ಉಡುಪಿ: ಲಾಕ್ ಡೌನ್ ನಿಯಮ ಉಲ್ಲಂಘಿಸಿದ ವಾಹನದಲ್ಲಿ ಕಸ ಸಾಗಾಟ
ಉಡುಪಿ: ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುತ್ತಿದ್ದ ಗೂಡ್ಸ್ ವಾಹನವೊಂದನ್ನು ತಡೆಹಿಡಿದ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಅವರು, ಅದೇ ವಾಹನದವರಿಂದ ರಾ.ಹೆ. 66 ರ ಆಭರಣ ಮೋಟರ್ಸ್ ಎದುರಿನಿಂದ ಕಾಂಚನ ಮೋಟಾರ್ಸ್ ವರೆಗೆ ಹೆದ್ದಾರಿ ಬದಿಯಲ್ಲಿ ಬಿದ್ದಿದ್ದ ಕಸವನ್ನು ಸಂಗ್ರಹಿಸಿ ಅವರ ವಾಹನಕ್ಕೆ ತುಂಬಿಸಿ ಅಲೆವೂರಿನ ಡಂಪಿಂಗ್ ಯಾರ್ಡ್ ಗೆ ಸಾಗಿಸಿದರು. ಲಾಕ್ಡೌನ್ ಅವಧಿಯಲ್ಲಿ ಸಾರ್ವಜನಿಕರು ನಿಯಮ ಬಾಹಿರವಾಗಿ ವಾಹನಗಳಲ್ಲಿ ಸಂಚರಿಸದಂತೆ ಈ ಮೊದಲೇ ಸೂಚನೆ ನೀಡಲಾಗಿದೆ. ಇದನ್ನು ಉಲ್ಲಂಘಿಸಿದಲ್ಲಿ […]
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆ ನಡೆಸುವುದು ಅಗತ್ಯ: ಸಚಿವ ಸುರೇಶ್ ಕುಮಾರ್
ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯದ ಹಿತದೃಷ್ಟಿಯಿಂದ ದ್ವಿತೀಯ ಪಿಯು ಪರೀಕ್ಷೆಗಳನ್ನು ನಡೆಸುವುದು ಉತ್ತಮ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆ ಆಯೋಜಿಸಿದ್ದ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದರು. ವೃತ್ತಿಪರ ಶಿಕ್ಷಣಕ್ಕೆ ಅಣಿಯಾಗುವ ಹಂತದಲ್ಲಿರುವ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಯಾವುದಾದರೂ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಬೇಕಾದ್ದು ಅನಿವಾರ್ಯ. ದ್ವಿತೀಯ ಪಿಯು ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸುವ ಕಾರ್ಯ ಪೂರ್ಣಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಗಣನೀಯವಾಗಿ ಹೆಚ್ಚಿಸಲಾಗುತ್ತಿದೆ. ಅತ್ಯಂತ ಸುರಕ್ಷಿತವಾಗಿ ಪರೀಕ್ಷೆಗಳನ್ನು […]
ಕಾರ್ಕಳ ತಾಲೂಕು ಪತ್ರಕರ್ತರಿಗೆ ಕಿಟ್ ವಿತರಣೆ
ಕಾರ್ಕಳ: ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ರಿ. ಕಾರ್ಕಳ ಇದರ ಅಧ್ಯಕ್ಷರಾದ ನೆಮೀರಾಜ್ ಅರಿಗ ರವರು ಕಾರ್ಕಳ ದ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಪತ್ರಕರ್ತರಿಗೆ ಕಿಟ್ ವಿತರಣಾ ಸಮಾರಂಭ ಇಂದು ನಡೆಯಿತು. ಕರ್ನಾಟಕ ಜೈನ್ ಸ್ವಯಂ ಸೇವಾ ಚಾರಿಟೇಬಲ್ ಟ್ರಸ್ಟ್ ಕಾರ್ಕಳ ಇದರ ಅಧ್ಯಕ್ಷರಾದ ನೆಮೀರಾಜ್ ಅರಿಗ ಮಾತನಾಡಿ ವಿದ್ಯುತ್, ರಸ್ತೆ ಹಾಗೂ, ನೀರಾವರಿ ವ್ಯವಸ್ಥೆಗಳು ಒಂದು ತಾಲೂಕಿನ ಅಭಿವೃದ್ಧಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಅದರಲ್ಲಿ ಮಾಧ್ಯಮ ಪ್ರಮುಖ ಪಾತ್ರ ವಹಿಸುತ್ತದೆ ಎಂದರು. […]
ಉಡುಪಿ: ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಉಚಿತ ಟೆಲಿ ಸಮಾಲೋಚನೆ ಸೇವೆ
ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕೋವಿಡ್ ಕಾರ್ಯಪಡೆ ಹಾಗೂ ಎನ್ ಜಿಒ ಸಮನ್ವಯ ಕೇಂದ್ರದ ಸಹಯೋಗದಲ್ಲಿ ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ನಲ್ಲಿರುವವರಿಗೆ ಉಚಿತ ಟೆಲಿ ಸಮಾಲೋಚನೆ ಸೇವೆಯನ್ನು ಆರಂಭಿಸಲಾಗಿದ್ದು, ಉಚಿತ ವೈದ್ಯಕೀಯ ಸಲಹೆಗಳನ್ನು ನೀಡುವ ತಜ್ಞ ವೈದ್ಯರ ಹಾಗೂ ವೈದ್ಯಕೀಯ ಪರಿಣಿತರ ಹೆಸರು, ಮೊಬೈಲ್ ಸಂಖ್ಯೆ ಹಾಗೂ ಅವರು ಸೇವೆಗೆ ಲಭ್ಯವಿರುವ ಅವಧಿ ಈ ಕೆಳಕಂಡಂತಿವೆ.