ತುಳುನಾಡ ಪೊರ್ಲು ಸೇವಾ ಟ್ರಸ್ಟ್ ದ.ಕ ವತಿಯಿಂದ ಅಶಕ್ತರಿಗೆ ನೆರವು

ಬಂಟ್ವಾಳ: ಕಟೀಲು ಶ್ರೀದುರ್ಗಾಪರಮೇಶ್ವರಿ ತಾಯಿಯ ಅನುಗ್ರಹದಿಂದ, ಜನ ಸೇವೆಯೇ ಜನಾರ್ಧನ ಸೇವೆ ಎಂಬ ಉದ್ದೇಶವನ್ನಿಟ್ಟುಕೊಂಡು ಯುವ ಮನಸ್ಸುಗಳ ಸೇವಾ ಮನೋಭಾವನೆಯಿಂದ ಕಳೆದ 56 ತಿಂಗಳ ಹಿಂದೆ ಹುಟ್ಟಿಕೊಂಡ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ದ.ಕ  ಇಂದು ತನ್ನ 57ನೇ ತಿಂಗಳ ಸೇವಾ ಪಯಣದಲ್ಲಿ ಅಶಕ್ತರಿಗೆ ನೆರವಾಗುತ್ತಿದೆ. ಮಾ. 10 2021ರಂದು ನಡೆದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಬಂಟ್ವಾಳ ತಾಲೂಕಿನ ನಿತ್ಯಾನಂದ ನಗರ ಮುಗ್ದಲ್ ಗುಡ್ಡೆಯ ವಿನಯ್ ಆವರ ಕುಟುಂಬಕ್ಕೆ ತುಳುನಾಡ ಪೊರ್ಲು […]

ಕನ್ನಡ ಸಿನಿಮಾರಂಗಕ್ಕೆ ಬೇಕಿರುವುದು ಕೆಲಸ, ಪುಡ್ ಕಿಟ್ ಅಲ್ಲ: ಕೆಲವರು ಪಬ್ಲಿಸಿಟಿಗಾಗಿ ಈ ಕೆಲಸ ಮಾಡುತ್ತಿದ್ದಾರೆ; ರವಿಚಂದ್ರನ್ ಅಸಮಾಧಾನ

ಬೆಂಗಳೂರು: ಕನ್ನಡ ಸಿನಿಮಾರಂಗಕ್ಕೆ ಬೇಕಿರುವುದು ಕೆಲಸ, ಫುಡ್ ಕಿಟ್ ಅಲ್ಲ. ಕೆಲವು ಜನ ಕಷ್ಟ ಪಡುತ್ತಿರುವುದನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಆದರೆ ಅವರಿಗೆ ಕೆಲಸ ಬೇಕಾಗಿದೆ. ಫುಡ್ ಕಿಟ್ ನೀಡುವ ಮೂಲಕ ಅವರಿಗೆ ಅವಮಾನ ಮಾಡಲಾಗುತ್ತಿದೆ ಎಂದು ಹಿರಿಯ ನಟ ರವಿಚಂದ್ರನ್ ಅಸಮಾಧಾನ ಹೊರಹಾಕಿದ್ದಾರೆ. ಕೆಲವರು ಇದನ್ನು ಪಬ್ಲಿಸಿಟಿಗಾಗಿ ಮಾಡುತ್ತಿದ್ದಾರೆ. ಇದೆಲ್ಲಾ ಕಣ್ಣೊರೆಸುವ ತಂತ್ರವಾಗಿದೆ. ನಿಮಗೆ ದಾನ ಮಾಡುವ ಮನಸ್ಸಿದ್ದರೇ, ಅದನ್ನು ಪಬ್ಲಿಸಿಟಿ ಮಾಡುವುದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಲಾಕ್‌ಡೌನ್ ಅನ್ನು ಏಪ್ರಿಲ್‌ನಲ್ಲಿ ಮೊದಲೇ ಜಾರಿಗೊಳಿಸಬೇಕಾಗಿತ್ತು. ಜನರು […]

ತೈಲ ದರದಲ್ಲಿ ಮತ್ತೆ ಏರಿಕೆ: ಇಂದಿನ ಪೆಟ್ರೋಲ್, ಡೀಸೆಲ್ ದರ ಇಂತಿದೆ

ನವದೆಹಲಿ: ದೇಶಾದ್ಯಂತ ತೈಲ ದರದಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ ದರ 28 ರಿಂದ 29 ಪೈಸೆ ಮತ್ತು ಡೀಸೆಲ್ ದರ 26 ರಿಂದ 28 ಪೈಸೆ ಹೆಚ್ಚಳವಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 97.43ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 90.33ರೂ ಗೆ ಏರಿಕೆಯಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತೀ ಲೀಟರ್ ಪೆಟ್ರೋಲ್ ದರ 94.29ಕ್ಕೆ ಏರಿಕೆಯಾಗಿದ್ದು, ಪ್ರತೀ ಲೀಟರ್ ಡೀಸೆಲ್ ದರ 85.21ರೂ ಗೆ ಏರಿಕೆಯಾಗಿದೆ. ವಾಣಿಜ್ಯ ರಾಜಧಾನಿ ಮುಂಬೈನಲ್ಲಿ […]

ಮಹಾರಾಷ್ಟ್ರದಲ್ಲಿ ಜೂನ್ 15ರ ವರೆಗೆ ಲಾಕ್ ಡೌನ್ ಮುಂದುವರಿಕೆ

ಮುಂಬೈ: ಕೊರೊನಾ ಸರಪಳಿಯನ್ನು ಸಂಪೂರ್ಣವಾಗಿ ಮುರಿಯಲು ಜೂನ್ 15ರವರೆಗೆ ಮತ್ತೆ ಕಠಿಣ ಲಾಕ್ ಡೌನ್ ನಿರ್ಬಂಧವನ್ನು ವಿಸ್ತರಿಸಿ ಮಹಾರಾಷ್ಟ್ರ ಸರ್ಕಾರ ಆದೇಶ ಹೊರಡಿಸಿದೆ. ನಗರಪಾಲಿಕೆ, ಪುರಸಭೆ, ಜಿಲ್ಲೆಗಳಲ್ಲಿನ ಪಾಸಿಟಿವ್ ದರ ನೋಡಿಕೊಂಡು, ಆಕ್ಸಿಜನ್ ಬೆಡ್ ಗಳ ಲಭ್ಯತೆ ನೋಡಿಕೊಂಡು ನಿರ್ಬಂಧವನ್ನು ಕಠಿಣಗೊಳಿಸುವ ಅಥವಾ ಮುಂದುವರಿಸುವ ನಿರ್ಧಾರ ಕೈಗೊಳ್ಳಲು ಸರ್ಕಾರ ತೀರ್ಮಾನಿಸಿದೆ. ನಗರ ಪಾಲಿಕೆ ಮತ್ತು ಜಿಲ್ಲೆಗಳ ಸ್ಥಳೀಯ ಮಟ್ಟದಲ್ಲಿ ಕೊರೊನಾ ಪಾಸಿಟಿವ್ ದರ ಶೇ. 10ಕ್ಕಿಂತ ಕಡಿಮೆಯಿದ್ದರೆ ಅಲ್ಲಿ ಆಕ್ಸಿಜನ್ ಬೆಡ್ ಗಳ ಲಭ್ಯತೆ ಶೇಕಡಾ 40ಕ್ಕಿಂತ […]