ಉಡುಪಿ: ಲಾಕ್ ಡೌನ್ ಅವಧಿಯಲ್ಲಿ ಬೇಕರಿಗಳಿಗೂ ಉತ್ಪನ್ನಗಳನ್ನು ಮಾರಾಟ ಮಾಡಲು ಅವಕಾಶ ನೀಡಿ; ಆಗ್ರಹ

ಉಡುಪಿ: ಕೋವಿಡ್ ಲಾಕ್ ಡೌನ್ ನಿಂದ ಇತರ ವಲಯಗಳಂತೆ ಬೇಕರಿ ಉತ್ಪನ್ನ ಮಾರಾಟಗಾರರು‌ ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಬೇಕರಿ ಉತ್ಪನ್ನಗಳನ್ನು ಮಾರಾಟ ಮಾಡಲು ಬೇಕರಿಗಳಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಉಡುಪಿ ಜಿಲ್ಲಾ ಬೇಕರಿ ಮತ್ತು ಖಾದ್ಯ ತಿನಸು ತಯಾರಿಕಾ ಹಾಗೂ ಮಾರಾಟ ಸಂಘವು‌ ಉಡುಪಿ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದೆ. ಜಿಲ್ಲೆಯಲ್ಲಿ 1,500ಕ್ಕೂ ಅಧಿಕ ಬೇಕರಿ ಉತ್ಪನ್ನ ಮಾರಾಟ ಮಾಡುವ ಅಂಗಡಿಗಳಿವೆ. ಹಾಗೆ, ಸುಮಾರು 75ಕ್ಕೂ ಹೆಚ್ಚು ಬೇಕರಿ ಉತ್ಪನ್ನಗಳನ್ನು ಉತ್ಪಾದಿಸುವ […]

ರಾಜ್ಯದಲ್ಲಿ ಜೂನ್ 7ರ ವರೆಗೆ ಮತ್ತೆ ಲಾಕ್ ಡೌನ್: ಸಿಎಂ ಯಡಿಯೂರಪ್ಪ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಅವಧಿಯನ್ನು ಜೂನ್ 7ರವರೆಗೆ ಮತ್ತೆ ಹದಿನಾಲ್ಕು ದಿನಗಳ ಮುಂದುವರಿಸಿ ಮುಖ್ಯಮಂತ್ರಿ ಬಿ ಎಸ್. ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಈ ಕುರಿತು ಮಾತನಾಡಿದ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಹಳ್ಳಿಗಳಿಗೂ ವಿಸ್ತರಣೆಗೊಂಡಿದೆ, ಆದುದರಿಂದ ಸೋಂಕಿನ ಪ್ರಕರಣಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ವಿಸ್ತರಣೆ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಕುಂದಾಪುರ: ಕ್ವಾರಂಟೈನ್ ನಿಯಮ ಉಲ್ಲಂಘನೆ; ಕೊರೊನಾ ಸೋಂಕಿತನ ವಿರುದ್ಧ ಎಫ್ ಐಆರ್ ದಾಖಲು

ಉಡುಪಿ: ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ಕೊರೊನಾ ಸೋಂಕಿತನ ವಿರುದ್ಧ ಎಫ್ ಐಆರ್  ದಾಖಲಾದ ಘಟನೆ ಕುಂದಾಪುರ ತಾಲೂಕಿನ ಕಾವ್ರಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾವ್ರಾಡಿ ಗ್ರಾಮದಲ್ಲಿ ಇಂದು ನಡೆದಿದೆ. ಕಾವ್ರಾಡಿ ಗ್ರಾಮದ ಕೊರೊನಾ ಪಾಸಿಟಿವ್ ಹೋಮ್ ಐಸೋಲೇಶನ್ ನಲ್ಲಿದ್ದ ಮಹಮ್ಮದ್ ಜಾಫರ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಮಹಮ್ಮದ್ ಜಾಫರ್ ಕ್ವಾರಂಟೈನ್ ನಿಯಮ‌ ಉಲ್ಲಂಘಿಸಿ ಹೊರಗಡೆ ತಿರುಗಾಡುತ್ತಿದ್ದರು ಎಂಬ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಕುಂದಾಪುರ ಸಹಾಯಕ ಕಮಿಷನರ್ ಕಾವ್ರಾಡಿ ಗ್ರಾಮಕ್ಕೆ ಇಂದು ಭೇಟಿ ನೀಡಿ ಪರಿಶೀಲಿಸಿದಾಗ […]

ಪತಿ ಕೋವಿಡ್ ನಿಂದ ಮೃತಪಟ್ಟ ಬೆನ್ನಲ್ಲೇ ಮೂರು ತಿಂಗಳ ಗರ್ಭಿಣಿ ಪತ್ನಿ ಕೂಡ ನೇಣಿಗೆ ಶರಣು

ರಾಮನಗರ: ಪತಿ ಕೊರೊನಾದಿಂದ ಮೃತಪಟ್ಟ ಬೆನ್ನಲ್ಲೇ ಮನನೊಂದ ಮೂರು ತಿಂಗಳ ಗರ್ಭಿಣಿ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕನಕಪುರದ ಬಸವೇಶ್ವರ ನಗರದಲ್ಲಿ ನಡೆದಿದೆ. ಕನಕಪುರ ಬೆಸ್ಕಾಂ ವಿಭಾಗೀಯ ಕಚೇರಿಯಲ್ಲಿ ಸಹಾಯಕರಾಗಿದ್ದ ನಂದಿನಿ (28) ಆತ್ಮಹತ್ಯೆಗೆ ಶರಣಾದ ಗರ್ಭಿಣಿ. ಎರಡು ವರ್ಷಗಳ ಹಿಂದೆ ಮೈಸೂರು ಮೂಲದ ಉದ್ಯಮಿ ಸತೀಶ್ ಎಂಬವರನ್ನು ನಂದಿನಿ ಪ್ರೀತಿಸಿ ವಿವಾಹವಾಗಿದ್ದರು. ಕಳೆದ ವಾರ ಸತೀಶ್ ಅವರ ತಾಯಿ ಕೊರೊನಾ ಸೋಂಕಿಗೆ ಬಲಿಯಾಗಿದ್ದರು. ಇದರ ಬೆನ್ನಲ್ಲೇ ಸತೀಶ್ ಅವರಿಗೂ ಕೊರೊನಾ ಸೋಂಕು ಕಾಣಿಕೊಂಡಿದ್ದು, ಬಳಿಕ ರೋಗ […]

ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದವರಿಗೆ ಆಹಾರ ಸಾಮಗ್ರಿಗಳ ಕಿಟ್ ವಿತರಣೆ

ಉಡುಪಿ: ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ ಬಂಟಕಲ್ಲು- ಮಣಿಪಾಲ, ರಾಜಾಪುರ ಸಾರಸ್ವತ ಬ್ರಾಹ್ಮಣ ಮಹಿಳಾ ವೇದಿಕೆ, ಮಣಿಪಾಲ ಮತ್ತು ಶ್ರೀ ದುರ್ಗಾಪರಮೇಶ್ವರಿ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ ಪರ್ಕಳ ಇದರ ಸಹಭಾಗಿತ್ವದಲ್ಲಿ ಕೊರೊನಾ ಲಾಕ್ ಡೌನ್ ನಿಂದಾಗಿ ಯಾವುದೇ ಆದಾಯ ವಿಲ್ಲದೆ ಆರ್ಥಿಕ ಸಂಕಟಕ್ಕೀಡಾಗಿರುವ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರಿಗೆ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಉಡುಪಿ ಸುತ್ತ ಮುತ್ತಲಿನ ಎಲ್ಲಾ ಗ್ರಾಮಗಳಿಂದ ಮಾಹಿತಿ ಕಲೆ ಹಾಕಿ ಸುಮಾರು 100ಕ್ಕೂ ಅಧಿಕ […]