ಉಡುಪಿ: ಕೊರೊನಾ ಹೆಚ್ಚಿರುವ ಪಂಚಾಯತ್ ಗಳಲ್ಲಿ ಪೂರ್ತಿ ಲಾಕ್ ಡೌನ್; ಯಾವುದಕ್ಕಿದೆ ಅವಕಾಶ?, ಯಾವುದಕ್ಕಿಲ್ಲ?

ಉಡುಪಿ (ಉಡುಪಿ ಎಕ್ಸ್‌ಪ್ರೆಸ್ ವರದಿ): ಜಿಲ್ಲೆಯಲ್ಲಿ 50ಕ್ಕಿಂತ ಅಧಿಕ ಸೋಂಕಿತರಿರುವ ಗ್ರಾಮಗಳಲ್ಲಿ ಜೂನ್ 2ರಿಂದ ಐದು ದಿನ ಸಂಪೂರ್ಣ ಲಾಕ್ ಡೌನ್ ಘೋಷಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಲಾಕ್ ಡೌನ್ ಘೋಷಿಸಲಾಗಿರುವ ಪಂಚಾಯತ್ ಗಳಲ್ಲಿ ನಾಳೆ (ಜೂನ್ 1) ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಲಾಕ್ ಡೌನ್ ಘೋಷಣೆಯಾಗಿರುವ ಗ್ರಾಮಸ್ಥರು ಐದು ದಿನಗಳಿಗೆ ಬೇಕಾಗುವ ಅಗತ್ಯ ವಸ್ತುಗಳನ್ನು ನಾಳೆಯೇ ಖರೀದಿಸಬೇಕು. ಉಳಿದಂತೆ ಮುಂದಿನ ಐದು ದಿನಗಳ ಕಾಲ ಪೂರ್ತಿ ಲಾಕ್ ಡೌನ್ ಇರಲಿದೆ. […]

ಉಡುಪಿ: ಇಂದಿನ ಕೊರೊನಾ ಪ್ರಕರಣಗಳ ವಿವರ ಇಂತಿವೆ

ಉಡುಪಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆ ಹಾದಿಯಲ್ಲಿ ಸಾಗುತ್ತಿದ್ದು, ಇಂದು (ಮೇ 31)  519 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಉಡುಪಿ ತಾಲೂಕಿನಲ್ಲಿ 231, ಕುಂದಾಪುರ ತಾಲೂಕಿನಲ್ಲಿ 174, ಕಾರ್ಕಳ ತಾಲೂಕಿನಲ್ಲಿ‌ 113 ಹಾಗೂ ಹೊರ ಜಿಲ್ಲೆಯ ಓರ್ವನಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರೊಂದಿಗೆ ಕೋವಿಡ್ ಸಕ್ರಿಯ ಪ್ರಕರಣಗಳ ಸಂಖ್ಯೆ 5092 ಏರಿಕೆಯಾಗಿದೆ. ಜಿಲ್ಲೆಯಲ್ಲಿ ಇಂದು ಕೂಡ ನಾಲ್ವರು ಕೊರೊನಾ ಸೋಂಕಿತರು ಮೃತಪಟ್ಟಿದ್ದು, ಉಡುಪಿ ತಾಲೂಕಿನ 78 ವರ್ಷದ ವೃದ್ಧೆ, 72 ವರ್ಷದ ವೃದ್ಧ, 49 ವರ್ಷದ […]

ಉಡುಪಿ: ಜೂನ್ 2ರಿಂದ ಸಂಪೂರ್ಣ ಲಾಕ್ ಡೌನ್ ಮಾಡಲಾಗುವ ಗ್ರಾಪಂಗಳ ವಿವರ ಇಂತಿವೆ

ಉಡುಪಿ (ಉಡುಪಿ ಎಕ್ಸ್‌ಪ್ರೆಸ್‌ ವರದಿ): ಜಿಲ್ಲೆಯಲ್ಲಿ 50ಕ್ಕಿಂತಲೂ ಹೆಚ್ಚು ಕೋವಿಡ್ ಸೋಂಕಿತರಿರುವ ಗ್ರಾಮಗಳನ್ನು ಬುಧವಾರದಿಂದ (ಜೂನ್ 2) ಐದು ದಿನಗಳ ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸಂಪೂರ್ಣ ಲಾಕ್ ಡೌನ್ ಮಾಡಲಾಗುವ ಗ್ರಾಮ ಪಂಚಾಯತ್ ಗಳ ವಿವರ ಈ ಕೆಳಕಂಡಂತಿವೆ: ಶಿರೂರು, ಜಡ್ಕಲ್, ಕಂಬದಕೋಣೆ, ನಾಡ, ಕಾವ್ರಾಡಿ, ಹೊಂಬಾಡಿ – ಮಂಡಾಡಿ, ಕೋಟೇಶ್ವರ, ಹಾಲಾಡಿ, ಇಡೂರು- ಕುಂಜ್ಞಾಡಿ, ಆಜ್ರಿ, ಆಲೂರು, 38 ಕಳತ್ತೂರು, 80 ಬಡಗಬೆಟ್ಟು, ಅಲೆವೂರು, ಪೆರ್ಡೂರು, ತೆಂಕನಿಡಿಯೂರು, ಬೊಮ್ಮರಬೆಟ್ಟು, ಬೆಳಪು, ಬೆಳ್ಳೆ, […]

ಉಡುಪಿ: 50ಕ್ಕಿಂತಲೂ ಹೆಚ್ಚು ಕೋವಿಡ್ ಸೋಂಕಿತರಿರುವ ಗ್ರಾಮಗಳಲ್ಲಿ ಐದು ದಿನ ಸಂಪೂರ್ಣ ಲಾಕ್ ಡೌನ್

ಉಡುಪಿ: ಜಿಲ್ಲೆಯಲ್ಲಿ 50ಕ್ಕಿಂತಲೂ ಹೆಚ್ಚು ಕೋವಿಡ್ ಸೋಂಕಿತರಿರುವ ಗ್ರಾಮವನ್ನು ಬುಧವಾರ (ಜೂನ್ 2) ದಿಂದ ಐದು ದಿನಗಳ ಸಂಪೂರ್ಣ ಲಾಕ್ ಡೌನ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.

ಕೆ.ಎಂ.ಎಫ್ ನಿಂದ ಶುರುವಾಗಲಿದೆ “ಹೆಚ್ಚು ಹಾಲು ಕುಡಿಯಿರಿ” ಯೋಜನೆ:ಏನಿದು?

ಮಂಗಳೂರು-ಉಡುಪಿ: ದಕ್ಷಿಣ ಕನ್ನಡ ಹಾಲು ಒಕ್ಕೂಟದಲ್ಲಿ ಹಾಲು ಉತ್ಪಾದನೆ ಅಧಿಕವಾಗಿದ್ದು, ಲಾಕ್‍ಡೌನ್ ಪರಿಣಾಮ ಶುಭ-ಸಮಾರಂಭ, ದೇವಸ್ಥಾನ, ವಿದ್ಯಾ ಸಂಸ್ಥೆ ಹಾಸ್ಟೆಲ್, ಹೋಟೆಲ್‍ಗಳಿಗೆ ನಿರ್ಬಂಧವಿರುವುದರಿಂದ ಹಾಲು ಮತ್ತು ಮೊಸರು ಮಾರಾಟದಲ್ಲಿ ನಿರೀಕ್ಷಿತ ಮಟ್ಟದ ಅಭಿವೃದ್ಧಿ ಸಾಧ್ಯವಾಗುತ್ತಿಲ್ಲ. ರಾಜ್ಯಾದ್ಯಂತ ಕೊರೋನಾ ಸೋಂಕಿನ 2ನೇ ಅಲೆಯು ತೀವ್ರವಾಗಿದ್ದು, ದಿನಾಂಕ 28.04.2021ರಿಂದ ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ, ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ ಕೂಡಾ ಹಾಲು ಉತ್ಪಾದಕರು ಸಂಘಗಳಿಗೆ ಗುಣಮಟ್ಟದ ಹಾಲನ್ನು ಪೂರೈಸುತ್ತಿದ್ದು, “ನಂದಿನಿ” ಬಳಗವು ಜೀವಭಯ ತೊರೆದು, ಗ್ರಾಹಕರಿಗೆ ಅಗತ್ಯ ಸೇವೆಗಳಲ್ಲೊಂದಾದ ಹಾಲು ಪೂರೈಸುವ ಮೂಲಕ […]