿಬ್ಬಂದಿಗಳಿಗೆ ಲಸಿಕೆ ಅಭಿಯಾನಕ್ಕೆ ಚಾಲನೆ
ಮಂಗಳೂರು: ಜಿಲ್ಲಾಡಳಿತವು ಕೆನರಾ ಬ್ಯಾಂಕ್‌ನ ಮಂಗಳೂರು ವಲಯ ಕಚೇರಿಯಲ್ಲಿ ಆಯೋಜಿಸಿದ್ದ ಬ್ಯಾಂಕರ‍್ಸ್‌ಗಳಿಗೆ ಲಸಿಕೆ ಅಭಿಯಾನಕ್ಕೆ ಬುಧವಾರ ಶಾಸಕ ವೇದವ್ಯಾಸ ಕಾಮತ್ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮಾತನಾಡಿ ಕೋವಿಡ್ ತೀವ್ರ ಸಂದರ್ಭದಲ್ಲೂ ಗ್ರಾಹಕರಿಗೆ ಯಾವುದೇ ತೊಂದರೆಯಾಗದಂತೆ ಬ್ಯಾಂಕರ‍್ಸ್ ನವರು ಸೇವೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಆಧ್ಯತಾ ನೆಲೆಯಲ್ಲಿ ಲಸಿಕೆ ನೀಡಲು ಯೋಜನೆ ಹಾಕಿಕೊಂಡಿದೆ. ಬ್ಯಾಂಕ್ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಇರುವುದರಿಂದ ಹೆಚ್ಚು ಸುರಕ್ಷಿತಾ ಕ್ರಮ ಕೈಗೊಳ್ಳಬೇಕು. ಹೆಚ್ಚು ಜಾಗೃತರಾಗಬೇಕು ಎಂದರು. ಬ್ಯಾಂಕ್‌ನ ಮಹಾಪ್ರಬಂಧಕ […]
ಮ್ಯಾಗಿ ಪ್ರಿಯರೇ ಎಚ್ಚರ:ಮ್ಯಾಗಿಯಲ್ಲಿ ಸುರಕ್ಷಿತ ಅಂಶಗಳಿಲ್ಲ ಎಂದು ಕಂಪೆನಿಯೇ ಹೇಳಿತು!
ನವದೆಹಲಿ:ನೀವು ಮ್ಯಾಗಿ ಪ್ರಿಯರಾಗಿರಬಹುದು. ಆಗಾಗ ಮ್ಯಾಗಿ ಮಾಡಿ ಅದರ ರುಚಿಗೆ ಮಾರುಹೋಗಿರಬಹುದು.ಇಲ್ಲಿ ಕೇಳಿ ಮ್ಯಾಗಿಯಲ್ಲಿ ಆರೋಗ್ಯಕರ ಅಂಶಗಳಿಲ್ಲ ಎನ್ನುವುದನ್ನು ಇದೀಗ ನೆಸ್ಲೆ ಕಂಪೆನಿಯೇ ಒಪ್ಪಿಕೊಂಡು ಸುದ್ದಿಯಲ್ಲಿದೆ. ಹೌದು ಮ್ಯಾಗಿಯಲ್ಲಿ ಬಳಸಿರುವ ಶೇ.60ರಷ್ಟು ವಸ್ತುಗಳು ಸುರಕ್ಷಿತವಲ್ಲ, ಆರೋಗ್ಯಕರವಲ್ಲ ಎಂದು ಒಪ್ಪಿಕೊಂಡಿದೆ. ನೆಸ್ಲೆ ಕಂಪನಿ ಮ್ಯಾಗಿ ಮಾತ್ರವಲ್ಲದೆ ಕಿಟ್ಕ್ಯಾಟ್ ಚಾಕ್ಲೇಟ್, ನೆಸ್ಕೆಫೆ ಕಾಫಿಪುಡಿ ಕೂಡ ಸೇಫ್ ಅಲ್ಲ ಎಂದು ಒಪ್ಪಿಕೊಂಡಿದೆ. ಆರೋಗ್ಯ ಸುರಕ್ಷಿತ ಮಟ್ಟವನ್ನು ನಮ್ಮ ಉತ್ಪನ್ನಗಳು ತಲುಪುತ್ತಿಲ್ಲ ಆರೋಗ್ಯ ಇಲಾಖೆಯ ನಿಯಮದಡಿಯಲ್ಲಿ ನಮ್ಮ ಶೇ.70ರಷ್ಟು ಉತ್ಪನ್ನಗಳು ಸೇಫ್ ಅಲ್ಲ […]
ಉಡುಪಿ ಡಿಸಿಗೆ ನಕಲಿ ಫೇಸ್ ಬುಕ್ ಖಾತೆಯ ಹಾವಳಿ: ದೂರು ದಾಖಲು
ಉಡುಪಿ: ಜಿಲ್ಲಾಧಿಕಾರಿ ಜಿ. ಜಗದೀಶ ಅವರಿಗೆ ಮತ್ತೆ ನಕಲಿ ಫೇಸ್ ಬುಕ್ ಖಾತೆಯ ಹಾವಳಿ ಶುರುವಾಗಿದೆ. ಯಾರೋ ಕಿಡಿಗೇಡಿಗಳು ಮತ್ತೆ ಅವರ ಹೆಸರಿನಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದಿದ್ದಾರೆ. ಈ ಬಗ್ಗೆ ಉಡುಪಿ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮೇ 31ರಂದು ಕಿಡಿಗೇಡಿಗಳು ‘ಡಿಸಿ ಉಡುಪಿ'(DC Udupi) ಎಂಬ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನು ಸೃಷ್ಟಿಸಿದ್ದು, ಪ್ರೊಫೈಲಿಗೆ ಜಿಲ್ಲಾಧಿಕಾರಿಗಳ ಫೋಟೋವನ್ನು ಹಾಕಿದ್ದಾರೆ. ಅಲ್ಲದೆ, ಈ ನಕಲಿ ಖಾತೆಯ ಮೂಲಕ ಸಾರ್ವಜನಿಕರಿಗೆ ಸಂದೇಶ ಕಳುಹಿಸಿ ಹಣ […]
ಈ ರುಚಿಕರ ಸಲಾಡ್ ಗಳು ನಿಮ್ಮ ಆರೋಗ್ಯ ಕಾಪಾಡುತ್ತವೆ! ಒಮ್ಮೆ ಮಾಡಿ ನೋಡಿ: ನಮ್ಮ ಆರೋಗ್ಯ ನಮ್ಮ ಕೈಲಿ”ಅಂಕಣ
ಸುಂದರ ಜೀವನಶೈಲಿ, ನೆಮ್ಮದಿ, ಆರೋಗ್ಯ, ಆರೋಗ್ಯಯುತ ತಿಂಡಿ,ಬದುಕು, ಕ್ಷೇಮ ಸಮಾಚಾರ ಇತ್ಯಾದಿಗಳ ಕುರಿತು ಸಿಂಥಿಯಾ ಮೆಲ್ವಿನ್ ಮಸ್ಕರೇನ್ಹಸ್ ಮತ್ತು ಸಿಲ್ವಿಯಾ ಕೊಡ್ದೆರೋ ಅವರು ಪ್ರತೀ ಬುಧವಾರ “ನಮ್ಮ ಆರೋಗ್ಯ ನಮ್ಮ ಕೈಲಿ”ಎನ್ನುವ ಹೊಸ ಅಂಕಣದಲ್ಲಿ ನಿಮಗೆ ಹೇಳ್ತಾರೆ. ಇದು ಅಕ್ಕ-ತಂಗಿ ಬರೆಯುವ ಅಂಕಣ.ಇಂದಿನ ಅಂಕಣ ಬರೆದವರು ಸಿಂಥಿಯಾ ಮೆಲ್ವಿನ್ ತರಕಾರಿಗಳನ್ನು ಬೇಯಿಸಿ ತಿನ್ನುವುದಕ್ಕಿಂತ ಪ್ರತಿದಿನ ತಾಜಾ ಮತ್ತು ಹಸಿ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಸೇವಿಸುವುದರಿಂದ ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಆದರೆ ಎಲ್ಲಾ ತರಕಾರಿಗಳನ್ನು ಹಸಿಯಾಗಿ ತಿನ್ನಲು […]
ಕೊರೊನಾ ನಿಯಂತ್ರಣಕ್ಕೆ ಬಂದಿಲ್ಲ: ಕೆಲ ನಿರ್ಬಂಧಗಳ ಸಡಿಲಿಕೆಯೊಂದಿಗೆ ಲಾಕ್ ಡೌನ್ ಮುಂದುವರಿಕೆ; ಸಿಎಂ ಯಡಿಯೂರಪ್ಪ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದಿಲ್ಲ. ಆದ್ದರಿಂದ ಜೂನ್ 7ರ ಬಳಿಕ ಕೆಲವೊಂದು ನಿರ್ಬಂಧಗಳನ್ನು ಸಡಿಲಿಕೆ ಮಾಡಿಕೊಂಡು ಲಾಕ್ಡೌನ್ ಮುಂದುವರಿಸುತ್ತೇವೆ. ಈ ಬಗ್ಗೆ ಇಂದು ತಜ್ಞರೊಂದಿಗೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಹಳ್ಳಿಗಳಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿಲ್ಲ. ಆದ್ದರಿಂದ ಲಾಕ್ಡೌನ್ ಮುಂದುವರಿಯುತ್ತದೆ. ಉಳಿದಂತೆ ಗುರುವಾರದಿಂದ ಕೈಗಾರಿಕೆಗಳ ರಫ್ತು ಘಟಕಗಳಿಗೆ ಅನುಮತಿ ನೀಡಲಾಗುತ್ತದೆ. ಈ ಬಗ್ಗೆ ಚರ್ಚೆ ಬಳಿಕವೇ ಅಂತಿಮ ನಿರ್ಧಾರ ಮಾಡಲಾಗುವುದು ಎಂದರು. […]